ಬೆಂಗಳೂರು: ಎಂ.ಬಿ ಪಾಟೀಲ್ (MB Patil)ಮಾತಿಗೆ ಸಂಸದ ಡಿ.ಕೆ ಸುರೇಶ್ (DK Suresh)ಅಂತೂ ಫುಲ್ ಗರಂ ಆಗಿದ್ದರು. ಅವರಿಗೆ ನಾನು ತೀಕ್ಷ್ಣವಾಗಿ ಹೇಳಬಲ್ಲೇ ಆದ್ರೆ ಇದೆಲ್ಲಾ ಬೇಡ ಎಂದು ಹೇಳಿ ಕೆಂಡವಾಗಿದ್ದರು. ಇದೀಗ ಮತ್ತೆ ಎದುರಿಗೆ ಬಂದಾಗ ಬಹಿರಂಗವಾಗಿಯೇ ವಾರ್ನಿಂಗ್ ಮಾಡಿದ್ದು, ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಹೌದು..ಇಂದು(ಮೇ 24) ವಿಧಾನಸೌಧದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದ ಹೊರ ಬಾಗಿಲಿನಲ್ಲಿ ಸಂಸದ ಡಿಕೆ ಸುರೇಶ್ ಹಾಗೂ ಎಂ.ಬಿ ಪಾಟೀಲ್ ಮುಖಾಮುಖಿಯಾಗಿದ್ದು,
ಈ ವೇಳೆ ಡಿಕೆ ಸುರೇಶ್ ಅವರು ಎಂ.ಬಿ ಪಾಟೀಲ್ಗೆ ಗುರಾಯಿಸಿಕೊಂಡು ಸ್ವಲ್ಪ ಬಿಗಿಯಾಗಿರಲಿ ಎಂದು ಬಹಿರಂಗವಾಗಿಯೇ ಎಲ್ಲರ ಮುಂದೆ ವಾರ್ನ್ ಮಾಡಿದ್ದಾರೆ. ಬಳಿಕ ಬನ್ನಿ ಚೇಂಬರ್ಗೆ ಹೋಗೋಣ ಎಂದು ಎಂ.ಬಿ ಪಾಟೀಲ್, ಡಿಕೆ ಸುರೇಶ್ ಕೈ ಹಿಡಿದು ಕರೆದುಕೊಂಡು ಹೋಗಲು ಪ್ರಯತ್ನಿಸಿದರು. ಆದ್ರೆ, ಸುರೇಶ್ ಮತ್ತೆ ಗುರಾಯಿಸಿದ್ದಾರೆ. ನಂತರ ಎಂ.ಬಿ ಪಾಟೀಲ್ ಕೈಬಿಟ್ಟು ಆಮೇಲೆ ಮಾತನಾಡುವೆ ಎಂದು ಅಲ್ಲಿಂದ ಮೌನವಾಗಿ ತೆರಳಿದರು.