ಇನ್ನೇನು ಬೇಸಿಗೆ ಕಳೆದು ಮಳೆಗಾಲ ಬರುತ್ತಿದೆ. ಇನ್ನು ಈ ಸಂದರ್ಭದಲ್ಲಿ ಜನರಿಗೆ ಕಾಯಿಲೆಗಳು ಹೆಚ್ಚಾಗುತ್ತವೆ. ಏಕೆಂದರೆ ಕಾಯಿಲೆಗಳನ್ನು ತರುವ ಕೀಟಗಳ ಸಂತತಿ ಹೆಚ್ಚಾಗುತ್ತದೆ. ನಮ್ಮ ಮನೆಯ ಸುತ್ತಮುತ್ತ ಇವುಗಳ ವಾಸಸ್ಥಾನ ಎಂಬುದು ನಮಗೆ ಚೆನ್ನಾಗಿ ಗೊತ್ತು. ಆದರೂ ಕೂಡ ನಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹಿಂದೇಟು ಹಾಕುತ್ತೇವೆ.
ಇದು ಮನೆಯವರೆಲ್ಲರೂ ಹುಷಾರು ತಪ್ಪುವಂತೆ ಆಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಸ್ವಚ್ಛತೆಯನ್ನು ಕಾಪಾಡಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ. ಈ ಲೇಖನದಲ್ಲಿ ಹೇಗೆ ಸೊಳ್ಳೆ ಹಾಗೂ ಇತರೆ ಕೀಟಗಳಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಂಬುದನ್ನು ತಿಳಿಸಿಕೊಟ್ಟಿದ್ದೇವೆ…
ಮೊದಲಿಗೆ ನಿಂತಿರುವ ನೀರನ್ನು ಕ್ಲೀನ್ ಮಾಡಿ
- ಮನೆಯ ಸುತ್ತಮುತ್ತ ನೀರು ನಿಂತರೆ ಅದು ಸೊಳ್ಳೆಗಳ ಆವಾಸಸ್ಥಾನವಾಗುತ್ತದೆ ಎಂಬುದು ನಮಗೆಲ್ಲ ಗೊತ್ತಿ ರುವ ವಿಷಯ. ಕೇವಲ ಸೊಳ್ಳೆಗಳು ಮಾತ್ರವಲ್ಲದೆ ಇನ್ನಿತರ ಕೀಟಗಳು, ಚಿಟ್ಟೆಗಳು ಎಲ್ಲವೂ ಸಹ ಅಂತಹ ನಿಂತಿರುವ ನೀರಿನಿಂದಲೇ ಜನ್ಮ ತಳೆಯುತ್ತವೆ. ಕತ್ತಲಿನ ವಾತಾವರಣ ಮತ್ತು ತೇವಾಂಶ ಇರುವ ಜಾಗ ಎಂದರೆ ಇವುಗಳ ಸಂತತಿ ಹೆಚ್ಚಾಗಲು ಪ್ರಮುಖ ಕಾರಣವಾ ಗುತ್ತದೆ.
- ಹಾಗಾಗಿ ಸಾಧ್ಯವಾದಷ್ಟು ನಿಮ್ಮ ಮನೆಯ ಅಕ್ಕ-ಪಕ್ಕ ನಿಮ್ಮ ಮನೆಯೊಳಗೆ ಬಾತ್ರೂಮ್, ಬಾಲ್ಕನಿ ಇತ್ಯಾದಿ ಕಡೆ ನೀರು ನಿಲ್ಲದಂತೆ ನೋಡಿಕೊಳ್ಳಿ. ಮನೆಯಲ್ಲೂ ಸಹ ನೀರು ತುಂಬಿ ಮುಚ್ಚಳ ತೆಗೆದು ಯಾವುದರಲ್ಲೂ ಇಡಬೇಡಿ.
- ಏಕೆಂದರೆ ಇಲ್ಲಿಂದಲೂ ಸಹ ಇವುಗಳ ಸಂತತಿ ಹೆಚ್ಚಾಗ ಬಹುದು. ನಿಮ್ಮ ಅಡುಗೆ ಮನೆಯಲ್ಲೂ ಸಹ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಿ.
ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ
- ನಿಮ್ಮ ಮನೆಯ ಮುಂದಿನ ಚರಂಡಿ, ಅಲ್ಲಿಗೆ ಕೊಟ್ಟಿರುವ ಪೈಪ್, ಕ್ಯಾಬಿನೆಟ್, ಸೀಲಿಂಗ್ ಇತ್ಯಾದಿಗಳನ್ನು ಸ್ವಚ್ಛ ವಾಗಿ ಇಟ್ಟು ಕೊಳ್ಳುವುದು ನಿಮ್ಮ ಜವಾಬ್ದಾರಿ. ಇದ ರಿಂದ ಕೀಟಗಳು ಮತ್ತು ಜಿರಳೆಗಳು ತಮ್ಮ ಸಂತತಿ ಹೆಚ್ಚಿಸಿಕೊಳ್ಳುವುದನ್ನು ತಪ್ಪಿಸಬಹುದು.
- ಸರಿಯಾದ ಸಮಯಕ್ಕೆ ಇವುಗಳನ್ನು ಆಗಾಗ ಸ್ವಚ್ಛ ಮಾಡಿ. ಅಷ್ಟೇ ಅಲ್ಲದೆ ನಿಮ್ಮ ಕಪ್ಬೋರ್ಡ್, ಡ್ರಾಯರ್ ಇತ್ಯಾದಿಗಳಲ್ಲಿ ಏನಾದರೂ ಜಿರಳೆಗಳ ಹಾಗೂ ಕೀಟಗಳ ಮೊಟ್ಟೆ ಇವೆಯೇ ಎಂಬುದರ ಬಗ್ಗೆ ಚೆಕ್ ಮಾಡಿ ಕ್ಲೀನ್ ಮಾಡಿ.
ನೈಸರ್ಗಿಕ ಪದ್ಧತಿಗಳನ್ನು ಅನುಸರಿಸಿ
- ಮನೆ ಯಾವಾಗಲೂ ಸ್ವಚ್ಛವಾಗಿ ಇರಬೇಕು ಎಂದರೆ ನೀವು ಕೆಲವೊಂದು ಎಸೆನ್ಶಿಯಲ್ ಆಯಿಲ್ ಗಳನ್ನು ನಿಮ್ಮ ಮನೆಯ ಸೋಫಾ, ಕುರ್ಚಿ, ಡೈನಿಂಗ್ ಟೇಬಲ್ ಇತ್ಯಾದಿಗಳ ಕಡೆ ಸ್ಪ್ರೇ ಮಾಡಿ.
- ಇದರಿಂದ ಕೀಟಗಳು ಅಥವಾ ಚಿಟ್ಟೆಗಳು ನಿಮ್ಮ ಮನೆಗೆ ಬರುವುದು ತಪ್ಪುತ್ತದೆ. ನಿಮ್ಮ ಬಟ್ಟೆಗಳನ್ನು ಜಿರಳೆ ಗಳಿಂದ ರಕ್ಷಿಸಿಕೊಳ್ಳಲು ಕಡಲೆ ಹಿಟ್ಟು, ಬೋರಿಕ್ ಪೌಡರ್ ಮತ್ತು ಸಕ್ಕರೆ ಮಿಶ್ರಣ ಮಾಡಿದ ನೀರನ್ನು ಮಿಕ್ಸ್ ಮಾಡಿ ಸಣ್ಣ ಉಂಡೆ ಗಳನ್ನಾಗಿ ಮಾಡಿ ಬಟ್ಟೆಗಳ ಬಳಿ ಇರಿಸಿ. ಸಾಧ್ಯವಾದಷ್ಟು ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸಲು ಟ್ರೈ ಮಾಡಿ.
ಕೀಟನಾಶಕಗಳನ್ನು ಬಳಸಿ
- ನಿಮ್ಮ ಮನೆಯಿಂದ ಜಿರಳೆಗಳು ಹಾಗೂ ಕೀಟಗಳು ಸೇರಿದಂತೆ ತೊಂದರೆ ಕೊಡುವ ಜೀವಿಗಳನ್ನು ಹೊರಗೆ ಇಡಬೇಕು ಎಂದರೆ ಕೀಟನಾಶಕಗಳನ್ನು ಬಳಸಿ.
- ನಿಮ್ಮ ಮನೆಯ ಯಾವುದೇ ಬೆಡ್ರೂಮ್, ಬಾತ್ರೂಮ್, ಬಾಲ್ಕನಿ ಇತ್ಯಾದಿ ಕಡೆಗಳಲ್ಲಿ ಬಳಸುವುದರಿಂದ ಇವುಗಳನ್ನು ನಿಯಂತ್ರಣ ಮಾಡ ಬಹುದು.
- ಬಾಡಿ ಲೋಶನ್ ಕೂಡ ನಿಮಗೆ ತಾತ್ಕಾಲಿಕ ಪರಿಹಾರ ವಾಗಿ ಇಲ್ಲಿ ಕೆಲಸ ಮಾಡುತ್ತದೆ. ಆದರೆ ಮನೆಯಲ್ಲಿ ಮಕ್ಕಳು ಮತ್ತು ಸಾಕುಪ್ರಾಣಿಗಳು ಇದ್ದರೆ ಎಚ್ಚರ!
ಮನೆಯ ಸುರಕ್ಷತೆ ನಿಮ್ಮ ಜವಾಬ್ದಾರಿ!
- ನಿಮ್ಮ ಕಿಟಕಿಗಳಿಗೆ ಮೆಶ್ ಹಾಕಿ. ಬೇರೆ ಕಡೆ ಎಲ್ಲಿಂದ ನಿಮ್ಮ ಮನೆಗೆ ಕೀಟಗಳು ಬರುತ್ತವೆ ಎಂಬುದನ್ನು ಗಮನಿಸಿ. ಪ್ರತಿದಿನ ಸೂರ್ಯ ಮುಳುಗುತ್ತಿದ್ದಂತೆ ಬಾಗಿಲು ಹಾಕಿ.
- ಅಷ್ಟೇ ಅಲ್ಲದೆ ನಿಮ್ಮ ಸಿಂಕ್ ಹಾಗೂ ಡ್ರೈನ್ ಗಳಿಗೆ ಸ್ಟೈನರ್ ಅಳವಡಿಸಿ. ಇದರಿಂದ ವರ್ಷ ಪೂರ್ತಿ ನೀವು ನೆಮ್ಮದಿಯಾಗಿ ಕೀಟಗಳಿಂದ ನಿಮ್ಮ ಮನೆಯನ್ನು ಮತ್ತು ಮನೆಯವರೆಲ್ಲರ ಆರೋಗ್ಯವನ್ನು ರಕ್ಷಿಸಿಕೊಳ್ಳ ಬಹು