ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕ್ಯಾನ್ಸರ್ ಕಿದ್ವಾಯಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. MRI ಸ್ಕ್ಯಾನಿಂಗ್ ಮಷಿನ್ ಹಾಳಾಗಿದ್ದು ರೋಗಿಗಳು ಪ್ರತಿ ನಿತ್ಯ ಪರದಾಡುವಂತಹ ಪರಿಸ್ಥಿತಿ ಇದೆ. ರಾಜ್ಯದ ಪ್ರಮುಖ ಸರಕಾರಿ ಕ್ಯಾನ್ಸರ್ ಆಸ್ಪತ್ರೆಯಾಗಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಚಿಕಿತ್ಸೆಗಾಗಿ ಪ್ರತಿ ದಿನ ಸಾವಿರಾರು ರೋಗಿಗಳು ಬರುತ್ತಾರೆ. ಆದರೆ ಕಳೆದ 15 ದಿನಗಳಿಂದ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಂಕಷ್ಟ ಎದುರಾಗಿದೆ.
ಕಿದ್ವಾಯಿ ಆಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್ ಮಷಿನ್ ಹಾಳಾಗಿ 15 ದಿನ ಕಳೆದರೂ ಇನ್ನು ಮಷಿನ್ ಸರಿಯಾಗಿಲ್ಲ. ಖಾಸಗಿಯಲ್ಲಿ MRI ಸ್ಕ್ಯಾನಿಂಗ್ ಮಾಡಿಸಲು ಕನಿಷ್ಠ 10 ಸಾವಿರ ಬೇಕು. 10 ಸಾವಿರ ಖರ್ಚು ಮಾಡಿ MRI ಸ್ಕ್ಯಾನಿಂಗ್ ಮಾಡಿಸಲಾಗದೆ ರೋಗಿಗಳು ಪರದಾಡುತ್ತಿದ್ದಾರೆ. ಬಡ ರೋಗಿಗಳು ಚಿಕಿತ್ಸೆ ಪಡೆಯದೇ ವಾಪಸ್ ಮನೆಗೆ ಹೋಗುತ್ತಿದ್ದಾರೆ. ನಿತ್ಯ ರೋಗಿಗಳು ನೂರಾರು ಕೀಲೋ ಮೀಟರ್ ದೂರದಿಂದ ಚಿಕಿತ್ಸೆಗೆ ಬಂದು ವಾಪಸ್ ಹೋಗ್ತಾ ಇದ್ದಾರೆ. ರೋಗಿಗಳು ಪರದಾಡುತ್ತಿದ್ದರೂ ಕಿದ್ವಾಯಿ ಆಸ್ಪತ್ರೆ ನಿರ್ಲಕ್ಷ್ಯ ತೋರಿದೆ.