ಬೆಂಗಳೂರು: ಅದು ಬೆಂಗಳೂರು ನಗರದಲ್ಲಿ ಆಗಷ್ಟೆ ಶುರುವಾಗುತ್ತಿದ್ದ ಮತ್ತು ದೊಡ್ಡ ಮಟ್ಟದ ದುಡ್ಡು ಬರುತಿದ್ದ ಒಂದು ದಂಧೆ. ಅದುವೆ ಕೇಬಲ್ ದಂಧೆ. ಈ ದಂಧೆಗಾಗಿ ನಡೆದಿದ್ದ ಒಂದು ನಟೋರಿಯಸ್ ರೌಡಿಯ ಕೊಲೆಯಲ್ಲಿ ಭಾಗಿಯಾಗಿದ್ದ ಮತ್ತು ಕೊಲೆಯ ನಂತರ ಜೈಲು ಸೇರಿ ಬೇಲ್ ಮೇಲೆ ಹೊರಬಂದು ಕಳೆದ ಇಪತ್ತು ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡು ಸಮಾಜದಲ್ಲಿ ಸಿನಿಮಾ ನಟ ಮತ್ತು ನಿರ್ದೇಶಕ ಎಂಬ ಹಣೆಪಟ್ಟಿಯಲ್ಲಿ ಜೀವನ ನಡೆಸುತಿದ್ದ ಗಜೇಂದ್ರ ಅಲಿಯಾಸ್ ಗಜ ಎಂಬಾತನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈತ ಪುಟಾಣಿ ಪವರ್ ಮತ್ತು ರುದ್ರ ಎಂಬ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಆದಾದ ಮೇಲೆ 2004ರಲ್ಲಿ ಕೊತ್ತ ರವಿಯನ್ನು ಹೊಡೆದು ಉರುಳಿಸುತ್ತಾರೆ. ಆ ಕೇಸ್ನಲ್ಲಿ ಎಂಟನೇ ಆರೋಪಿ ಆಗಿದ್ದವರೇ ಗಜೇಂದ್ರ ಅಲಿಯಾಸ್ ಗಜ. ಕೊಲೆ ಬಳಿಕ ಜೈಲು ಸೇರಿ ನಂತರ ಬೇಲ್ ಪಡೆದು ಹೊರ ಬಂದವರು ಸಿನಿಮಾ ನಟ ಮತ್ತೆ ಸಹ ನಿರ್ದೇಶಕ, ಕೊನೆಗೆ ನಿರ್ದೇಶಕನ ಕೆಲಸ ಮಾಡಿಕೊಂಡು ಕನ್ನಡ ಮತ್ತು ತಮಿಳು ಸಿನಿಮಾ ರಂಗದಲ್ಲಿ ಇದ್ದರು. ಆದರೆ ಈಗ ಸಿಸಿಬಿ ಪೊಲೀಸರು ಗಜೇಂದ್ರ ಅವರನ್ನು ಅರೆಸ್ಟ್ ಮಾಡಿದ್ದಾರೆ.
ನಗರದಲ್ಲಿ ಹೀಗೆ ಹಲವಾರು ವರ್ಷಗಳಿಂದ ಪೊಲೀಸ್ ಕೈಗೆ ಸಿಗದೆ ಮತ್ತು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುವವರನ್ನು ಸಿಸಿಬಿ ಅಧಿಕಾರಿಗಳು ಹುಡುಕಿ ಹುಡುಕಿ ಅರೆಸ್ಟ್ ಮಾಡುವ ಕೆಲಸ ಮಾಡ್ತಿದ್ದಾರೆ. ತಲೆಮರಿಸಿಕೊಂಡಿದ್ದಇಪತ್ತು ವರ್ಷಗಳ ನಂತರ ಗಜೇಂದ್ರ ಈಗ ಮತ್ತೆ ಜೈಲು ಸೇರಿದ್ದಾನೆ.