ಬೆಂಗಳೂರು: ಅವರೆಲ್ಲರೂ ಮೀಸೆ ಚಿಗುರಿದ್ದ ಚಿಕ್ಕ ವಯಸ್ಸಿನ ಯುವಕರು.. ಹೊಸವರ್ಷಕ್ಕೆ ಪಾರ್ಟಿ ಮಾಡ್ಬೇಕು ಎಂದೆಲ್ಲಾ ಅಂದುಕೊಂಡಿದ್ದರು.. ಆದರೆ ಅವರ ಬಳಿ ಖರ್ಚು ಮಾಡೋಕೆ ಹಣವಿರಲಿಲ್ಲ.. ಹಣಕ್ಕಾಗಿ ಎರಡೆರಡು ಕಿಡ್ನಾಪ್ ಮಾಡಿದ್ರು.. ಒಂದು ಕೇಸ್ ಫೆಲ್ಯೂರ್ ಮತ್ತೊಂದ್ರಲ್ಲಿ ಸಕ್ಸಸ್ ಆದವರು ಸಿಕ್ಕಿಬೀಳುವ ಭಯದಲ್ಲಿ ಮಾಡಿದ್ದು ಮಾತ್ರ ಭೀಕರ ಕೃತ್ಯ..
ಈತನೇ ನೋಡಿ ಕೊಲೆಯಾಗಿ ಪ್ರಾಣಿಗಳಿಗೆ ಆಹಾರವಾದ ಗುರುಸಿದ್ದಪ್ಪ.. ಈತನಿಗೆ ಪರಿಚಯವಿದ್ದ ಸಂಜಯ್ ಎಂಬಾತ ಕಾಫಿಗಾಗಿ ಡಿ. 30 ರಂದು ಕರೆದಿದ್ದಾರೆ. ಈತ ಹೋಗಿದ್ದೆ ತಡ ಸಂಜಯ್ , ಆನಂದ , ಹನುಮಂತ , ತಿಮ್ಮ ಸೇರಿಕೊಂಡು ಗುರುಸಿದ್ದಪ್ಪನನ್ನು ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್ ಮಾಡಿದವರೇ ಗುರುಸಿದ್ದಪ್ಪನ ಬಳಿ ಪತ್ನಿಗೆ ಫೋನ್ ಮಾಡಿಸಿ ತಾನೂ ಸೂಚಿಸೋ ವ್ಯಕ್ತಿಗೆ ಹಣ ನೀಡುವಂತೆ ತಿಳಿಸಿದ್ದಾನೆ. ಅದರಂತೆ ಗುರುಸಿದ್ದಪ್ಪನ ಪತ್ನಿ 4.5 ಲಕ್ಷ ಹಣ ನೀಡಿದ್ದಾಳೆ.. ಆರೋಪಿಗಳಿಗೆ ಹಣ ತಲುಪುತ್ತಿದ್ದಂತೆ ಎಣ್ಣೆ ಹೊಡಯೋ ಪ್ಲಾನ್ ಮಾಡಿ ಮಂಚನಬೆಲೆ ಡ್ಯಾಂ ಬಳಿ ಹೋಗಿದ್ದಾರೆ.. ಅಷ್ಟೇ ಗುರುಸಿದ್ದಪ್ಪನಿಗೂ ಕುಡಿಸಿ ತಾವೂ ಕುಡಿದ ಆರೋಪಿಗಳು ಕಿಡ್ನಾಪ್ ಮಾಡಿ ಬಿಟ್ಟು ಕಳುಹಿಸಿದ್ರೆ ಪೊಲೀಸ್ ಬಳಿ ತಗ್ಲಾಕ್ಕೊಳ್ಳೋ ಸಾಧ್ಯತೆಯಿದೆ ಎಂದು ಗುರುಸಿದ್ದಪ್ಪನಿಗೆ ಚಾಕುವಿನಿಂದ ಇರಿದು ಕೊಂದು ಅರಣ್ಯ ಪ್ರದೇಶದಲ್ಲಿ ಎಸೆದು ಬಂದಿದ್ದಾರೆ..
ಈ ಬೋಡರನ್ನು ನೋಡಿ ಇವರೇ ಹಂತಕರು..ಸಂಜಯ್ , ಆನಂದ್ ಮತ್ತು ಹನುಮಂತ.. ಗುರುಸಿದ್ದಪ್ಪನನ್ನು ಕೊಂದ ಪಾಪಿಗಲಕಜ ಗೋವಾಕ್ಕೆ ಹೋಗಿ ಕುಡಿದು ಮಸ್ತ್ ಮಜಾ ಮಾಡಿಬಂದಿದ್ದಾರೆ. ಅಷ್ಟೇಯಲ್ಲಾ ಪಾಪಕೃತ್ಯ ಮಾಡಿ ಧರ್ಮಸ್ಥಳಕ್ಕೆ ಹೋಗಿ ಮುಡಿಕೊಟ್ಟು ಬಂದಿದ್ದಾರೆ. ಆದರೆ ಇವರೇ ಮಾಡಿದ್ದ ಮತ್ತೊಂದು ಕಿಡ್ನಾಪ್ ಕೇಸ್ ನಲ್ಲಿ ಇವರನ್ನು ಜ್ಞಾನಭಾರತಿ ಪೊಲೀಸರು ಹುಡುಕುತ್ತಿದ್ದರು.. ಇವರು ಗುರುಸಿದ್ದಪ್ಪನನ್ನು ಕಿಡ್ನಾಪ್ ಮಾಡುವ ಮೊದಲು ಸಂಜಯ್ ಪಂಡಿತ್ ಎಂಬಾತನ ಕಿಡ್ನಾಪ್ ಗೆ ಪ್ಲಾನ್ ಮಾಡಿ ಇತನ ಸಹಚರ ಕಿಶನ್ ಕುಮಾರ್ ನನ್ನು ಕಿಡ್ನಾಪ್ ಮಾಡಿದ್ರು.. ಕಿಶನ್ ಬಳಿ ಹಣವಿಲ್ಲ ಎಂದು ತಿಳಿದು ಕುಂದಾಪುರದಲ್ಲಿದ್ದ ಸಂಜಯ್ ಪಂಡಿತ್ ಗೆ ಫೋನ್ ಕುಂದಾಪುಕ್ಕೆ ಕಿಶನ್ ನನ್ನು ಕರೆದುಕೊಂಡು ಹೋಗಿದ್ರು ಈ ವೇಳೆ ಕಿಶನ್ ತಪ್ಪಿಸಿಕೊಂಡಿದ್ದ.. ಆ ಬಳಿಕವೇ ಗುರುಸಿದ್ದಪ್ಪನನ್ನು ಕಿಡ್ನಾಪ್ ಮಾಡಿದ್ದರು.. ಈ ಎರಡು ಪ್ರಕರಣದಲ್ಲಿ ಗುರುಸಿದ್ದಪ್ಪನ ಮಿಸ್ಸಿಂಗ್ ಕೇಸ್ ಕಿಶನ್ ರ ಕಿಡ್ನಾಪ್ ಕೇಸ್ ನಲ್ಲಿ ಸಾಮ್ಯತೆ ಕಂಡು ಆರೋಪಿಗಳ ಬಗ್ಗೆ ನಿಖರ ಮಾಹಿತಿ ಪಡೆದು ಜ್ಞಾನಭಾರತಿ ಪೊಲೀಸರು ಆರೋಪಿಗಳ ಹೆಡೆಮುರಿಕಟ್ಟಿದ್ದರು..
ಗುರುಸಿದ್ದಪ್ಪ ಆಟೋಮೊಬೈಲ್ಸ್ ನ ಸ್ಪೇರ್ ಪಾರ್ಟ್ ಡಿಲಿವರಿ ಮಾಡ್ತಿದ್ದ. ಸಂಜಯ್ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ NNಬೈಕ್ ಪಾಯಿಂಟ್ ಎಂಬ ಗ್ಯಾರೇಜ್ ನಡೆಸುತ್ತಿದ್ದು ಪರಸ್ಪರ ಪರಿಚಯವಾಗಿದ್ರು.. ಇದನ್ನೇ ಬಂಡವಾಳ ಮಾಡಿಕೊಂಡ ಸಂಜಯ್ ಗುರುಸಿದ್ದಪ್ಪನನ್ನು ಕಿಡ್ನಾಪ್ ಮಾಡಲು ಸ್ಕೆಚ್ ಹಾಕಿ ಸಹಚರ ಆನಂದ್, ಹನುಮಂತ, ತಿಮ್ಮನ ಜೊತೆ ಸೇರಿ ಕಿಡ್ನಾಪ್ ಮಾಡಿ ಕೊಲೆಯನ್ನು ಮಾಡಿ ಸಿಕ್ಕಿಬಿದ್ದಿದ್ದಾರೆ. ಆದರೆ ಸ್ಥಳೀಯರು ಸಂಜಯ್ ಅಮಾಯಕನಂತಿದ್ದ ಎಂದು ಅಚ್ಚರಿಪಟ್ಟಿದ್ದಾರೆ.
ಸದ್ಯ ಜ್ಞಾನಭಾರತಿ ಪೊಲೀಸ್ರು 2.40 ಲಕ್ಷ ನಗದು ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅದೇನಾದ್ರು ಹಣಕ್ಕಾಗಿ ನಂಬಿದವರನ್ನು ಕರೆದುಕೊಂಡು ಹೋಗಿ ದ್ರೋಹ ಬಗೆದು ಕೊಲೆ ಮಾಡಿದ್ದು ಮಾತ್ರ ದುರಂತವೇ ಸರಿ.