ಬೆಂಗಳೂರು: ಜೆಡಿಎಸ್ ಕಾಂಗ್ರೆಸ್ನ ಬಿ ಟೀಂ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ರಾಜ್ಯ ಜೆಡಿಎಸ್ ಘಟಕ ಆಕ್ರೋಶ ಹೊರ ಹಾಕಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ಪ್ರಧಾನಿ ನರೇಂದ್ರ ಮೋದಿ ಮಾತಿಗೆ ಟ್ವೀಟ್ ಮೂಲಕ ತಿರುಗೇಟು ನೀಡಿದೆ. “ಬಿಜೆಪಿ ಕರ್ನಾಟಕ ರಾಜ್ಯದಲ್ಲಿ ಪಾರದರ್ಶಕ ಆಡಳಿತ ನಡೆಸಿದ ಬಗ್ಗೆ ರಾಜ್ಯದ ಜನರು ಚೆನ್ನಾಗಿ ಗಮನಿಸಿದ್ದಾರೆ. ಡಬಲ್ ಇಂಜಿನ್ ಸರಕಾರ ಬಂದ್ಮೇಲೆ ರಾಜ್ಯಕ್ಕೆ ಟ್ರಬಲೇ ಹೆಚ್ಚು.
ಸುಸ್ಥಿರ ಆಡಳಿತ ಬಗ್ಗೆ ಮಾತಾಡಿದ ನರೇಂದ್ರ ಮೋದಿ ರಾಜ್ಯವನ್ನು ಕರೆಪ್ಶನ್ ಕ್ಯಾಪಿಟಲ್ ಮಾಡಿದವರ ಬಗ್ಗೆ ಮಾತಾಡಿಲ್ಲ ಯಾಕೆ?” ಎಂದು ಬಿಜೆಪಿ ಮತ್ತು ಮೋದಿಯನ್ನು ಪ್ರಶ್ನೆ ಮಾಡಿದೆ. ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಹೊರಗಿನಿಂದ ನೋಡಲು ಮಾತ್ರ ಬೇರೆ-ಬೇರೆ ಆದರೆ ಆಂತರಿಕವಾಗಿ ಒಂದೇ”. “ಜೆಡಿಎಸ್ಗೆ ನೀಡುವ ಒಂದೊಂದು ವೋಟು ಸಹ ಕಾಂಗ್ರೆಸ್ಗೆ ಸೇರುತ್ತದೆ”. “ಜೆಡಿಎಸ್ ಕಾಂಗ್ರೆಸ್ನ ಬಿ ಟೀಂ” ಎಂದು ವಾಗ್ದಾಳಿ ನಡೆಸಿದರು.