ಬರ್ಬಾದ್ ಆಗಿರೋ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕರ್ಮಕಾಂಡಗಳು ಒಂದೆರಡಲ್ಲ. ಆದಾಯ ಸಂಗ್ರಹ ನೆಪದಲ್ಲಿ ಪ್ರಾಧಿಕಾರದ ಮಾನವನ್ನ ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕೋಕೆ ಹೊರಟಿದ್ದಾರೆ. ಬದಲಿ ನಿವೇಶನ, ಭೂ ಸ್ವಾಧೀನ, ಕಾರ್ನರ್ ಸೈಟ್ ಡೀಲ್ ಗಳಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದಿರೋ ಬಿಡಿಎ ಅಧಿಕಾರಿಗಳು, ಈ ಕೆಟ್ಟ ಕೆಲಸಕ್ಕೆ ಕೈ ಹಾಕಿದೆ. ಅದೇನು ಅಂತಾ ಹೇಳ್ತೀವಿ ಈ ಸ್ಟೋರಿ ನೋಡಿ..
ಯೆಸ್.. ನಿವೇಶನಗಳಿಂದ, ಫ್ಲಾಟ್ ಗಳಿಂದ ಆದಾಯ ಸಂಗ್ರಹಿಸಕ್ಕಾಗದೇ ವಾಮಮಾರ್ಗಕ್ಕೆ ಬಿಡಿಎ ಅಧಿಕಾರಿಗಳು ಕೈ ಹಾಕಿದ್ದಾರೆ. ಪ್ರಾಧಿಕಾರದ ಬಡಾವಣೆಗಳನ್ನ ಅಭಿವೃದ್ಧಿ ಮಾಡ್ತೀವಿ ಅನ್ನೋ ನೆಪ ಹೇಳಿ ಇಂಥ ಹೀನ ಕೃತ್ಯಕ್ಕೆ ಹೈಹಾಕಲು ಮುಂದಾಗಿದೆ. ಈಗಾಗಲೇ ಕೆಂಪೇಗೌಡ ಲೇಔಟ್ ನ್ನ ಅಭಿವೃದ್ದಿ ಮಾಡ್ತೀವಿ ಅಂತಾ ಹೇಳಿ, ನೂರಾರು ಕೋಟಿ ಹಣವನ್ನ ನೀರಲ್ಲಿ ಹೋಮ ಮಾಡಿದ್ದಾರೆ. ಪ್ರತೀ ವರ್ಷ ನೂರಾರು ನಿವೇಶನಗಳನ್ನ ಮಾರಾಟಕ್ಕಿಟ್ರೂ ಪ್ರಾಧಿಕಾರದ ಬೊಕ್ಕಸಕ್ಕೆ ಆದಾಯ ಬರ್ತಿಲ್ಲ. ಈಗ ಪಾಪರ್ ಆಗಿರೋ ಖಾಲಿ ಖಜಾನೆಯನ್ನ ತುಂಬಿಸಲು ಬ್ಯಾಂಕ್ ಗಳಿಗೆ ಅಡಮಾನ ಇಡಲು ಪ್ಲಾನ್ ಮಾಡಿದ್ದಾರೆ..
ಈ ಹಿಂದೆ ಬಿಬಿಎಂಪಿ ಅಧಿಕಾರಿಗಳು ಕೂಡ ನೂರಾರು ಆಸ್ತಿಗಳನ್ನ ಬ್ಯಾಂಕ್ ಗಳಲ್ಲಿ ಅಡಮಾನ ಇಟ್ಟಿದ್ರು. ಮತ್ತೆ ಅದನ್ನ ಬಿಡಿಸಿಕೊಳ್ಳಕ್ಕಾಗದೇ ಕೋರ್ಟ್ ನಿಂದ ಚೀಮಾರಿ ಹಾಕಿಸಿಕೊಂಡು, ಮರ್ಯಾದೆ ಕಳೆದುಕೊಂಡಿತ್ತು. ಈಗ ಬಿಡಿಎ ಅಧಿಕಾರಿಗಳು ಕೂಡ ಅಂಥದ್ದೇ ಯಡವಟ್ಟಿಗೆ ಕೈ ಹಾಕಿದ್ದಾರೆ. ದೇಶದ ಯಾವುದೇ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ನಿವೇಶನಗಳನ್ನ ಅಡಮಾನ ಇಡುವ ಬಗ್ಗೆ ಚರ್ಚೆ ಮಾಡಲಾಗಿದೆ..ಕಳೆದ ಬೋರ್ಡ್ ಮೀಟಿಂಗ್ ನಲ್ಲಿ ನಿವೇಶನ ಗಳ ಅಡವಿಟ್ಟು ಸಾಲ ಪಡೆಯಲು ನಿರ್ಧಾರ ಮಾಡಲಾಗಿದೆ.
ಇನ್ನು ನಿವೇಶನಗಳನ್ನ ಅಡಮಾನ ಇಟ್ಟು ಬ್ಯಾಂಕ್ ಗಳಿಂದ ಹಣ ಪಡೆಯೋದು ಇವರ ಪ್ಲಾನ್. ಒಟ್ನಲ್ಲಿ ಭ್ರಷ್ಟರ ಅಧಿಕಾರಿಗಳಿಂದ ಬಿಡಿಎ ಪಾಪರ್ ಆಗೋಗಿದೆ. ಶಿವರಾಮಕಾರಂತ ಬಡಾವಣೆ ಅಭಿವೃದ್ಧಿಗೆ ಅಂತಾ ಈ ರೀತಿಯ ವಾಮಮಾರ್ಗ ಹಿಡಿದಿದ್ದಾರೆ.ಕೂಡಲೇ ಸಿಎಂ ಬೊಮ್ಮಾಯಿ ಈ ಕೂಡಲೇ ಎಚ್ಚೆತ್ತು, ಬಿಡಿಎ ಅಧಿಕಾರಿಗಳ ಕಿವಿ ಹಿಂಡಬೇಕಿದೆ. ಇಲ್ಲದಿದ್ರೆ ಬಿಡಿಎ ಮಾನವನ್ನ ಅಧಿಕಾರಿಗಳೇ ಹರಾಜು ಹಾಕ್ತಾರೆ..