ಮುಂಬೈ:- ಮಾಂಸ ಸೇವನೆ ಬಿಡುವಂತೆ ಪ್ರಿಯಕರ ಒತ್ತಡ ಮಾಡಿದ ಹಿನ್ನೆಲೆ ಮನನೊಂದು ಏರ್ ಇಂಡಿಯಾ ಪೈಲಟ್ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ.
ಈ ಘಟನೆ ಮುಂಬೈನಿಂದ ಅಂಧೇರಿಯ ಮರೋಲ್ ಪ್ರದೇಶದಲ್ಲಿ ಜರುಗಿದೆ. 25 ವರ್ಷದ ಸೃಷ್ಟಿ ತುಲಿ ಆತ್ಮಹತ್ಯೆಗೆ ಶರಣದ ಪೈಲಟ್. ಈಕೆ ಫ್ಲ್ಯಾಟ್ವೊಂದರಲ್ಲಿ ಡೇಟಾ ಕೇಬಲ್ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ. ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಆಕೆಯ ಪ್ರಿಯಕರ ಆದಿತ್ಯ ಪಂಡಿತ್ನನ್ನು ಬಂಧಿಸಲಾಗಿದೆ.
ಆದಿತ್ಯ ಪದೇಪದೇ ಸೃಷ್ಟಿಯನ್ನು ಸಾರ್ವಜನಿಕವಾಗಿ ಅವಮಾನಿಸುವುದಲ್ಲದೇ ಆಕೆಯ ಆಹಾರ ಪದ್ಧತಿ ಬದಲಾಯಿಸುವಂತೆ ಹೇಳುತ್ತಿದ್ದ. ಅಲ್ಲದೇ ಮಾಂಸಾಹಾರ ಸೇವನೆ ಬಿಡುವಂತೆ ಆಕೆಯ ಮೇಲೆ ಒತ್ತಡ ಹೇರಿದ್ದ ಎಂದು ಸೃಷ್ಟಿ ಚಿಕ್ಕಪ್ಪ ಆರೋಪಿಸಿದ್ದಾರೆ. ಈ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿತ್ತು ಎನ್ನಲಾಗಿದೆ.