ವರ್ಷದಲ್ಲಿ ಒಟ್ಟು 24 ಏಕಾದಶಿ ಬರುತ್ತದೆ, ಅದರಲ್ಲಿ ಪ್ರತಿಯೊಂದು ಏಕಾದಶಿ ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಮೇ 1ರಂದು ಮೋಹಿನಿ ಏಕಾದಶಿಯನ್ನು ಆಚರಿಸಲಾಗುವುದು. ಏಕಾದಶಿ ಶ್ರೀ ವಿಷ್ಣುವಿನ ಆರಾಧನೆಗೆ ಮೀಸಲಾದ ದಿನವಾಗಿದೆ. ಈ ದಿನ ಯಾರು ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡುತ್ತಾರೋ ಅವರಿಗೆ ಮೋಕ್ಷ ಸಿಗುವುದು, ಕಷ್ಟಗಳು ದೂರಾಗುವುದು ಎಂಬ ನಂಬಿಕೆ.
ಮೋಹಿನಿ ಏಕಾದಶಿಯನ್ನು ಪ್ರತಿವರ್ಷ ವೈಶಾಖ ಮಾಸದ ಶುಕ್ಲಪಕ್ಷದ ಏಕಾದಶಿಯಂದು ಆಚರಿಸಲಾಗುವುದು. ಮೇ 1ರಂದು ಆಚರಿಸುವ ಮೋಹಿನಿ ಏಕಾದಶಿಯ ವಿಶೇಷತೆಯೇನು? ಇದರ ಪೂಜಾವಿಧಿಗಳೇನು, ವ್ರತ ನಿಯಮಗಳೇನು ಎಂದು ನೋಡೋಣ ಬನ್ನಿ: ಮೋಹಿನಿ ಏಕಾದಶಿ ದಿನಾಂಕ ಮತ್ತು ತಿಥಿ ಮೋಹಿನಿ ಏಕಾದಶಿ ತಿಥಿ ಪ್ರಾರಂಭ: ಏಪ್ರಿಲ್ 30 ರಾತ್ರಿ 08:28ಕ್ಕೆ ಪ್ರಾರಂಭ ಮೋಹಿನಿ ಏಕಾದಶಿ ತಿಥಿ ಮುಕ್ತಾಯ: ಮೇ 01 ರಾತ್ರಿ 10:09ಕ್ಕೆ ಮುಕ್ತಾಯವಾಗುವುದು ಪಾರಣ ಸಮಯ: ಮೇ 2ರಂದು ಬೆಳಗ್ಗೆ 5:19ಕ್ಕೆ
ಮೋಹಿನಿ ಏಕಾದಶಿಯ ಮಹತ್ವ- * ಈ ಏಕಾದಶಿಯ ಮಹತ್ವವೆಂದರೆ ಈ ದಿನ ಯಾರು ಉಪವಾಸವಿದ್ದು ಏಕಾದಶಿ ವ್ರತವನ್ನು ಆಚರಿಸುತ್ತಾರೋ ಅವರು ಎಲ್ಲಾ ಪಾಗಳಿಂದ ಮುಕ್ತರಾಗುತ್ತಾರೆ. * ಧಾರ್ಮಿಕ ನಂಬಿಕೆಯ ಪ್ರಕಾರ ಯಾರು ಮೋಹಿನಿ ಏಕಾದಶಿಯನ್ನು ಆಚರಿಸುತ್ತಾರೋ ಅವರಿಗೆ ಮೋಕ್ಷ ಸಿಗಲಿದೆ. * ಈ ದಿನದಂದು ಉಪವಾಸದ ಕಥೆಯನ್ನು ಹೇಳುವುದರಿಂದ ಅಥವಾ ಕೇಳುವುದರಿಂದ ಸಾವಿ ಗೋವಿಗೆ ಆಹಾರ ದಾನ ಮಾಡಿದ ಪುಣ್ಯ ಲಭಿಸುವುದು. * ಯಾರು ಈ ದಿನ ಶ್ರೀ ವಿಷ್ಣು-ಲಕ್ಷ್ಮಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೋ ಅವರ ಮನೆಯಲ್ಲಿ ಸಂತೋಷ, ನೆಮ್ಮದಿ, ಸಂಪತ್ತು ವೃದ್ಧಿಸುವುದು.
ಮೋಹಿನಿ ಏಕಾದಶಿ ಉಪವಾಸ ವಿಧಾನ- * ಈ ಪುಣ್ಯದಿನದಂದು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ, ಸ್ನಾನದ ನೀರಿಗೆ ಗಂಗಾ ಜಲ ಸೇರಿಸಿ * ಸ್ನಾನದ ನಂತರ ಮಡಿ ಬಟ್ಟೆಗಳನ್ನು ಧರಿಸಿ. * ಮನೆಯನ್ನು ಒಂದು ದಿನ ಮೊದಲೇ ಸ್ವಚ್ಛಗೊಳಿಸಿ. ಸ್ನಾನ ಮಾಡಿದ ಬಳಿಕ ಮನೆಯ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ತುಪ್ಪದ ದೀಪವನ್ನು ಬೆಳಗಿಸಿ * ಶ್ರೀ ವಿಷ್ಣುವಿಗೆ ಹೊಸ ಬಟ್ಟೆ ಅರ್ಪಿಸಿ. * ಭಗವಾನ್ ಶ್ರೀ ವಿಷ್ಣುವಿಗೆ ಹಳದಿ ಹೂಗಳು ಹಾಗೂ ಹಳದಿ ಬಣ್ಣಗಳನ್ನು ಅರ್ಪಿಸಿ. * ಶ್ರೀ ವಿಷ್ಣುವಿನ ಪೂಜೆಯಲ್ಲಿ ತುಳಸಿ ಕಡ್ಡಾಯವಾಗಿ ಬಳಸಬೇಕು. ತುಳಸಿಯನ್ನು ವಿಷ್ಣುವಿನ ನೈವೇದ್ಯಯಲ್ಲೂ ಸೇರಿಸಬೇಕು. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ವಿಷ್ಣುವು ತುಳಸಿ ಇಲ್ಲದೆ ನೈವೇದ್ಯ ಸ್ವೀಕರಿಸುವುದಿಲ್ಲ.
ಪೌರಾಣಿಕ ಕತೆ ರಾಕ್ಷಸರು ಹಾಗೂ ದೇವತೆಗಳ ನಡುವೆ ಸಮುದ್ರ ಮಂಥನ ನಡೆಯುತ್ತಿರುವಾಗ ಅಮೃತ ಉಕ್ಕುತ್ತದೆ. ಅಮೃತವನ್ನು ಕುಡಿಯಲು ರಾಕ್ಷಸರು ಹಾಗೂ ದೇವತೆಗಳ ನಡುವೆ ಯುದ್ಧ ನಡೆಯುವುದು. ಆವಾಗ ದೇವತೆಗಳು ರಾಕ್ಷಸರಿಂದ ನಮ್ಮನ್ನು ರಕ್ಷಿಸುವಂತೆ ಕೋರಿ ಶ್ರೀವಿಷ್ಣುವಿನ ಮೊರೆ ಹೋಗುತ್ತಾರೆ. ಆವಾಗ ಶ್ರೀ ವಿಷ್ಣು ಮೋಹಿನಿಯ ರೂಪ ತಾಳಿ, ತನ್ನ ಸೌಂದರ್ಯದಿಂದ ರಾಕ್ಷಸರನ್ನು ಭ್ರಮೆಗೆ ಒಳಗಾಗುವಂತೆ ಮಾಡಿ ದೇವತೆಗಳಿಗೆ ಅಮೃತ ಸಿಗುವಂತೆ ಮಾಡುತ್ತಾನೆ. ಶ್ರೀ ವಿಷ್ಣು ಮೋಹಿನಿ ರೂಪ ತಾಳಿದಾಗ ಹರಹರಿಗೆ ಜನಿಸಿದ ಪುತ್ರನೇ ಅಯ್ಯಪ್ಪಸ್ವಾಮಿ