ಹುಬ್ಬಳ್ಳಿ:- ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಮಾತ್ರವಲ್ಲ 42 ಕೇಸ್ ಗಳನ್ನು ಹಿಂಪಡೆಯಲಾಗಿದೆ. ಪ್ರಮುಖವಾಗಿ ಹಳೇ ಹುಬ್ಬಳ್ಳಿ ಕೇಸ್ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ಕ್ಯಾಬಿನೆಟ್ ನಲ್ಲಿ ಉಪಸಮಿತಿ ಮಾಡಿ, ವರದಿ ಕೊಟ್ಟಿದೆ ಒಪ್ಪಿಕೊಂಡಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದಲ್ಲಿ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ನವರು ಮುಸ್ಲಿಂ ಓಲೈಕೆ ಮಾಡುತ್ತಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೋರ್ಟ್ ಏನ್ ಹೇಳುತ್ತೆ ಎಂಬುದು ವಾದ ಎಂದರು.
ಬಿಜೆಪಿಯವರು ಬಿಲ್ಕೀಸ್ ಬಾನು ಕೇಸ್ ನಲ್ಲಿ ಎರಡು ವರ್ಷಾ ಮುಂಚೆನೆ ಬಿಟ್ಟರು, ಯಾವ ಆಧಾರದ ಮೇರೆಗೆ ಬಿಟ್ಟರು. ಶಿಕ್ಷೆ ಮುಗಿಯದೆ ಗುಜರಾತ್ ಸರ್ಕಾರ ಅವರನ್ನು ಬಿಟ್ಟಿತು ಎಂದರು.
ಬಾಬಾ ರಾಮ್ ರಹೀಮ್ 15 ಬಾರಿ ಪೇರೋಲ್ ನಲ್ಲಿ ಹೊರ ಬರ್ತಾರೆ. ಇದರ ಅರ್ಥ ಏನು ? ಇದು ತುಷ್ಟಿಕರಣ ರಾಜಕಾರಣ ಅಲ್ಲವಾ? ಎಂದು ಪ್ರಶ್ನಿಸಿದರು.
ಸಹಜವಾಗಿ ಈ ರೀತಿ ಬಿಡುಗಡೆಯಾಗುವುದು ಇದೆ. ಮುಸ್ಲಿಂ ಅಂತ ಅಂದಕೂಡಲೇ ಬಿಜೆಪಿಯವರು ಬರ್ತಾರೆ. ಬಿಜೆಪಿ ಆರೋಪಕ್ಕೆ ನಾವು ಉತ್ತರ ಕೊಡಬೇಕಲ್ಲವಾ ಎಂದು ನುಡಿದರು.
ಭಯೋತ್ಪಾದಕ ಕೇಸ್ ನ್ನು ಹಾಕಲಾಗಿದೆ. ಕರ್ನಾಟಕದಲ್ಲಿ ಇಂತಹ ಎಷ್ಟೋ ಘಟನೆಗಳು ಆಗಿವೆ. ಬಿಜೆಪಿಯವರಿಗೆ ಈ ಬಗ್ಗೆ ಕೇಳಬೇಕು ಅಲ್ಲವಾ ಎಂದರು.
ಕ್ಯಾಬಿನೆಟ್ ನಿರ್ಧಾರಕ್ಕೆ ನಾನು ನಿಂತಿದ್ದೇನೆ. ಇನ್ನೂ 42 ಕೇಸ್ ವಾಪಾಸ್ ಪಡೆದಿದ್ದೇವೆ. ಅದರಲ್ಲಿ ಪೊಲೀಸ್ ಮೇಲೆ ಹಲ್ಲೆ ಆಗಿಲ್ವಾ? ಬಿಡೋಕೆ ಕಾರಣ ನೂರು ಇರುತ್ತೆ ಕೇಳಿ ಎಂದರು
ವಿನಯ್ ಕುಲಕರ್ಣಿ ಕೇಸ್ ಸಿಬಿಐಗೆ ನೀಡುವಂತೆ ಒತ್ತಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾನೂನಾತ್ಮಕವಾಗಿ ಅವರೇನು ಒತ್ತಾಯ ಮಾಡುತ್ತಾರೆ, ಮಾಡಲಿ. ಸರ್ಕಾರ ನಿರ್ಧಾರ ತಗೆದುಕೊಳ್ಳುತ್ತೆ .ಅದರ ಬಗ್ಗೆ ನಾನೇನು ಮಾತನಾಡೋಲ್ಲ ಎಂದರು.