ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಬಹುಕೋಟಿ ಅಕ್ರಮ ನಡೆದಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಇಂದು ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಪ್ರತಿಭಟನೆಗೆ ತೆರಳುತ್ತಿದ್ದ ಹಲವು ಬಿಜೆಪಿ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರನ್ನು ಮದ್ದೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೈಸೂರು ಮುಡಾ ಹಗರಣದ ಪ್ರಕರಣ ಹಾಗೂ ರಾಜ್ಯದ ಜನವಿರೋಧಿ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಖಂಡಿಸಿ ಜುಲೈ 12ರ ಶುಕ್ರವಾರದಂದು ಮೈಸೂರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಬಿಜೆಪಿ ಗುರುವಾರ ಕರೆ ನೀಡಿತ್ತು. ಆದರೆ ಇಂದು ಮೈಸೂರಿಗೆ ತೆರಳುತ್ತಿದ್ದ ವೇಳೆಯೇ ಮದ್ದೂರು ಮಂಡಲದ ಕಾರ್ಯಕರ್ತರನ್ನು ಪಟ್ಟಣದ ಪ್ರವಾಸಿ ಮಂದಿರದ ವೃತ್ತದ ಬಳಿ ಹಲವು ನಾಯಕರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ವಶದಲ್ಲಿರಿಸಿಕೊಂಡಿದ್ದಾರೆ.
ಇದೇ ವೇಳೆ ಮಂಡಲ ಅಧ್ಯಕ್ಷ ಸಿ.ಕೆ.ಸತೀಶ್, ಮ.ನ.ಪ್ರಸನ್ನ ಕುಮಾರ್, ಲೋಕೆಶ್, ರವಿ ವಳಗೆರೆಹಳ್ಳಿ, ವಿಕಾಸ್ ನಿಡಗಟ್ಟ, ಪ್ರಸನ್ನ, ಹೆಚ್.ಸಿ. ಮಹೇಶ್, ಕೆ.ಎಸ್.ಆತ್ಮಾನಂದ, ರಘು ಹಾಗಲಹಳ್ಳಿ, ರಾಜು ಹುಲಿಕೆರೆ, ಮಿಥುನ್, ಮಹೇಶ್ ಮತ್ತಿತರರು ಇದ್ದರು.