I.N.D.I.A ಒಕ್ಕೂಟ ಹಾವು ಮತ್ತು ಮುಂಗುಸಿಗಳು ಒಟ್ಟಿಗೆ ಸೇರಿ ಮಾಡಿಕೊಂಡ ಮೈತ್ರಿ ಎಂದು ಸಂಸದ ತೇಜಸ್ವಿ ಸೂರ್ಯ ಲೇವಡಿ ಮಾಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು ಮೈತ್ರಿಕೂಟದಲ್ಲಿರೋ ಆಮ್ ಆದ್ಮಿ ಪಕ್ಷ, ಪಶ್ಚಿಮ ಬಂಗಾಳ ಟಿಎಂಸಿ ಪಕ್ಷ, ಕೇರಳದ ಸಿಪಿಎಂ ಪಕ್ಷಗಳು ದಿನ ಬೆಳಗಾದ್ರೆ ಕಾಂಗ್ರೆಸ್ ಪಕ್ಷವನ್ನು ಬೈಯ್ಯುತ್ತವೆ. ಆದರೂ ಕಾಂಗ್ರೆಸ್ನ ಜೊತೆಗೆ ಮೈತ್ರಿಕೂಟದಲ್ಲಿವೆ. ಟಿಎಂಸಿ, ಶಿವಸೇನೆ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗಲಿ ಎನ್ನುತ್ತಾರೆ.
ಆದರೆ ಕಾಂಗ್ರೆಸ್ ಪಕ್ಷದವರೇ ಅದರಲ್ಲೂ ಸಿದ್ದರಾಮಯ್ಯನವರೇ ಇದನ್ನು ಒಪ್ಪುತ್ತಿಲ್ಲ. ಇದೊಂದು ಅನ್ ನ್ಯಾಚುರಲ್ ಮೈತ್ರಿ. ಹಾವು ಮುಂಗೂಸಿ ಒಟ್ಟಿಗೆ ಬಂದರೆ ಸಮ್ಮಿಶ್ರ ಪಡೆಯನ್ನು ಕಟ್ಟಲು ಸಾಧ್ಯವಿಲ್ಲ. ಶುರುವಾದ ದಿನದಿಂದಲೇ ಸ್ಟಾರ್ಟಿಂಗ್ ಪ್ರಾಬ್ಲಂ ಆಗಿದೆ. ಕಾಂಗ್ರೆಸ್ ನಾಯಕರ ಮಧ್ಯೆಯೇ ಒಗ್ಗಟ್ಟು ಇಲ್ಲ, ಇನ್ನು ದೇಶದಲ್ಲಿ ಒಗ್ಗಟ್ಟು ತರಲು ಸಾಧ್ಯ ಎಂದು ತೇಜಸ್ವಿ ಸೂರ್ಯ ಪ್ರಶ್ನೆ ಮಾಡಿದ್ದಾರೆ.