ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಾಗಿನಿಂದ ಹಾರ್ದಿಕ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅದು ಯಾವುದೂ ನಡೆಯಲಿಲ್ಲ. ಐದು ಬಾರಿ ಪ್ರಶಸ್ತಿ ಗೆದ್ದಿರುವ ಮುಂಬೈ ಲೀಗ್ ಸುತ್ತಿನಲ್ಲೇ ಹೊರಬಿತ್ತು.
ಇವೆಲ್ಲದರ ನಡುವೆ ಪಾಂಡ್ಯಗೆ ಮತ್ತೊಂದು ಆಘಾತ ಉಂಟಾಗಿದೆ. ಟೀಂ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ ಅವರ ಖಾಸಗಿ ಬದುಕಿನಲ್ಲಿ ಬಿರುಗಾಳಿ ಬೀಸುತ್ತಿದ್ದು,
ಪತ್ನಿ ನತಾಶಾ ಸ್ಟ್ಯಾಂಕೋವಿಚ್ ಇದೀಗ ಬೇರೆ ಬೇರೆಯಾಗಲಿದ್ದಾರೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಮದುವೆಗೆ ಮುನ್ನವೇ ತಂದೆಯಾಗುವ ವಿಚಾರ ಖಚಿತಪಡಿಸಿದ್ದ ಹಾರ್ದಿಕ್ ಪಾಂಡ್ಯ, 2020ರ ಮೇನಲ್ಲಿ ಸರ್ಬಿಯಾ ಮೂಲದ ನಟಿ ನತಾಶಾ ಅವರನ್ನು ಮದುವೆಯಾಗಿದ್ದರು. ಇದಾದ ಬಳಿಕ ಅದೇ ವರ್ಷದ ಜುಲೈನಲ್ಲಿ ಅಗಸ್ತ್ಯ ಎನ್ನುವ ಗಂಡು ಮಗುವನ್ನು ಸ್ವಾಗತಿಸಿದ್ದರು.
ಇದೀಗ ಐಪಿಎಲ್ನ ಶಾಕಿಂಗ್ನಿಂದ ಹೊರಬರುವ ಮುನ್ನವೇ ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಶಾಕ್ ಎದುರಾಗಿದೆ. ಐಪಿಎಲ್ ಮುಗಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿರುವ ಹಾರ್ದಿಕ್ ಪಾಂಡ್ಯಗೆ ಸ್ವತಃ ಪತ್ನಿ ನತಾಶಾ ಶಾಕ್ ನೀಡಿದ್ದಾರೆ. ಇದೀಗ ನತಾಶಾ ಸ್ಟ್ಯಾಂಕೋವಿಚ್ ಪಾಂಡ್ಯ ಎನ್ನುವ ಯೂಸರ್ ನೇಮ್ ಹೊಂದಿದ್ದ ನತಾಶಾ ಇದೀಗ ತಮ್ಮ ಹೆಸರಿನ ಜತೆಗಿದ್ದ ಪಾಂಡ್ಯ ಸರ್ ನೇಮ್ ಕೈಬಿಟ್ಟಿದ್ದಾರೆ. ಇದು ಇಬ್ಬರ ದಾಂಪತ್ಯ ಜೀವನ ಹದಗೆಟ್ಟಿದೆಯಾ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಮಾರ್ಚ್ 04ರಂದು ನತಾಶಾ ಸ್ಟ್ಯಾಂಕೋವಿಚ್ ಅವರ ಹುಟ್ಟುಹಬ್ಬವಿತ್ತು.
ಆದರೆ ಪತ್ನಿ ಬರ್ತ್ಡೇ ಗೆ ಪಾಂಡ್ಯ ಶುಭಕೋರಿರಲಿಲ್ಲ. ಅದೇ ರೀತಿ ಪಾಂಡ್ಯ ತಮ್ಮ ಮಗನ ಜತೆ ನತಾಶಾ ಇರುವ ಫೋಟೋ ಬಿಟ್ಟುಉಳಿದೆಲ್ಲಾ ನತಾಶಾ ಫೋಟೋಗಳನ್ನು ಪಾಂಡ್ಯ ತಮ್ಮ ಸೋಷಿಯಲ್ ಮೀಡಿಯಾದಿಂದ ಅಳಿಸಿ ಹಾಕಿದ್ದಾರೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಂದೆಡೆ, ನತಾಶಾ ತನ್ನ ಇನ್ಸ್ಟಾಗ್ರಾಮ್ ಬಯೋದಿಂದ ಪಾಂಡ್ಯ ಉಪನಾಮವನ್ನು ತೆಗೆದುಹಾಕಿದ್ದಾರೆ. ಅಲ್ಲದೇ ಕಳೆದ ಕೆಲವು ದಿನಗಳಿಂದ ಹಾರ್ದಿಕ್ ಜೊತೆಗಿನ ಫೋಟೋಗಳು ಶೇರ್ ಆಗುತ್ತಿಲ್ಲ. ಹೀಗಾಗಿ ಇವರಿಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಆದರೆ, ಈ ಬಗ್ಗೆ ಇಬ್ಬರೂ ಅಧಿಕೃತ ಮಾಹಿತಿ ನೀಡಿಲ್ಲ.