PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

Shilpa Shetty: ಸತ್ಯವತಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ನಟಿ ಶಿಲ್ಪಾ ಶೆಟ್ಟಿ

March 22, 2023

ತಮಿಳುನಾಡಿನ ಪಟಾಕಿ ಗೋದಾಮಿನಲ್ಲಿ ಭಾರಿ ಸ್ಫೋಟ: 7 ನಿಧನ

March 22, 2023

ಕೋವಿಡ್ ಪ್ರಕರಣ ಸಂಖೆ ಹೆಚ್ಚಳ: ಮೋದಿಯಿಂದ ಉನ್ನತ ಮಟ್ಟದ ಸಭೆ

March 22, 2023
Facebook Twitter Instagram
Wednesday, March 22
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » ‘ಪಾದರಾಯ’ ಸಿನಿಮಾ ಹೆಸರಿನಲ್ಲಿ ಹಣದ ದಂಧೆ: ಎಚ್ಚರಿಕೆ ನೀಡಿದ ಚಕ್ರವರ್ತಿ ಚಂದ್ರಚೂಡ
ಚಲನಚಿತ್ರ Prajatv KannadaBy Prajatv KannadaFebruary 26, 2023

‘ಪಾದರಾಯ’ ಸಿನಿಮಾ ಹೆಸರಿನಲ್ಲಿ ಹಣದ ದಂಧೆ: ಎಚ್ಚರಿಕೆ ನೀಡಿದ ಚಕ್ರವರ್ತಿ ಚಂದ್ರಚೂಡ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ನಟ ಕಂ ನಿರ್ದೇಶಕ ನಾಗಶೇಖರ್ ಮತ್ತು ಚಕ್ರವರ್ತಿ ಚಂದ್ರಚೂಡ ಕಾಂಬಿನೇಷನ್ ನಲ್ಲಿ ‘ಪಾದರಾಯ’ ಹೆಸರಿನ ಸಿನಿಮಾ ಮೂಡಿ ಬರುತ್ತಿದೆ. ಈ ಸಿನಿಮಾಗೆ ಜಾಕ್ ಮಂಜು ಬಂಡವಾಳ ಹೂಡುತ್ತಿದ್ದಾರೆ ಎನ್ನಲಾಗಿತ್ತು. ಈ ಸಿನಿಮಾಗಾಗಿ ನಾಗಶೇಖರ್ ಅಂಜನಾದ್ರಿ ಬೆಟ್ಟ ಹತ್ತಿ, ವ್ರತ ಮಾಡಿ ತಯಾರಿ ಆಗುತ್ತಿದ್ದಾರೆ ಎನ್ನುವ ವಿಚಾರವೂ ತಿಳಿದು ಬಂದಿತ್ತು. ಆದರೆ, ಈ ಎಲ್ಲ ಸನ್ನಿವೇಶಗಳು ಬದಲಾದಂತೆ ಕಾಣುತ್ತಿದೆ. ಪಾದರಾಯ ಹೆಸರಿನಲ್ಲಿ ಹಲವರು ಹಣ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಮಾಡಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಚಂದ್ರಚೂಡ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ನಾಲ್ಕು ತಿಂಗಳ ಹಿಂದೆ “ಪಾದರಾಯ “ಎಂಬ ಶೀರ್ಷಿಕೆ ಅಡಿ ಒಂದು ಸಿನಿಮಾ ಘೋಷಣೆಯಾಯ್ತು.ಇದು ಕೇವಲ ಘೋಷಣೆಯಾಗಿಯೇ ಉಳಿಯಿತು, ಛಾಯಾಗ್ರಹಣ ಸತ್ಯ ಹೆಗಡೆ ಸಂಗೀತ ಅಜನೀಶ್ ಲೋಕನಾಥ್ ಎಡಿಟರ್ ಆಂಟೋನಿ ನಾಯಕಿಯಾಗಿ ತೆಲುಗಿನ ಗಾಯಕಿ ಮಂಗ್ಲಿ, ನಾಯಕ ನಟರಾಗಿ ನಿರ್ದೇಶಕ, ನಟ ನಾಗಶೇಖರ್ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಚಕ್ರವರ್ತಿ ಡಿಜೆ ಎಂಬ ನಾನು ಎಂದು ನಿಕ್ಕಿಯಾಗಿತ್ತು. ಇವಿಷ್ಟೂ ಘೋಷಣೆಯ ಹಂತದಲ್ಲೇ ಉಳಿದವು. ಮೇಲ್ಕಂಡ ಯಾರೊಬ್ಬರಿಗೂ ಈ ಸಿನಿಮಾ ಕುರಿತಂತೆ ಯಾವುದೇ ಒಪ್ಪಂದಗಳಾಗಲಿ. ಹಣಕಾಸಿನ ಮುಂಗಡವಾಗಲಿ ನಿರ್ದೇಶಕನಾದ ನನ್ನ ಅರಿವಿಗೆ ಬಂದಂತೆ ಆಗಿರುವುದಿಲ್ಲ. ಈ ನಡುವೆ ನಾಗಶೇಖರ್ ಹಾಗೂ ಜಾಕ್ ಮಂಜು ಅವರು ನಿರ್ಮಾಪಕರೆಂದು ಹೇಳಲಾಗಿತ್ತು. ಅಲ್ಲದೇ ಎರಡೂವರೆ ತಿಂಗಳ ಹಿಂದೆಯೇ ನಿರ್ಮಾಪಕರಾದ ಜಾಕ್ ಮಂಜು ಅವರು ನಾನು ಈ ಸಿನಿಮಾ ನಿರ್ಮಿಸುತ್ತಿಲ್ಲವೆಂದು ಮೌಖಿಕವಾಗಿ ಅವರ ಜೆಪಿ ನಗರದ ಕಛೇರಿಯಲ್ಲಿ ನನಗೂ ಹಾಗೂ ನಾಗಶೇಖರ್ ಅವರಿಗೂ ವ್ಯವಹಾರಿಕ ಕಾರಣಗಳ ನೀಡಿ  ಸ್ಪಷ್ಟಪಡಿಸಿದರು.

ಈ ನಡುವೆ ನಿರ್ಮಾಪಕ – ನಿರ್ದೇಶಕರಾದ ಆರ್.ಚಂದ್ರು ಅವರು ನಿರ್ಮಾಣ ಮಾಡುತ್ತೇನೆಂದು ಮೌಖಿಕವಾಗಿ ಹೇಳಿದರಾದರೂ ಯಾವುದೇ ಒಪ್ಪಂದ ಮಾಡಿಕೊಂಡಿರುವುದಿಲ್ಲ. ರಚನೆಕಾರ ನಿರ್ದೇಶಕನಾದ ನನಗೆ ಈವರೆಗೂ ಈ ಮೇಲ್ಕಂಡ ಯಾವುದೇ ತಂತ್ರಜ್ಞರು, ನಿರ್ಮಾಪಕರಿಂದ ಯಾವುದೇ ಒಪ್ಪಂದ ಪತ್ರ, ಮುಂಗಡ ಹಣ, ಸಿನಿಮಾ ತಯಾರಿ ಯಾವುದರ ಕುರಿತಾಗಿ ಯಾವೊಂದು ವಿಷಯವೂ ನಡೆದಿರುವುದಿಲ್ಲ. ಈ ನಡುವೆ ಸಿನಿಮಾಗೆ ಸಂಬಂಧವಿಲ್ಲದ ವ್ಯಕ್ತಿಯೊಬ್ಬರು ನಾಗಶೇಖರ್ ಅವರಿಗೆ ಅವರ ವೈಯಕ್ತಿಕವಾಗಿ ಎರಡೂ ಲಕ್ಷದ ನಲವತ್ತು ಸಾವಿರ ರುಪಾಯಿ ಹಣ ಕೊಟ್ಟಿರುವ ದಾಖಲಾತಿ ಹಿಡಿದುಕೊಂಡು ನಾನೇ ಈ ಸಿನಿಮಾದ ನಿರ್ಮಾಪಕ. ಆರ್ ಚಂದ್ರು ಅವರಿಂದ ನಾಗಶೇಖರ್ ಗೆ ಐದುಕೋಟಿ ರುಪಾಯಿ ಹಣದ ಒಪ್ಪಂದ ಈ ಸಿನಿಮಾದ ಕಥೆಯ ಮೇಲಾಗಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ.

ಅಲ್ಲದೇ ನಾಗಶೇಖರ್ ಅವರು ಆಡಿಯೋ ರೈಟ್ಸ್ ಮಾರಾಟ ಮಾಡಿದ್ದಾರೆ. ಯಾರೂ ಈ ಸಿನಿಮಾ ಮಾಡಬೇಡಿ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಓರ್ವ ನಿರ್ದೇಶಕನ ಗಮನಕ್ಕೇ ಬಾರದೇ ಆಡಿಯೋ ರೈಟ್ಸ್ ಮಾರಾಟ, ಐದು ಕೋಟಿ ಒಪ್ಪಂದ ಅಥವಾ ಯಾವುದೇ ಹಣದ ವ್ಯವಹಾರ ಮಾಡುವುದು ಅಕ್ಷಮ್ಯ ಅಪರಾಧ. ಈ ಕುರಿತು ವಿಚಾರಿಸಲಾಗಿ ಈ ಬಗೆಯ ಪ್ರಯತ್ನಗಳು ನಡೆಯಿತು. ಆದರೆ ಸಫಲವಾಗಿಲ್ಲವೆಂದು ತಿಳಿದು ಬಂತು. ಈ ಕಥೆಯನ್ನೂ ನಾನು ಚಿತ್ರಕಥೆಯ ಸಹಿತ 2019 ರಲ್ಲೇ the cinematograph act 1952 ಪ್ರಕಾರ ನೊಂದಾಯಿಸಿ ಸಮಸ್ತ ದಾಖಲಾತಿ ಮಾಡಿಟ್ಟಿದ್ದೆ. (ನನ್ನ ಪುಣ್ಯ ) ಈ ಕಥೆ ಅಂಜನಾದ್ರಿ ಸುತ್ತಮುತ್ತಲಿನ ಭಾಗದ ಚಪ್ಪಲಿ ಕಳ್ಳ ಮತ್ತವನ ಹೆಂಡತಿಯ ಕಥೆಯಾಗಿರುತ್ತದೆ. ಇದನ್ನು ರೂಪಿಸಲು ಮೂರೂವರೆ ವರ್ಷದಲ್ಲಿ ಏಳು ರಾಜ್ಯ ಸುತ್ತಿದ್ದೇನೆ. ಹಲವಾರು ಗ್ರಂಥ ಓದಿದ್ದೇನೆ. ನನ್ನ ಹಣ, ಬೆವರು, ಹಸಿವು ಕಟ್ಟಿ ಕನಸುಗಣ್ಣುಗಳಿಂದ ಬರೆದಿಟ್ಟುಕೊಂಡಿದ್ದೇನೆ. ಹೊಟ್ಟೆಗೆ ಸಿನಿಮಾ ಸೆಟ್ ನ ಇಡ್ಲಿಯೋ ಅನ್ನವನ್ನೊ ತಿಂದಿರುವ ಯಾವೊಬ್ಬ ವ್ಯಕ್ತಿಯೂ ಕಂಡವರ ಕಣ್ಣಿಂದ ಉದುರಿದ ಕನಸುಗಳನ್ನು ಕಣ್ಣೀರಾಗಿಸುವುದಿಲ್ಲ.

ಈ ಕಥೆ ಮತ್ತು ಸಿನಿಮಾದ ಹಕ್ಕು ಸಂಪೂರ್ಣ ಚಂದ್ರಚೂಡ್ ಎಂಬ ನನ್ನದೇ ಆಗಿರುತ್ತದೆ. ಯಾರಾದರೂ ಈ ವಿಷಯದಲ್ಲಿ ಯಾರಿಗೇ ಹಣಕೊಟ್ಟಿದ್ದರೂ ನಾನು ಹೊಣೆಯಲ್ಲ. ನಾನು ಮುಂದಿನ ದಿನಗಳಲ್ಲಿ ಪಾದರಾಯ ಎಂದು ನಾಮಕರಣ ಮಾಡಿದ ಈ ಚಿತ್ರವನ್ನು ನಾನೇ ನಟಿಸಿ ನಿರ್ದೇಶಿಸಲಿದ್ದೇನೆ ಅಥವಾ ನನ್ನ ವಿವೇಚನೆಗೆ ತಕ್ಕಂತಹ ತಂಡದೊಂದಿಗೆ ಮಾಡಬಹುದು. ಈ ಕುರಿತಾಗಿ ದೂರವಾಣಿ ಸಂಭಾಷಣೆಯ ಮುಖಾಂತರ ಆರ್.ಚಂದ್ರು ಅವರಲ್ಲಿ ಚರ್ಚಿಸಲಾಗಿ ನಾನು ನಾಗಶೇಖರ್ ಅವರಿಗೆ ಯಾವುದೇ ಮಾತುಕೊಟ್ಟಿಲ್ಲ. ಐದು ಕೋಟಿ ಕೊಟ್ಟು ಸಿನಿಮಾ ಮಾಡುತ್ತೇನೆಂದು ಯಾವುದೇ ರೀತಿಯಲ್ಲಿ ಮುಂದಾಗಿಲ್ಲವೆಂದು ಸ್ಪಷ್ಟನೆ ಕೊಟ್ಟಿರುತ್ತಾರೆ.

ಕೆಲವು ದುಷ್ಕರ್ಮಿಗಳು ವಿಕೃತರು ಈ ಕಥೆಯನ್ನೇ ಸೋಷಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾ, ನಾನು ಕಥೆಯನ್ನು ನಿರ್ಮಾಪಕರಿಗೆ ತಂತ್ರಜ್ಞರಿಗೆ ಚರ್ಚೆಯಲ್ಲಿ ರೀಡಿಂಗ್ ಕೊಡುವ ಧ್ವನಿ ಮುದ್ರಿಸಿ ಹೊರತಂದು ಸಿನಿಮಾ -ಮಾನವೀಯತೆಗೆ ದ್ರೋಹ ಬಗೆಯುವ ಪ್ರಯತ್ನ ಪಡುವುದೂ ಗಮನಕ್ಕೆ ಬಂದಿದೆ, ಅಂಥದ್ದೇನಾದರೂ ಕಂಡು ಬಂದರೆ ಉಗ್ರ ಕಾನೂನು ಕ್ರಮಕ್ಕೂ ಮುಂದಾಗಲು ಈಗಾಗಲೇ ಸರ್ವ ತಯಾರಿ ನಡೆದಿದೆ. ಈ ಕುರಿತಾಗಿ ಯಾರೂ ಯಾವುದೇ ಹಣಕಾಸಿನ ವ್ಯವಹಾರಗಳನ್ನು ಮಾಡಿ ತೊಂದರೆಗೀಡಾಗಬಾರದೆಂದು ಮತ್ತು ಈ ಬಗೆಯ ಪ್ರಯತ್ನಗಳು ನಡೆದರೆ ನನ್ನ ಗಮನಕ್ಕೆ ತರಲು ವಿನಂತಿಸುತ್ತೇನೆ ಎಂದು ಚಂದ್ರಚೂಡ್ ಬರೆದುಕೊಂಡಿದ್ದಾರೆ.

Share. Facebook Twitter WhatsApp Pinterest LinkedIn Tumblr Telegram Email

Related Posts

ನಟಿ ಕಂಗನಾಗೆ ಮತ್ತೆ ಸಂಕಷ್ಟ: 6 ಕೋಟಿ ಹಿಂದಿರುಗಿಸಲು ಬೇಡಿಕೆ ಇಟ್ಟ ಹಂಚಿಕೆದಾರರು

March 22, 2023

ಬೆಂಗಳೂರು ಚಿತ್ರೋತ್ಸವದಲ್ಲಿ ಕಥೆಗಾರವಿಜಯೇಂದ್ರ ಪ್ರಸಾದ್ ಭಾಗಿ

March 22, 2023

ಪತಿಯ ನಿಧನದ ಬೆನ್ನಲ್ಲೇ ನಟ ಧನುಷ್ ಜೊತೆ ಹಸೆಮಣೆ ಏರಲು ರೆಡಿಯಾದ ನಟಿ ಮೀನಾ?

March 22, 2023

ನಟ ಶಿವರಾಜ್ ಕುಮಾರ್ ಭೇಟಿ ಮಾಡಿದ ಮಾಲಿವುಡ್ ನಟಿ: ಕಾರಣವೇನು ಗೊತ್ತಾ?

March 22, 2023

Rajanikant- Upendra: ಸೂಪರ್ ಸ್ಟಾರ್ ಗೆ ರಿಯಲ್ ಸ್ಟಾರ್ ಆಕ್ಷನ್ ಕಟ್: ರಜನಿಗೆ ಸಿನಿಮಾ ಮಾಡ್ತಾರಾ ಉಪ್ಪಿ ?

March 21, 2023

ಸ್ವತಃ ಹಣದಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಹಿರಿಯ ನಟಿ ಲೀಲಾವತಿ

March 21, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.