ಗಾಂಧಿನಗರ: ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿಯವರುಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ತಮಗೆ ಕಾಡಿದ್ದ ಅನಾರೋಗ್ಯದ ಬಗ್ಗೆ ಮಾತಾಡಿದ್ದು, ಈ ವೇಳೆ ಮುಖೇಶ್ ಅಂಬಾನಿ ಭಾವುಕರಾಗಿದ್ದಾರೆ.
ಗುಜರಾತ್ನ ಜಾಮ್ನಗರದಲ್ಲಿ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಅನಂತ್ ಅಂಬಾನಿ ಮಾತಾಡಿದ್ದಾರೆ. ಈ ವೇಳೆ ನನ್ನ ಕುಟುಂಬ ನನಗೆ ವಿಶೇಷ ಒಲವನ್ನು ನೀಡಿದೆ. ನನ್ನ ಜೀವನವು ಸಂಪೂರ್ಣವಾಗಿ ಗುಲಾಬಿ ಹೂಗಳ ಹಾಸಿಗೆಯಾಗಿರಲಿಲ್ಲ. ನಾನು ಮುಳ್ಳಿನ ನೋವನ್ನೂ ಅನುಭವಿಸಿದ್ದೇನೆ. ನಾನು ಬಾಲ್ಯದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದು, ನನ್ನ ತಂದೆ ಮತ್ತು ತಾಯಿ ಬಹಳ ಕಾಳಜಿಯಿಂದ ನೋಡಿಕೊಂಡಿದ್ದಾರೆ. ಈ ಮೂಲಕ ಅನಾರೋಗ್ಯದ ಭಾವನೆ ಕಾಡದಂತೆ ನನ್ನನ್ನು ನೋಡಿಕೊಂಡಿದ್ದಾರೆ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಮಗನ ಮಾತನ್ನು ಕೇಳುತ್ತಿದ್ದಂತೆ ಮುಖೇಶ್ ಅಂಬಾನಿ ಭಾವುಕರಾಗಿ, ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.