ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ ಮಾಡಿದ ಘಟನೆ ನಗರದ HSR ಲೇಔಟ್ʼನಲ್ಲಿ ನಡೆದಿದ್ದು ಪತಿ ವೆಂಕಟರಾಮಣ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಲಾಗಿದೆ.ಸದ್ಯ ಹೆಚ್ ಎಸ್ ಆರ್ ಲೈಔಟ್ ಪೊಲೀಸರಿಂದ ಪತ್ನಿ ಹಾಗೂ ಪ್ರಿಯಕರನ ಬಂಧನವಾಗಿದೆ.
ಜನವರಿ 6 ರಂದು ಆರೋಪಿ ನಿತೇಶ್ ನನ್ನ ಗಂಡ ಮನೆಯಲ್ಲಿಲ್ಲ ಎಂದು ಮನೆಗೆ ಕರೆಸಿಕೊಂಡಿದ್ಲು ಈ ವೇಳೆ ದಿಢೀರ್ ಗಂಡ ವೆಂಕಟರಾಮಣ ಮನೆಗೆ ಬಂದಿದ್ದ ಆಗ ಇಬ್ಬರು ರೂಮ್ ನಲ್ಲಿದ್ದನ್ನ ಕಂಡು ಗಂಡ ಶಾಕ್ ಆಗಿದ್ದ ಈ ವೇಳೆ ಇಬ್ಬರು ಸೇರಿ ವೆಂಕಟರಾಮಣ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಲಾಗಿದೆ.
ಮೃತದೇಹವನ್ನು ಮನೆಯ ಹೊರಗೆ ಶೌಚಾಲಯದ ಬಳಿ ಇಟ್ಟು ಅಸಹಜ ಸಾವು ಎಂದು ಸೀನ್ ಕ್ರಿಯೇಟ್ ಮಾಡುವ ಪ್ಲಾನ್ ಮಾಡಿ ಚೂಪಾದ ಕಲ್ಲು ಇಟ್ಟು ಕಲ್ಲಿನ ಮೇಲೆ ಬಿದ್ದಿದ್ದಾನೆ ಎಂದು ಸೀನ್ ಕ್ರೀಯೆಟ್ ಮಾಡಿ ಬಳಿಕ ಬೆಳಗ್ಗೆ ಗಂಡ ಸಾವನ್ನಪ್ಪಿದ್ದಾನೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ನಂದಿನಿ
ಸ್ಥಳಕ್ಕೆ ಬಂದ ಪೊಲೀಸರಿಗೆ ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲು ಆದರೆ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿದಾಗ ಕೊಲೆ ಎಂಬುದು ಪತ್ತೆಯಾಗಿದ್ದು ಈ ವೇಳೆ ಪೊಲೀಸರಿಗೂ ಸ್ಥಳ ಪರಿಶೀಲನೆ ಮಾಡಿದಾಗ ಕೊಲೆ ಎಂಬುದಾಗಿ ಅನುಮಾನ ಬಂದಿತ್ತು ಮೊದಲು ಪೊಲೀಸರ ಪತ್ನಿ ನಂದಿನಿ ಮೇಲೆ ಅನುಮಾನ ವ್ಯಕ್ತಪಡಿಸಿ ನಿಗಾ ಇಟ್ಟಿದ್ರು ಮರಣೋತ್ತರ ವರದಿ ಬಂದ ಬಳಿಕ ಪತ್ನಿ ನಂದಿನಿಯನ್ನ ವಿಚಾರಿಸಿದಾಗ ನನ್ನ ಗಂಡನನ್ನು ಕಳೆದಕೊಂಡಿದಿನಿ ಅಂತ ನಾಟಕ ಆಡಿದ್ಲು.
ಪೊಲೀಸರ ತಮ್ಮ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬಯಲಿಗೆ ಬಂದಿದ್ದು ಈ ವೇಳೆ ಪ್ರಿಯಕರ ನಿತೀಶ್ ಕುಮಾರ್ ಜೊತೆ ಸೇರಿ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾಳೆ
ನಿತೀಶ್ ಹಾಗೂ ನಂದಿನಿ ಇಬ್ಬರು ಆಂಧ್ರಪ್ರದೇಶ ಸತ್ಯ ಸಾಯಿ ತಾಲೂಕಿನವರು ಬಾಲ್ಯದಿಂದ ಸ್ನೇಹಿತರಾಗಿದ್ದವರು ಬಳಿಕ ಇಬ್ಬರು ಪ್ರೀತಿಸಿದ್ದರು ಗಂಡ ವೆಂಕಟರಾಮಣ ಮನೆಯಲ್ಲಿ ಇಲ್ಲದಿರುವಾಗ ಕರೆ ಮಾಡಿ ಕರೆಸಿಕೊಳ್ಳುತ್ತಿದ್ದ ನಂದಿನಿ ಆಂಧ್ರದಿಂದ ಪ್ರೇಯಸಿಗಾಗಿ ಹೆಚ್ ಎಸ್ ಆರ್ ಲೇಔಟ್ ಮನೆಗೆ ಬಂದು ಹೋಗುತ್ತಿದ್ದ
ಸದ್ಯ ಇಬ್ಬರನ್ನೂ ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿರುವ ಹೆಚ್ ಎಸ್ ಆರ್ ಲೇಔಟ್ ಪೊಲೀಸರು