ತಾಯಿಗೆ ಸಮನಾದ ಸಂಬಂಧ ಜಗದಲ್ಲಿ ಯಾವುದು ದೊಡ್ಡದಿಲ್ಲ, ನಮಗೆ ದೇವರನ್ನು ತೋರಿಸುವ ತಾಯಿ ಆತನಿಗಿಂತ ದೊಡ್ಡವಳು ಎಂದು ಗ್ಲೋಬಲ್ ಎಜ್ಯುಕೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶಿವಾನಂದ ಎಸ್, ಬೆಳ್ಳಿವರಿ. ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಕೆ, ಎಚ್, ಡಿ, ಸಿ, ಕಾಲೋನಿಯ ಶ್ರೀ ಜೇಡರ ದಾಸಿಮಯ್ಯ ಸಮುದಾಯ ಭವನದಲ್ಲಿ ನಡೆದ ವಿಶ್ವ ತಾಯಂದಿರ ದಿನಾಚರಣೆಯ ಕಾರ್ಯಕ್ರಮ ನಡೆಯಿತು.
ಮಕ್ಕಳಿಗೆ ತಾಯಿಯಾಗಿ , ಮನೆಯ ಯಜಮಾನಿಯಾಗಿ , ಮನೆಯ ಸದಸ್ಯರು ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿಯ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ದಾಪುಗಾಲು ಹಾಕುತ್ತ ಪುರುಷರು ಸಮನಾಗಿ ಕಾಯಕದಲ್ಲಿ ನಿರತಳಾಗಿದ್ದಾಳೆ, ಮತ್ತು ಮಕ್ಕಳ ತುಂಟಾಟಗಳನ್ನು ನಿಭಾಯಿಸಿಕೊಂಡು ಅವರ ಅಳಲನ್ನು ಸಹಿಸಿಕೊಂಡು, ನಮ್ಮ ಹತಾಶೆಯನ್ನು ಅರ್ಥಮಾಡಿಕೊಂಡು ನಮ್ಮನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಿದವಳು ತಾಯಿಯಾಗಿರುತ್ತಾಳೆ ಎಂದರು.
ಗ್ಲೋಬಲ್ ಎಜ್ಯುಕೇಶನ ಸಂಸ್ಥೆಯ ಗುರುಮಾತೆಯರ ಪಾದ ಪೂಜೆ ನಡೆಯಿತು, ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಸೋಮನಾಥ್ ಗೊಂಬಿ. ಹಾಗೂ ಮುಖ್ಯ ಗುರುಮಾತೆ ಸುನಿತಾ ಅಸ್ಕಿ. ಗ್ಲೋಬಲ್ ಸಂಸ್ಥೆಯ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ತಾಯಂದಿರು ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.