ಮರಗಳ ನಾಶ, ಕಾಡು ನಾಶದಿಂದ ಇಂದು ಅನೇಕ ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿದೆ. ಹೀಗಾಗಿ ಆಹಾರ ಅರಸಿ ಪ್ರಾಣಿಗಳು ನಾಡಿನತ್ತ ಬರುತ್ತಿದೆ. ಅದರಲ್ಲಿ ಮಂಗಗಳು ಕೂಡ ಒಂದು. ಆದರೆ ನಾವು ಹೇಳುವ ಈ ಟ್ರಿಕ್ಸ್ ಫಾಲೋ ಮಾಡಿದ್ರೆ ಮಂಗಗಳು ನಿಮ್ಮ ಬಳಿ ಸುಳಿಯಲ್ಲ.
ಹೌದು, ಮಂಗಗಳು ಕಾಟ ಕೊಟ್ರೆ ಸಾಕಾಗುತ್ತೆ ಮರ್ರೆ ಎಷ್ಟೋ ಮಂದಿ ಮನೆಗಳಿಗೆ ಭೇಟಿ ಕೊಡುವ ಮಂಗಗಳು, ಸಾಕಷ್ಟು ತೊಂದರೆ ಕೊಡುತ್ತದೆ. ಹೀಗಾಗಿ ಕೆಲವೊಂದು ಟ್ರಿಕ್ಸ್ ಫಾಲೋ ಮಾಡಿದ್ರೆ ಸುಲಭವಾಗಿ ಓಡಿಸಬಹುದು.
ಮಂಗಗಳು ಕೆಲವೊಂದು ವಾಸನೆಯಿಂದ ಓಡಿಹೋಗುತ್ತವೆ: ಮಂಗಗಳನ್ನು ಕೆಲವೊಂದು ವಾಸನೆಯಿಂದ ಹಿಮ್ಮೆಟ್ಟಿಸಬಹುದು. ಅಡುಗೆಮನೆಯಲ್ಲಿ ಸಿಗುವ ಕೆಲವು ಪದಾರ್ಥಗಳಿಂದ ಮಂಗಗಳನ್ನು ಹಿಮ್ಮೆಟ್ಟಿಸಬಹುದು. ಉದಾಹರಣೆಗೆ, ಶುಂಠಿ, ಬೆಳ್ಳುಳ್ಳಿ ಮತ್ತು ಈರುಳ್ಳಿ ಮಿಕ್ಸ್ ಮಾಡಿ ಮತ್ತು ಅವುಗಳನ್ನು ಸ್ವಲ್ಪ ಪುಡಿಮಾಡಿ. ಆ ನಂತರ ಕೋತಿಗಳೋ ಬರೋ ಜಾಗದಲ್ಲಿ ಇಡಿ.
ಸೌಂಡ್ ಗನ್ ಅಥವಾ ಪಟಾಕಿ: ಮಂಗಗಳು ದೊಡ್ಡ ಶಬ್ದಗಳಿಗೆ ಹೆದರುತ್ತವೆ. ಅದಕ್ಕಾಗಿಯೇ ಮಂಗಗಳಿಗೆ ಸೌಂಡ್ ಗನ್ ಅಥವಾ ಕ್ರ್ಯಾಕರ್ಗಳನ್ನು ಬಳಸುವುದು ಸಹ ಪರಿಣಾಮಕಾರಿ ಪರಿಹಾರವಾಗಿದೆ. ಇದರ ಸದ್ದು ಜೋರಾಗಿದ್ದು ಮಂಗಗಳು ಓಡಿ ಹೋಗುತ್ತವೆ
ಫ್ಲಾಶ್ ಲೈಟ್ ಬಳಕೆ: ಹಗಲು ಬೆಳಕಿನಲ್ಲಿ ಫ್ಲ್ಯಾಶ್ ಲೈಟ್ ಪರಿಣಾಮಕಾರಿಯಾಗಿರುವುದಿಲ್ಲ. ಆದರೆ ರಾತ್ರಿ ವೇಳೆ ಮನೆ ಮತ್ತು ಜಮೀನಿನಿಂದ ಮಂಗಗಳನ್ನು ಓಡಿಸಲು ಇದನ್ನು ಬಳಸಬಹುದು. ಮಂಗಗಳ ಮೇಲೆ ಫ್ಲಾಷ್ ಲೈಟ್ ಹೊಳೆದಾಗ ಅವು ಹೆದರಿ ಓಡಿ ಹೋಗುತ್ತವೆ.
ಹೊಗೆಯ ಬಳಕೆ: ಮಂಗಗಳು ಹೊಗೆಯನ್ನು ಇಷ್ಟಪಡುವುದಿಲ್ಲ. ಮಂಗಗಳು ಆಗಾಗ್ಗೆ ಬರುವಲ್ಲಿ, ಒಣ ಕೊಂಬೆಗಳನ್ನು, ಎಲೆಗಳನ್ನು ಸುಟ್ಟುಹಾಕಿ, ಎಲೆಗಳು ಉರಿಯುತ್ತಿರುವಾಗ ಕೆಲವು ಹಸಿರು ಎಲೆಗಳನ್ನು ಸೇರಿಸಿ. ಇದರಿಂದ ಹೊಗೆ ಬೇಗ ಉತ್ಪತ್ತಿಯಾಗುತ್ತದೆ. ಈ ಹೊಗೆಯಿಂದ ಮಂಗಗಳು ಬೆಚ್ಚಿಬಿದ್ದು ಓಡಿ ಹೋಗುತ್ತವೆ.
ಬಿಳಿ ಬಾಟಲಿಯಲ್ಲಿ ನೀರನ್ನು ಇಡಿ: ರತನ್ ಶಂಕರ್ ಓಜಾ ಹೇಳುತ್ತಾರೆ, ಬಿಳಿ ಬಾಟಲಿಯನ್ನು ನೀರಿನಿಂದ ತುಂಬಿಸಿ ಮತ್ತು ಕೆಲವು ಹನಿ ಬಣ್ಣವನ್ನು ಸೇರಿಸಿ. ಇದರಿಂದ ನೀರು ತೆಳು ನೀಲಿ ಬಣ್ಣಕ್ಕೆ ತಿರುಗುತ್ತದೆ. ಈ ಬಾಟಲಿಯ ಮೇಲೆ ಸೂರ್ಯನ ಬೆಳಕು ಬಿದ್ದಾಗ, ಅದು ಬೆಳಕನ್ನು ಪ್ರತಿಫಲಿಸುತ್ತದೆ ಮತ್ತು ಮಂಗಗಳು ಇದನ್ನು ನೋಡಿ ಓಡಿ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
ಕಪ್ಪು ಲಂಗೂರ್ ಮಂಗಗಳ ಫೋಟೋವನ್ನು ಹಾಕಿ: ಇನ್ನು ನೀವು ಕೆಂಪು ಮಂಗಗಳಿಂದ ಮಾತ್ರ ತೊಂದರೆಯಾ ಅನುಭವಿಸುತ್ತಿದ್ದರೆ, ಇದು ನಿಮಗೆ ಉತ್ತಮ ಪರಿಹಾರವಾಗಿದೆ. ಮನೆಯಿಂದ ಸ್ವಲ್ಪ ದೂರದಲ್ಲಿ ಕಪ್ಪು ಮಂಗದ ದೊಡ್ಡ ಕಟ್-ಔಟ್ ಫೋಟೋವನ್ನು ಬ್ಯಾನರ್ ಆಗಿ ನೇತುಹಾಕಿ. ಈ ಬಣ್ಣದ ಮಂಗಗಳನ್ನು ಕಂಡರೆ ಬೇರ ಮಂಗಗಳು ಹೆದರುತ್ತವೆ. ಇದೇ ಕಾರಣಕ್ಕೆ ಈ ಮಂಗಗಳ ಫೋಟೋ ಹಾಕಿದ್ರೆ ಉತ್ತಮ.
ಬ್ಲೋ ಮೆಷಿನ್ ಬಳಕೆ: ಮಂಗಗಳು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಹೊಲಗಳಲ್ಲಿ ಬೆಳೆದ ಬೆಳೆಗಳನ್ನು ನಾಶಪಡಿಸುವುದು ಮಾತ್ರವಲ್ಲದೇ ರೈತರ ಮೇಲೂ ಕೆಲವೊಮ್ಮೆ ದಾಳಿ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಂಗಗಳನ್ನು ಓಡಿಸಲು ಈ ಪರಿಹಾರವು ತುಂಬಾ ಪರಿಣಾಮಕಾರಿಯಾಗಿದೆ. ರೈತರು ತಮ್ಮ ಬೆಳೆಗಳನ್ನು ರಕ್ಷಿಸಲು ಇಂತಹ ಯಂತ್ರಗಳನ್ನು ಬಳಸಬಹುದು. ಇದರಿಂದ ದೊಡ್ಡಮಟ್ಟಿಗೆ ಮಂಗಗಳಿಗೆ ಹಾನಿಯಾಗುವುದಿಲ್ಲ.