ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ ತಿಂಗಳು ಕಳೆದಿದೆ. ದರ್ಶನ್ ರನ್ನು ಹೊರ ತರಲು ಪತ್ನಿ ವಿಜಯಲಕ್ಷ್ಮಿ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಅಂತೆಯೇ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ ಮತ್ತಷ್ಟು ಸಾಕ್ಷಿಗಳನ್ನು ಕಲೆ ಹಾಕುತ್ತಿರುವ ಪೊಲೀಸರು ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ನಿರ್ಧಾರ ಮಾಡಿದ್ದಾರೆ. ಚಾರ್ಜ್ ಶೀಟ್ ಯಾವ ರೀತಿಯ ಅಂಶಗಳನ್ನು ಉಲ್ಲೇಖ ಮಾಡಲಾಗುತ್ತದೆ ಎಂಬುದು ಪ್ರಮುಖವಾಗಲಿದೆ.
ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ಚಾರ್ಜ್ಶೀಟ್ ಸಲ್ಲಿಕೆ ಮಾಡಲು ಪೊಲೀಸರು ನಿರ್ಧಾರಿಸದ್ದಾರೆ. ಇದು ಪ್ರಾಥಮಿಕ ಆರೋಪಪಟ್ಟಿ ಆಗಿರಲಿದೆ. ಹೈದರಬಾದ್ಗೆ ಕಳುಹಿಸಿರುವ ವಿಡಿಯೋಗಳ ದಾಖಲೆಗಳು ಬರಬೇಕಾಗಿದೆ. ಸಿಸಿಟಿವಿ, ಮೊಬೈಲ್ ರೀಟ್ರಿವ್ ರಿಪೋರ್ಟ್ ಪೊಲೀಸರ ಕೈಗೆ ಸಿಗಬೇಕಿದೆ. ಇವೆಲ್ಲ ಬಂದ ಮೇಲೆ ಹೆಚ್ಚುವರಿ ರಿಪೋರ್ಟ್ ಸಲ್ಲಿಕೆಗೆ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.
ರೇಣುಕಾ ಸ್ವಾಮಿ ಮರಣೋತ್ತ ಪರೀಕ್ಷೆಯ ವರದಿ, 164 ಹೇಳಿಕೆಗಳು, 180ಕ್ಕೂ ಹೆಚ್ಚು ಸಾಕ್ಷಿಗಳು ಈ ವರದಿಯಲ್ಲಿ ಇರಲಿವೆ. ಇವೆಲ್ಲಾವನ್ನು ಪ್ರಾಥಮಿಕ ಚಾರ್ಜ್ಶೀಟ್ನಲ್ಲಿ ಪೊಲೀಸರು ಸಲ್ಲಿಕೆ ಮಾಡಲಿದ್ದಾರೆ. ದರ್ಶನ್ ಅವರು ಈ ಕೃತ್ಯದಲ್ಲಿ ಭಾಗಿ ಆಗಿದ್ದಾರೋ ಅಥವಾ ಇಲ್ಲವೋ ಎಂಬುದು ಕೂಡ ಇದರಲ್ಲಿ ಉಲ್ಲೇಖ ಆಗಲಿದೆ. ಇದರ ಮೇಲೆ ದರ್ಶನ್ ಭವಿಷ್ಯ ನಿರ್ಧಾರ ಆಗಲಿದೆ.
ದರ್ಶನ್ ಅವರು ಈವರೆಗೆ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲ. ಒಂದೊಮ್ಮೆ ಚಾರ್ಜ್ಶೀಟ್ ಸಲ್ಲಿಕೆ ಆದರೆ, ಆ ಬಳಿಕ ಅವರು ಜಾಮೀನಿಗೆ ದರ್ಶನ್ ಅರ್ಜಿ ಹಾಕಲಿದ್ದಾರೆ. ಸದ್ಯ ಅವರು ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ. ಆಗಸ್ಟ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿಲಾಗಿದೆ.