ಧಾರವಾಡ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ಸಂದರ್ಭ ನಡೆದ ಕಲ್ಲು ತೂರಾಟ, ಗಲಭೆ ಇದೀಗ ರಾಜ್ಯ ಮಟ್ಟದಲ್ಲೇ ಚರ್ಚೆಗೆ ಗ್ರಾಸವಾಗಿದೆ. ಮತ್ತೊಂದೆಡೆ, ಗಲಭೆ ಕುರಿತ ಒಂದೊಂದೇ ಮಾಹಿತಿ ಹೊರಬೀಳುತ್ತಿವೆ. ಇನ್ನೂ ಈ ಬಗ್ಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಮುಸ್ಲಿಂ ಸಮಾಜದವರು ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿದ್ದಾರೆ. ಮಸೀದಿ ಒಳಗಡೆ ಕಲ್ಲು ಹೇಗೆ ಬಂತು? ಮಸೀದಿ ಸೀಜ್ ಮಾಡಿ ಬುಲ್ಡೋಜರ್ ಹಚ್ಚಬೇಕು ಎಂದು ಕಿಡಿಕಾರಿದ್ದಾರೆ.
ಈ ಪ್ರಕರಣದಲ್ಲಿ ಹಿಂದೂಗಳ ತಪ್ಪಿಲ್ಲ. ಇದು ಮುಸ್ಲಿಂರೇ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ. ಆದರೆ ಪೊಲೀಸ್ ಇಲಾಖೆ ಸ್ವಲ್ಪ ಜನ ಹಿಂದೂಗಳನ್ನ ಬಂಧಿಸೋದು ಸ್ವಲ್ಪ ಜನ ಮುಸ್ಲಿಂ ಯುವಕರನ್ನ ಬಂಧಿಸೋದು ಮೊದಲು ಬಿಡಬೇಕು. ಇಂತಹ ಘಟನೆಗಳಿಗೆ ಪೊಲೀಸ್ ಇಲಾಖೆ ವೈಫಲ್ಯವೇ ಕಾರಣ. ಗಣಪತಿ ವಿಸರ್ಜನೆ ವೇಳೆ ಕಲ್ಲು ತೂರಾಟ ಮಾಡಿರುವ ಇಂತಹ ಹೇಯ ಕೃತ್ಯಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವ ನಾರಾಯಣಸ್ವಾಮಿ ಕಾರಣ ಎಂದು ಆರೋಪಿಸಿದ್ದಾರೆ.