ವಿರುಪಾಕ್ಷಗೌಡ ಪಾಟೀಲ, ತುಳಸರಡ್ಡಿ ಗಾಡರಡ್ಡಿ, ನಿಂಗಪ್ಪ ಈರಗಾರ ಹಾಗೂ ನೀಲವ್ವ ಪಾಟೀಲ ಶಿಕ್ಷೆಗೊಳಗಾದವರು. ಆಸ್ತಿಗೆ ಸಂಬಂಧಿಸಿದಂತೆ 2011ರ ಡಿಸೆಂಬರ್ 11ರಂದು ಮಾರ್ತಂಡಗೌಡ ಅವರ ಕೊಲೆಯಾಗಿತ್ತು.
ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ ಹಾಗೂ ರಾಮಚಂದ್ರ ಡಿ.ಹುದ್ದಾರ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪಿರ್ಯಾದಿ ಪರವಾಗಿ ಎಲ್.ಎಸ್. ಸುಳ್ಳದ ವಾದಿಸಿದ್ದರು.
ಇದಕ್ಕೂ ಮುಂಚೆ 2019ರ ಮಾರ್ಚ್ 30ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆ ಮಾಡಿ ಆದೇಶಿಸಿತ್ತು. ಈ ಆದೇಶವನ್ನು ಧಾರವಾಡ ಹೈಕೋರ್ಟ್ ರದ್ದುಪಡಿಸಿ, ಶಿಕ್ಷೆ ವಿಧಿಸಿದೆ.