ಬೆಂಗಳೂರು:- ವಿದ್ಯುತ್ ಬಳಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದ್ದು, 100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸೋರಿಗೆ ಬಂಪರ್ ಸುದ್ದಿ ಹೊರ ಬಿದ್ದಿದೆ.
ಇಂದಿನಿಂದ ಕೆಇಆರ್ಸಿ ನೂತನ ವಿದ್ಯುತ್ ಜಾರಿಗೆ ಬರಲಿದ್ದು, ಆ ಮೂಲಕ ನೂತನ ವಿದ್ಯುತ್ ದರ ಪರಿಷ್ಕರಣೆಯಾಗಲಿದೆ. 100 ಯೂನಿಟ್ಗಿಂತ ಹೆಚ್ಚಾಗಿ ವಿದ್ಯುತ್ ಬಳಕೆ ಮಾಡೋ ಗ್ರಾಹಕರಿಗೆ ಯುನಿಟ್ಗೆ ಒಂದು ರೂಪಾಯಿಗೆ 10 ಪೈಸೆ ಕಡಿತಗೊಳ್ಳಿದೆ.
ಗೃಹ ಬಳಕೆಯ 100 ಯೂನಿಟ್ಗಳಿಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರಿಗೆ ಪ್ರತಿ ಯೂನಿಟ್ ಮೇಲೆ 1.10 ರೂ. ಇಳಿಕೆಯಾಗಿದೆ. ಗೃಹ ಬಳಕೆಯಲ್ಲಿ ಪ್ರಸ್ತುತ ಪ್ರತಿ ಯೂನಿಟ್ ದರ 7 ರೂ. ಇತ್ತು. ಈಗ ಗೃಹ ಬಳಕೆಯ ಶುಲ್ಕದ ಸ್ಲ್ಯಾಬ್ ರದ್ದು ಮಾಡಲಾಗಿದೆ. ಗ್ರಾಹಕರು ಎಷ್ಟೇ ಯೂನಿಟ್ ಖರ್ಚು ಮಾಡಿದರೆ ಪ್ರತಿ ಯೂನಿಟ್ಗೆ 5.90 ರೂ. ದರ ನಿಗದಿ ಮಾಡಲಾಗಿದೆ.
ಸರ್ಕಾರ 200 ಯೂನಿಟ್ ಒಳಗೆ ಬಳಸುವವರಿಗೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುವುದರಿಂದ ಈ ಸೌಲಭ್ಯಕ್ಕೆ ಒಳಪಟ್ಟವರಿಗೆ ದರ ಇಳಿಕೆಯ ಪ್ರಯೋಜನ ಸಿಗುವುದಿಲ್ಲ.ಈ ಯೋಜನೆಯ ಸೌಲಭ್ಯ ಪಡೆಯದವರು ಹಾಗೂ ತಿಂಗಳಿಗೆ 100 ಯೂನಿಟ್ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಇದರ ಲಾಭ ಸಿಗಲಿದೆ