ಈ ಭಾರಿ ಪೂರ್ವ ಮುಂಗಾರು ಆರ್ಭಟಿಸಿದ್ದಲ್ಲದೆ ಮುಂಗಾರು ಮಳೆಯೂ ಕೂಡ ಸಮಯಕ್ಕೆ ಸರಿಯಾಗಿ ಆಗಮಿಸಿ ಕೆರೆಕಟ್ಟೆಗಳು ತುಂಬಿಸುತ್ತಿದೆ.
ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲಾದ್ಯಂತ ಕಳೆದ ವರ್ಷ ಹಿಂಗಾರು ಹಾಗೂ ಮಳೆ ಇಲ್ಲದೆ ರೈತಾಪಿ ವರ್ಗಕ್ಕೆ ಭಾರಿ ನಷ್ಟವನ್ನುಂಟು ಮಾಡಿತ್ತು.
ಆದರೆ ಈ ಬಾರಿ ಪೂರ್ವ ಮುಂಗಾರು ಅಬ್ಬರಿಸಿತ್ತು. ಬಳಿಕ ಜೂನ್ ತಿಂಗಳ ಮೊದಲ ವಾರದಲ್ಲಿ ಐದಾರು ದಿನ ಮುಂಗಾರು ಮಳೆಯು ಆರ್ಭಟಿಸಿದೆ. ಮಳೆಯ ಅಬ್ಬರಕ್ಕೆ ರಸ್ತೆ ಜಮೀನುಗಳಲ್ಲಿ ಹುಕ್ಕಿ ಹರಿದಿದೆ. ಚಾಮರಾಜನಗರ, ಗುಂಡ್ಲುಪೇಟೆ, ಹನೂರು ತಾಲೂಕುಗಳಲ್ಲಿ ಭರ್ಜರಿ ಮಳೆಗೆ ಕೆರೆಕಟ್ಟೆಗಳು ಹುಕ್ಕಿ ಹರಿದಿವೆ. ಹಲವಾರು ಕಡೆ ರೈತರು ಬೆಳೆದ ಕಬ್ಬು ,ಬಾಳೆ ಸೇರಿದಂತೆ ತರಾಕಾರಿ ಬೆಳೆಗಳು ನಷ್ಟ ಉಂಟಾಗಿದೆ. ಇನ್ನು ಸಾರ್ವಜನಿಕ ಸಂಪರ್ಕ ರಸ್ತೆಗಳು ಭಾರೀ ಮಳೆಗೆ ಕಡಿತಗೊಂಡು ಜನ ಜೀವನ ಅಸ್ತವ್ಯಸ್ತಗೊಂಡಿದೆ.