ಮನುಷ್ಯನ ತಲೆಯ ಭಾಗ ಇಡೀ ದೇಹದ ನಿಯಂತ್ರಣ ಮಾಡುವ ಅತಿ ಮುಖ್ಯವಾದ ಅಂಗ. ಹಾಗಾಗಿ ನಮ್ಮ ರಕ್ಷಣೆಗೆ ದೇವರು ತಲೆಯ ಒಳಗೆ ಮೆದುಳಿನ ರೂಪದಲ್ಲಿ ಬುದ್ಧಿ ಶಕ್ತಿಯನ್ನು ಕೊಟ್ಟು ತಲೆ ಬುರುಡೆಯ ಮೇಲ್ಭಾಗದಲ್ಲಿ ತಲೆಯ ರಕ್ಷಣೆಗಾಗಿ ಮೃದುವಾದ, ಸೊಂಪಾದ ಮತ್ತು ದಟ್ಟವಾದ ಕೂದಲನ್ನು ನಾವು ಹುಟ್ಟಿದ ದಿನದಿಂದಲೇ ನೀಡಿರುತ್ತಾನೆ. ಆರಂಭಿಕ ಹಂತದಲ್ಲಿ ಮಾತ್ರ ನಮ್ಮ ರಕ್ಷಣೆ ಆಕಸ್ಮಿಕವಾಗಿ ನಡೆದರೆ, ನಮಗೆ ಬುದ್ಧಿ ಶಕ್ತಿ ಬೆಳೆಯುತ್ತಾ ಹೋದಂತೆ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕಾದ ಅನಿವಾರ್ಯ
ಅಗಸೆ ಬೀಜಗಳಲ್ಲಿ ನಮ್ಮ ದೇಹದ ಆರೋಗ್ಯಕ್ಕೆ ಬೇಕಾಗಿರುವ ಸಾಕಷ್ಟು ಪ್ರಮಾಣದ ಅತ್ಯಧಿಕ ಪೌಷ್ಟಿಕ ಸತ್ವಗಳು ಸುಲಭವಾಗಿ ಲಭ್ಯವಾಗುತ್ತವೆ. ಅವುಗಳೆಂದರೆ,ಒಮೆಗಾ – 3 ಫ್ಯಾಟಿ ಆಸಿಡ್ನಾರಿನ ಅಂಶವಿಟಮಿನ್ ‘ ಬಿ ‘ ಅಂಶಕ್ಯಾನ್ಸರ್ ವಿರುದ್ಧ ಹೋರಾಡುವ ಲಿಗ್ನಾನ್ ಅಂಶಗಳು ಆಂಟಿ – ಆಕ್ಸಿಡೆಂಟ್ ಅಂಶಗಳು ಇವೆ
ಅಗಸೆ ಬೀಜಗಳು ಕೇವಲ ನಮ್ಮ ದೇಹದ ಆಂತರಿಕ ಆರೋಗ್ಯವನ್ನು ಕಾಪಾಡಿ ನಮ್ಮನ್ನು ಹಲವಾರು ಬಗೆಯ ಕಾಯಿಲೆಗಳಿಂದ ರಕ್ಷಣೆ ಮಾಡುತ್ತದೆ ಎಂದು ನೀವು ತಿಳಿದಿದ್ದರೆ ಅದು ತಪ್ಪು. ಅಗಸೆ ಬೀಜಗಳು ನಮ್ಮ ಸೌಂದರ್ಯ ನಿರ್ವಹಣೆಯಲ್ಲಿ ಕೂಡ ತಮ್ಮದೇ ಆದ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ಅಗಸೆ ಬೀಜಗಳನ್ನು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ನಮ್ಮ ನೆತ್ತಿ ಹಾಗೂ ತಲೆಯ ಸಂಪೂರ್ಣ ಭಾಗದಲ್ಲಿ ಕೂದಲಿಗೆ ಮಸಾಜ್ ಮಾಡಿದರೆ ನಮ್ಮ ತಲೆ ಕೂದಲು ಸಾಕಷ್ಟು ಸದೃಢವಾಗುವುದರೊಂದಿಗೆ ತುಂಬಾ ಮೃದುವಾಗಿ ಮತ್ತು ಹೊಳಪಾಗಿ ಕಾಣಿಸುತ್ತದೆ.
ಇದರ ಜೊತೆಗೆ ಕೂದಲಿನ ಸಮಸ್ಯೆಗಳಾದ ಕೂದಲು ಉದುರುವಿಕೆ, ತಲೆ ಹೊಟ್ಟು ನಿವಾರಣೆ ಇತ್ಯಾದಿಗಳಲ್ಲಿ ಅಗಸೆ ಬೀಜಗಳು ಮಹತ್ವದ ಪಾತ್ರ ಬೀರುತ್ತವೆ.
ಇದು ನಮ್ಮ ತಲೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಿ, ಕೂದಲಿನ ಬೇರುಗಳನ್ನು ಭದ್ರ ಪಡಿಸಿ ಸೊಂಪಾದ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ವಿಟಮಿನ್ ‘ ಬಿ ‘ ಅಂಶ
ಕೂದಲಿನ ಕಿರು ಚೀಲಗಳಿಗೆ ಜೀವ ತುಂಬಿ ಕೂದಲಿನ ಬೇರುಗಳನ್ನು ಆರೋಗ್ಯಕರವಾಗಿಸಿ, ಕೂದಲಿನ ಸದೃಢತೆಗೆ ಕಾರಣವಾಗುತ್ತದೆ.
ವಿಟಮಿನ್ ‘ ಇ ‘ ಅಂಶ
ನಮ್ಮ ದೇಹದ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಿ ಕೂದಲು ಉದುರುವಿಕೆಯನ್ನು ತಡೆಯುವುದರ ಜೊತೆಗೆ ಕೂದಲಿನ ಆರೋಗ್ಯಕ್ಕೆ ಯಾವುದೇ ಬಗೆಯ ಸೋಂಕುಗಳು ತಾಗದಂತೆ ನೋಡಿಕೊಳ್ಳುತ್ತದೆ. ವಿಟಮಿನ್ ‘ ಇ ‘ ಅಂಶ ನಮ್ಮ ತಲೆಯ ನೆತ್ತಿಯ ಭಾಗದಲ್ಲಿ ರಕ್ತ ಸಂಚಾರವನ್ನು ಅಧಿಕಗೊಳಿಸಿ ಕೂದಲಿನ ಸಂಪಾದ ಬೆಳವಣಿಗೆಯಲ್ಲಿ ಸಹಾಯ ಮಾಡಿ ತುಂಬಾ ಉದ್ದವಾದ, ಸದೃಡವಾದ, ಮೃದುವಾದ ಮತ್ತು ಹೊಳಪಾದ ಕೂದಲನ್ನು ನಮ್ಮದಾಗಿಸುತ್ತದೆ.