ತುಮಕೂರು: ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ ಎಚ್.ಪಿ ಪೆಟ್ರೋಲ್ ಬಂಕ್ನಲ್ಲಿ ಮಹಾಮೋಸವಾಗಿರೋ ಆರೋಪ ಕೇಳಿ ಬಂದಿದೆ. ಪವರ್ ಪೆಟ್ರೋಲ್ ಅಂತಾ ಬೈಕ್ ಸವಾರ ಹಾಕಿಸಿಕೊಂಡಿದ್ದಾನೆ. 110 ರೂಪಾಯಿಗೆ ಕೇವಲ 300 ಎಂ.ಎಲ್ ಮಾತ್ರ ಪೆಟ್ರೋಲ್ ಬಂದಿದೆ ಅನ್ನೋದು ಸವಾರನ ಆರೋಪ. ಸಾಹುಕಾರ್ ಪ್ಯೂಯಲ್ ಪಾರ್ಕ್ ಎಂಬ ಎಚ್.ಪಿ ಪೆಟ್ರೋಲ್ ಬಂಕ್ನಲ್ಲಿ ಈ ಘಟನೆ ನಡೆದಿದೆ.
ಇತ್ತೀಚೆಗೆ ಪೆಟ್ರೋಲ್ ಕದಿಯುವ ದಂದೆ ಅತಿಯಾಗುತ್ತಿದ್ದು, ಒಂದು ಕಡೆ ಪೆಟ್ರೋಲ್ ರೇಟ್ ಬರೆ ಮತ್ತೊಂದು ಕಡೆ ಬಂಕ್ ಮಾಲೀಕರಿಂದ ಸುಲಿಗೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಕಳೆದ ವಾರವಷ್ಟೇ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ಇದೇ ರೀತಿ ದಂದೆ ಬಯಲಾಗಿತ್ತು. ಈಗ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಡಿಸಿದ್ದಾರೆ.