ಮಂಡ್ಯ: ಪರಾಜಿತ ಅಭ್ಯರ್ಥಿ ಮುನಿರಾಜು ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವಂತೆ ದೇವರ ಮೊರೆ ಹೋಗಿದ್ದಾರೆ. ಹೌದು ದೇವರ ಮೊರೆ ಹೋಗಿರುವ ಅವರು, “ನಾನು ತಪ್ಪು, ಮೋಸ ಮಾಡಿದ್ರೆ ನನ್ನ ವಂಶ ನಿರ್ವಂಶವಾಗಲಿ. ಇಲ್ಲ ತನ್ನ ವಿರುದ್ದ ಅಪಪ್ರಚಾರ ಮಾಡಿದವರ ವಂಶ ನಿರ್ನಾಮವಾಗಲಿ” ಎಂದು ಅಪ್ರಚಾರ ಮಾಡಿದವರ ವಿರುದ್ಧ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಿಗೆ ದೂರು ನೀಡಿದ್ದಾರೆ. ಮಳವಳ್ಳಿ ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು ದೇವರ ಮುಂದೆ ಕರ್ಫೂರ ಹಚ್ಚಿ ಶಫಥಗೈದಿದ್ದಾರೆ.
ಮಳವಳ್ಳಿ ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು ಚುನಾವಣೆಗೂ ಮೂರು ದಿನಗಳ ಕಾಲ ನಾಪತ್ತೆ ಆಗಿದ್ದರು. ಕೊನೆ ಕ್ಷಣದಲ್ಲಿ ಕ್ಷೇತ್ರದ ಜನರ ಕೈಗೆ ಸಿಗಲಿಲ್ಲ ಎಂದು ಕೆಲ ನಾಯಕರು ಆರೋಪಿಸಿದ್ದರು. ಅದಲ್ಲದೇ ಬೇರೆ ಪಕ್ಷಗಳೊಂದಿಗೆ ಮುನಿರಾಜು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದೂ ಆರೋಪ ಹೊರಿಸಲಾಗಿದೆ. ಇತ್ತಬದಿಯಲ್ಲಿ ಕೆಲವರು ಅಪಪ್ರಚಾರ ಮಾಡಿದ್ದ ಬೆನ್ನಲ್ಲೇ ಮುನಿರಾಜು ಸೋಲು ಕಂಡಿದ್ದರು. ಬಿಜೆಪಿ ಅಭ್ಯರ್ಥಿ ಮುನಿರಾಜು, ಕೇವಲ 24 ಸಾವಿರ ಮತಗಳಿಸಲು ಶಕ್ತವಾಗಿದ್ದರು.
ಇದೀಗ ಅಪಪ್ರಚಾರದ ವಿರುದ್ದ ಸಿಡಿದೆದ್ದಿರುವ ಮುನಿರಾಜು ದೇವರ ಮೊರೆ ಹೋಗಿದ್ದಾರೆ. ಮಳವಳ್ಳಿಯ ಮಾರೇಹಳ್ಳಿ ಲಕ್ಷ್ಮಿ ನರಸಿಂಹ ಸ್ವಾಮಿ ಮುಂದೆ ತೆಂಗಿನ ಕಾಯಿಗೆ ಕರ್ಫೂರ ಹಚ್ಚಿ, ಈಡುಗಾಯಿ ಹೊಡೆದು ದೇವರಿಂದ ಶಿಕ್ಷಗೆ ಒತ್ತಾಯ ಮಾಡಿದ್ದು ಅಪಪ್ರಚಾರಗೈದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆ ಸಂದರ್ಭದಲ್ಲಿ ಅವರು “ನಾನು ಯಾವುದೇ ತಪ್ಪು, ಮೋಸ ಮಾಡಿಲ್ಲ. ಹಾಗೇನಾದ್ರು ತಪ್ಪು ಮಾಡಿದ್ರೆ ನನ್ನ ವಂಶ ನಿರ್ವಂಶವಾಗಲಿ. ಇಲ್ಲ ನನ್ನ ವಿರುದ್ದ ಅಪಪ್ರಚಾರ ಮಾಡಿದವರಿಗೆ ದೇವರೆ ಶಿಕ್ಷೆ ಕೊಡಲಿ” ಎಂದು ಮನವಿ ಮಾಡಿದ್ದಾರೆ.