ಬೆಂಗಳೂರು: ಸಂಸದ ಡಿ.ಕೆ. ಸುರೇಶ್ ಅವರನ್ನು ತಕ್ಷಣವೇ ಜೈಲಿಗೆ ಹಾಕಬೇಕು ಎಂದು ಡಿಕೆ ಸುರೇಶ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ನವರು ಯಾವಾಗಲೂ ದೇಶವನ್ನು ವಿಭಜನೆ ಮಾಡುವ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ನವರು ಅವರಿಗೆ ಹೇಳಿಕೆ ಕೊಡಲು ಸಲಹೆ ಕೊಟ್ಟಿರಬೇಕು ಎಂದು ಕುಟುಕಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೈ ಎತ್ತಲು ಒಬ್ಬರು ಕೂಡ ಕೇರಳದಲ್ಲಿಲ್ಲ. ಆದರೂ ಅಭಿವೃದ್ಧಿಯಾಗುತ್ತೆ, ದೇಶದ ಎಲ್ಲಾ ಭಾಗಗಳು ಅಭಿವೃದ್ಧಿಯಾಗಬೇಕು. ನಮಗೆ ದಕ್ಷಿಣ ಮತ್ತು ಉತ್ತರ ಅನ್ನುವ ಭೇದಭಾವ ಇಲ್ಲ. ಅಭಿವೃದ್ಧಿ ತಡೆಯಲು ಕಾಂಗ್ರೆಸ್ಗೆ ಆಗ್ತಿಲ್ಲ. ಹಾಗಾಗಿ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಇವರನ್ನು ತಕ್ಷಣವೇ ಜೈಲಿಗೆ ಹಾಕಬೇಕು ಎಂದು ವಾಗ್ದಾಳಿ ನಡೆಸಿದರು.