ಬೆಂಗಳೂರು:- ಹಂತಕರು ವ್ಯಕ್ತಿಯೋರ್ವನನ್ನು ಕೊಲೆಗೈದು ಶವವನ್ನ ಮೋರಿಗೆ ಬಿಸಾಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
ಜಾಲಹಳ್ಳಿಯ ಹೆಚ್ಎಂಟಿ ರೋಡ್ ನ ಮೋರಿಯಲ್ಲಿ ಶವ ಪತ್ತೆಯಾಗಿದೆ. ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ. ಹತ್ಯೆ ಬಳಿಕ ಶವವನ್ನ ಮೋರಿಗೆ ಎಸೆದು ಹಂತಕರು ಎಸ್ಕೇಪ್ ಆಗಿದ್ದಾರೆ. ಮೃತನ ಹೆಸ್ರು ಇನ್ನೂ ಪತ್ತೆಯಾಗಿಲ್ಲ. ಜಾಲಹಳ್ಳಿ ಪೊಲೀಸ್ರಿಂದ ಕೊಲೆ ಪ್ರಕರಣ ದಾಖಲಾಗಿದೆ.
ಮೃತನ ಮಾಹಿತಿ ಪತ್ತೆಹಚ್ಚಲು ಜಾಲಹಳ್ಳಿ ಪೊಲೀಸ್ರು ಮುಂದಾಗಿದ್ದಾರೆ.