ದಮಾಸ್ಕಸ್ : ಬಂಡುಕೋರರು ರಾಜಧಾನಿ ದಮಾಸ್ಕಸ್ ನಗರವನ್ನು ವಶಪಡಿಸಿಕೊಳ್ಳುತ್ತಿದ್ದಂತೆ ಪ್ರಧಾನಿ ಬಶರ್ ಅಲ್–ಅಸ್ಸಾದ್ ಪಲಾಯನಗೊಂಡಿದ್ದಾರೆ. ಇದೀಗ ಸಶಸ್ತ್ರ ಬಂಡುಕೋರರು ಸಿರಿಯಾದ ಹಂಗಾಮಿ ಸರಕಾರದ ಪ್ರಧಾನಿಯಾಗಿ ಮೊಹಮ್ಮದ್ ಅಲ್ ಬಶೀರ್ ಅವರನ್ನು ನೇಮಿಸಿದ್ದಾರೆಂದು ಸರಕಾರಿ ಮಾಧ್ಯಮವೊಂದು ವರದಿ ಮಾಡಿದೆ.
ಈ ಬಗ್ಗೆ ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯು ಬಶೀರ್ ಅವರ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ. ಮಾರ್ಚ್ 1ರವರೆಗೆ ಹಂಗಾಮಿ ಸರಕಾರದ ನೇತೃತ್ವವನ್ನು ವಹಿಸುವ ಹೊಣೆಯನ್ನು ಜನರಲ್ ಕಮಾಂಡ್ ನಮಗೆ ವಹಿಸಿದೆ ’’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.