ತೇರದಾಳ ಮತಕ್ಷೇತ್ರ ವಿಧಾನಸಭಾ ಕ್ಷೇತ್ರದ ಪಕ್ಷೇತರ ನೇಕಾರರ ಹಾಗು ತೇರದಾಳ ಸ್ವಾಭಿಮಾನಿ ವೇದಿಕೆ ವತಿಯ ಅಭ್ಯರ್ಥಿ ೧೯.೪.೨೦೨೩ ರಂದು ೧೧ ಗಂಟೆಗೆ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶಿವಶಂಕರ ಶಿವಾಚಾರ್ಯರು ಹುಬ್ಬಳ್ಳಿ ಹಾಗು ಪರಮಪೂಜ್ಯ ಶ್ರೀ ಘನಲಿಂಗ ಮಹಾ ಸ್ವಾಮೀಜಿಯವರು ಹಾಗು ರಬಕವಿ ಬನಹಟ್ಟಿ ತೇರದಾಳ, ಮಹಾಲಿಂಗಪುರ, ಹಳಿಂಗಳಿ. ಮದನಮಟ್ಟಿ ಹಾಗು ಸುತ್ತಮುತ್ತಲಿನ ಹಿರಿಯರೆಲ್ಲರ ಸಮಕ್ಷಮದಲ್ಲಿ ತಹಶೀಲ್ದಾರ ರಬಕವಿ-ಬನಹಟ್ಟಿ ಕಛೇರಿಗೆ ನಾಮಪತ್ರ ಸಲ್ಲಿಸಲ್ಲಿಸಿದರು.
ಜಗದ್ಗುರುಗಳಾದ ಶ್ರೀ ಶಿವಶಂಕರ ಶಿವಾಚಾರ್ಯರು ಮಾತನಾಡಿ ತೇರದಾಳ ಮತಕ್ಷೇತ್ರದ ನೇಕಾರರು ಸೇರಿದಂತೆ ಎಲ್ಲಾ ಸಮುದಾಯದ ಹಿರಿಯರು ಗಣ್ಯಮಾನ್ಯರು, ಬಡವರು ಶ್ರೀಮಂತರೆನ್ನದೆ ಎಲ್ಲರಿಗೂ ಸನ್ಯಾಸಿಗಳು ಸ್ವಚ್ಛ ರಾಜಕಾರಣ ಮಾಡುತ್ತಾರೆ ಎಂಬ ಭರವಸೆ ಇರುವುದರಿಂದ ಹಾಗು ನಾನು ರಾಜಕಾರಣ ಮಾಡಬೇಕಂತಲ್ಲ ಶೋಷಿತರ, ದುರ್ಬಲರು ಸೇರಿದಂತೆ ಸಮುದಾಯದ ಕೂಗನ್ನ ಕೇಳಿಸಿಕೊಳ್ಳಬೇಕೆಂದು.
ಅವರ ಧ್ವನಿಯಾಗಿ ನಿಲ್ಲುತ್ತಿದ್ದೇನೆ. ರಾಜಕೀಯೇತರವಾಗಿ ಈ ಕಾರ್ಯವೇಕೆ ಮಾಡಬಾರದೆಂಬ ಮಧ್ಯಮದವರ ಪ್ರಶ್ನೆಗೆ ಅವರು, ನಾನು ಅನೇಕ ವರ್ಷಗಳಿಂದ ರಾಜಕಾರಣಿಗಳನ್ನು ಗಮನಿಸುತ್ತ ಬಂದಿದ್ದು. ಅಲ್ಲದೇ ಖುದ್ದು ನಾನೇ ಮುಖ್ಯಮಂತ್ರಿಗಳನ್ನು ಭೇಟಿಯಾದೆ, ಪಕ್ಷಗಳ ಅಧ್ಯಕ್ಷರು ವರಿಷ್ಟರಿಗೆ ಭೇಟಿಯಾದಾಗ ಅವರುಗಳ ಅಸಡ್ಡೆ ರೀತಿ ನೋಡಿ ನೋವಾಯಿತು, ಇಂತಹ ವ್ಯವಸ್ಥೆಯಿಂದ ಬೇಜಾರಾಗಿ ನಾವು ಕೂಡಾ ಯಾಕೆ ಶಾಸನ ಬದ್ದ ಅಧಿಕಾರದಲ್ಲಿ ಕೂಡಬಾರದು. ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಬಾರದು ಎಂದರು.
ತೇರದಾಳ ಮತ ಕ್ಷೇತ್ರದಲ್ಲಿ ನಡೆದಿರುವ ಭ್ರಷ್ಟಚಾರ ಮತ್ತು ರಾಜಕೀಯ ಪಾವಿತ್ರ್ಯತೇಯನ್ನು ಕೆಡಿಸುವಂತ ಕೆಲಸವಾಗಿದೆ. ಅಲ್ಲದೇ ಈ ಕ್ಷೇತ್ರದಲ್ಲಿ ನೇಕಾರ ಸಮುದಾಯ ದೊಡ್ಡದಾಗಿ ಇರುವುದರಿಂದ ಸುಮಾರು ಈ ಕ್ಷೇತ್ರದ 10ಜನರು ರಾಷ್ಟ್ರೀಯ ಪಕ್ಷಗಳಿಗೆ ಟಿಕೆಟ್ ಕೇಳಿದರು ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಮನಸೊ ಇಚ್ಛೆ ತಮಗೆ ಬೇಕಾದವವರಿಗೆ ಟಿಕೆಟ್ ನೀಡಿದ್ದರಿಂದ ನಾವು ಎಲ್ಲಾ ಸಮುದಾಯದವರು ಒಬ್ಬ ಸನ್ಯಾಸಿಯವರಿಗೆ ಬೆಂಬಲ ಸೂಚಿಸಿದ್ದೇವೆ ಎಂದು ಹಿರಿಯ ಬಿಜೆಪಿ ಮುಖಂಡ ಭೀಮಶಿ ಮಗದುಮ್ ಹೇಳಿದರು. ಈ ಸಂಧರ್ಭದಲ್ಲಿ ರಾಜು ಅಂಬಲಿ, ಹಠಗರ ಸಮಾಜ ಜಿಲ್ಲಾಧ್ಯಕ್ಷ ಡಾ. ಪಂಡಿತ್ ಪಟ್ಟಣ, ರಾಮಣ್ಣ ಹುಲಕುಂದ, ಬಸವರಾಜ ಬಾಳಿಕಾಯಿ, ಮಲ್ಲಿಕಾರ್ಜುನ ಬಾಣಕಾರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಹಾಗು ಅಭಿಮಾನಿಗಳು ಇದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ