ಹುಬ್ಬಳ್ಳಿ: ಕಳೆದ ಎರಡು ತಿಂಗಳಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಮ್ಮ ಗೆಲುವಿಗಾಗಿ ಬಿರುಸಿನ ಪ್ರಚಾರ ಮಾಡಿದ್ದ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಅವರು ಚುನಾವಣೆಯ ಎಲ್ಲಾ ಪ್ರಚಾರಗಳನ್ನು ಮುಗಿಸಿ ಇದೀಗ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ನಿನ್ನೆಯಷ್ಟೇ ಮತದಾನ ಪೂರ್ಣಗೊಂಡಿದ್ದು, ಎಮ್.ಆರ್.ಪಾಟೀಲ್ ಅವರು ಇಂದು ತಮ್ಮ ತಾರಿಹಾಳ ಬಳಿಯ ತೋಟದ ಮನೆಯಲ್ಲಿ ದನ ಕರುಗಳಿಗೆ ಮೇವು ಹಾಕಿ ಬಂದರು, ಮತ್ತು ತಮ್ಮ ಹುಬ್ಬಳ್ಳಿಯ ಮಂಜುನಾಥ ನಗರದಲ್ಲಿನ ತಮ್ಮ ನಿವಾಸದಲ್ಲಿ ಮೊಮ್ಮಕಳಾದ ರಾಘವೇಂದ್ರ ಅನ್ವಿತಾ ಅವರನ್ನು ಆಟ ಆಡಿಸಿದರು. ಮತ್ತು ತಾಯಿ ಶಾರದಾಬಾಯಿ ಚಿಕ್ಕಮಂದಿರು ಸೇರಿದಂತೆ ಕುಟುಂಬ ವರ್ಗದವರೊಂದಿಗೆ ಕಾಲ ಕಳೆದಿದ್ದಾರೆ. ಮನೆಯಲ್ಲಿ ಕ್ಷೇತ್ರದ ನೆರೆ ಹೊರೆಯವರೊಂದಿಗೆ ಮಾತುಕತೆ ನಡೆಸಿ ಅತ್ಯಂತ ಖುಷಿಯಿಂದಲೇ ಕಾಲ ಕಳೆದಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಮ್.ಆರ್.ಪಾಟೀಲ್, ಈ ಬಾರಿಯ ಮತದಾನ ಪ್ರಕ್ರಿಯೆ ನೋಡಿದರೆ ಕ್ಷೇತ್ರದ ಎಲ್ಲ ಜನ ಹಬ್ಬದಂತೆ ಚುನಾವಣೆ ಮಾಡಿದ್ದಾರೆ. ಈ ಬಾರಿ ಕನಿಷ್ಠ 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣೆಯ ಗೆಲುವು ನಿನ್ನೆ ಸಂಜೆಯೇ ಆಗಿದೆ. ಸುನಾಮಿ ರೀತಿಯಲ್ಲಿ ಮತದಾನವಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಶೇ. 82.82ರಷ್ಟು ಮತದಾನವಾಗಿದೆ. ಎಂ.ಆರ್. ಪಾಟೀಲರಿಗೆ ಟಿಕೆಟ್ ಸಿಗಬೇಕು ಎಂಬುದು ಕ್ಷೇತ್ರದ ಜನರ 25ವರ್ಷದ ಬೇಡಿಕೆ ಆಗಿತ್ತು. ಟಿಕೆಟ್ ಸಿಕ್ಕಾ ದಿನವೇ ನಮ್ಮ ಗೆಲುವು ಆಗಿದೆ. ಹಗಲಿರುಳು ಮನೆ ಮಠ ಬಿಟ್ಟು ನನ್ನ ಸಲುವಾಗಿ ಓಡಾಡಿದ ನಾಯಕರು, ಕಾರ್ಯಕರ್ತರಿಗೆ, ಸ್ಥಳೀಯ ಮುಖಂಡರಿಗೆ ಧನ್ಯವಾದ ಎಂದರು.
ಕುತಂತ್ರ ಮಾಡುವವರುಗೆ ಜನ ತಕ್ಕ ಪಾಠ ಕಲಿಸಿದ್ದಾರೆ. 20ಸಾವಿರದ ಅಂತರದಲ್ಲಿ ಗೆಲುವು ಸಾಧಿಸಲಿದ್ದೇನೆ. ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕು ಮತ್ತು ಚಿಕ್ಕನಗೌಡರ ಮೂರನೇ ಸ್ಥಾನ ಪಡೆಯಲಿದ್ದಾರೆ ಎಂದರು. ಒಟ್ಟಾರೆ ಚುನಾವಣೆ ಮುಗಿಸಿ ರಿಲ್ಯಾಕ್ಸ್ ಮೂಡ್ನಲ್ಲಿರುವ ಎಮ್.ಆರ್.ಪಾಟೀಲ ಅವರು ತಮ್ಮ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಫಲಿತಾಂಶಕ್ಕಾಗಿ ಕಾಯುತ್ತಿರುವ ಅವರು ಇಂದು ಮನೆಯಲ್ಲೇ ಇದ್ದು, ವಿಶ್ರಾಂತಿ ಪಡೆದುಕೊಂಡಿದ್ದಾರೆ.