ಮೋದಿ ಪೋಟೋ ಇರುವ ಬಟ್ಟೆಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ನಂತರ ಮೋದಿಯವರ ಮೇಲೆ ಜನರಿಗೆ ಭರವಸೆಯ ಜೊತೆಗೆ ವಿಶೇಷ ಪ್ರೀತಿ ಶುರುವಾಗಿದೆ. ಇಷ್ಟು ದಿನ ಮೋದಿಯವರ ಕಟೌಟ್ ಗಳನ್ನ ಹಾಕಿ ಮೋದಿ ಮೇಲಿನ ಪ್ರೀತಿಯನ್ನ ವ್ಯಕ್ತಪಡಿಸುತ್ತಿದ್ದ ಜನರು ಇದೀಗಾ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮೋದಿಯವರ ಫೋಟೋ ಇರುವ ಬಟ್ಟೆ ಹಾಕಲು ಮುಂದಾಗಿದ್ದಾರೆ. ಮೋದಿ ಬಟ್ಟೆಗೆ ಫುಲ್ ಡಿಮ್ಯಾಂಡ್ ಬಂದಿದೆ. ಹೀಗಾಗಿ ನಗರದ ಚಿಕ್ಕಪೇಟೆಗೆ ಮೋದಿ ಫೋಟೋ ಇರುವ ಪಾಲಿಸ್ಟರ್ ಫ್ಯಾಬ್ರಿಕ್ ಬಟ್ಟೆಗಳು ಎಂಟ್ರಿಕೊಟ್ಟಿವೆ.
ಬೆಂಗಳೂರಿನಲ್ಲಿ ಮೋದಿ ಮೇನಿಯಾ ಜೋರಾಗಿದ್ದು, ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಟಾಪನೆಯ ನಂತರ, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮೋದಿ ಕ್ರೇಜ್ ಜಾಸ್ತಿಯಾಗಿದೆ. ಹೀಗಾಗಿ ನಗರದ ಚಿಕ್ಕಪೇಟೆಗೆ ಮೋದಿ ಫೋಟೋ ಇರುವ ಪಾಲಿಸ್ಟರ್ ಫ್ಯಾಬ್ರಿಕ್ ಬಟ್ಟೆ ಎಂಟ್ರಿಕೊಟ್ಟಿದ್ದು, ಬಟ್ಟೆಯಲ್ಲಿ 3 ಡಿಸೈನ್ ಗಳು ಜನರನ್ನ ಸೆಳೆಯುತ್ತಿವೆ. ಅದ್ರಲ್ಲಿ ಮೋದಿ ಕೈ ಬೀಸುವ, ಕಮಲದ ಮೇಲಿರುವ ಮೋದಿ ಡಿಸೈನ್ ಬಟ್ಟೆಯನ್ನ ವೇಸ್ ಕೋಟ್ ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಅಲ್ಲದೇ ಡಿಜಿಟಲ್ ಪ್ರಿಂಟ್ ಇರುವ ಮೋದಿ ಬಟ್ಟೆಗೂ ಡಿಮ್ಯಾಂಡ್ ಇದ್ದು, ಜುಬ್ಬಾ, ವಾಸ್ ಕೋಟ್ಗಳಿಗೆ ಜನರು ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ವ್ಯಾಪಾರಸ್ಥರು ಜನರು ಡಿಮ್ಯಾಂಡ್ ಮಾಡುತ್ತಿರುವ ಮೋದಿ ಫೋಟೋ ಇರುವ ಬಟ್ಟೆಯನ್ನ ಅಹಮದಬಾದ್, ಬಾಂಬೆ ಸೇರಿದಂತೆ ವಿವಿಧ ಭಾಗಗಳಿಂದ ತರಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಎಂಪಿ ಎಲೆಕ್ಷನ್ ಹತ್ರ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಮೋದಿ ಹವಾ ಇನ್ನು ಜೋರಾಗುವ ಸಾಧ್ಯತೆಗಳು ಕಾಣ್ತಾ ಇವೆ ಎಂದು ವ್ಯಾಪಾರಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.