ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ (95) ಅವರ ಮನಮೋಹಕ ಬ್ಯಾಟಿಂಗ್ ಮತ್ತು ಮೊಹಮ್ಮದ್ ಶಮಿ (54ಕ್ಕೆ 5) ಅವರ ಭರ್ಜರಿ ಬೌಲಿಂಗ್ ಮೂಲಕ ಮೇಲುಗೈ ಸಾಧಿಸಿದ ಟೀಮ್ ಇಂಡಿಯಾ ಅಪಾಯಕಾರಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ಗಳಿಂದ ಮಣಿಸಿ ಅಂಕಪಟ್ಟಿಯ ಅಗ್ರಸ್ಥಾನಕ್ಕೇರಿದೆ. ಅಷ್ಟೇ ಅಲ್ಲದೆ ಒಟ್ಟಾರೆ 10 ಅಂಕಗಳೊಂದಿಗೆ ಸೆಮಿಫೈನಲ್ಸ್ನಲ್ಲಿ ತನ್ನ ಸ್ಥಾನವನ್ನು ಬಹುತೇಕ ಭದ್ರ ಪಡಿಸಿಕೊಂಡಿದೆ.
ಗೆಲುವಿಗೆ 274 ರನ್ ಗುರಿ ಪಡೆದ ಟೀಮ್ ಇಂಡಿಯಾ ಹಾದಿ ಅಷ್ಟು ಸುಲಭವಾಗಿರಲಿಲ್ಲ. ರೋಹಿತ್ ಶರ್ಮಾ (46) ಮತ್ತು ಶುಭಮನ್ ಗಿಲ್ (26) ಸ್ಪೋಟಕ ಆರಂಭ ಒದಗಿಸಿದರು. ಆದರೂ ಇನಿಂಗ್ಸ್ ಮಧ್ಯದಲ್ಲಿ ಸತತ ವಿಕೆಟ್ ಕಳೆದುಕೊಂಡಿತ್ತು ಚೇಸಿಂಗ್ ವೇಳೆ ಭಾರತ ತಂಡಕ್ಕೆ ಒತ್ತಡಕ್ಕೆ ಸಿಲುಕುವಂತೆ ಮಾಡಿತು.ಆದರೆ, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಲೆಕ್ಕಾಚಾರದ ಬ್ಯಾಟಿಂಗ್ ನಡೆಸಿದರು. ಮತ್ತೊಮ್ಮೆ ಸಿಕ್ಸರ್ ಬಾರಿಸಿ ಶತಕದೊಂದಿಗೆ ತಂಡವನ್ನು ಜಯದ ದಡ ಮುಟ್ಟಿಸುವ ಪ್ರಯತ್ನದಲ್ಲಿ ವಿಫಲರಾದರು. 48 ಓವರ್ಗಳಲ್ಲಿ 274 ರನ್ ಬಾರಿಸಿದ ಭಾರತ ಗೆಲುವಿನ ನಗಾರಿ ಬಾರಿಸಿತು. ಐದು ವಿಕೆಟ್ ಪಡೆದ ಶಮಿ ಪಂದ್ಯಶ್ರೇಷ್ಠ ಗೌರವ ಪಡೆದರು.