ನನ್ನ ಕನಸೆಲ್ಲಾ ನುಚ್ಚು ನೂರಾಯ್ತು ಎಂದು ಹೇಳುವ ಮೂಲಕ ಹುತಾತ್ಮ ಯೋಧನ ಪತ್ನಿ ಕಣ್ಣೀರು ಹಾಕಿದ್ದಾರೆ.
ಕಳೆದ ವರ್ಷದ ಜುಲೈನಲ್ಲಿ ಸಿಯಾಚಿನ್ನಲ್ಲಿ ಹುತಾತ್ಮನಾದ ಕ್ಯಾಪ್ಟನ್ ಅನ್ಶುಮಾನ್ ಸಿಂಗ್ ಅವರಿಗೆ ಮರಣೋತ್ತರವಾಗಿ ದೇಶದ ಎರಡನೇ ಗ್ಯಾಲಂಟ್ರಿ ಪ್ರಶಸ್ತಿಯಾದ ಕೀರ್ತಿ ಚಕ್ರ ಪ್ರಶಸ್ತಿ ಘೋಷಿಸಲಾಗಿದ್ದು, ಪತಿಯ ಪರವಾಗಿ ಅವರ ಪತ್ನಿ ಸ್ಮೃತಿ ಸಿಂಗ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಸ್ಮೃತಿ ಸಿಂಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೀರ್ತಿ ಚಕ್ರ ಪ್ರಶಸ್ತಿ ನೀಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಸ್ಮೃತಿ ಸಿಂಗ್ ಮಾತನಾಡಿದ್ದು, ಪತಿಯ ಜತೆ ಕಳೆದ ದಿನಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ
ನನ್ನ ಗಂಡ ಅಂಶುಮಾನ್ ಜೊತೆ ಅವರು ಸಾಯುವ ಹಿಂದಿನ ದಿನ ಮನೆ, ಮಗುವಿನ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದೆವು. ಮರುದಿನ ಬೆಳಗ್ಗೆ ಅವರು ಸಾವನ್ನಪ್ಪಿರುವ ಸುದ್ದಿ ಬಂದಿತು. ಅದೆಲ್ಲ ಆಗಿ 1 ವರ್ಷವಾದರೂ ಆ ಸುದ್ದಿ ಸುಳ್ಳೇನೋ ಎಂದೇ ನನಗೆ ಅನಿಸುತ್ತಿತ್ತು. ಅಂಶುಮಾನ್ ಯಾವಾಗಲೂ ದೇಶಕ್ಕೋಸ್ಕರವೇ ಬದುಕಿದ್ದವರು. ಅವರು ನಿಜವಾಗಲೂ ಹೀರೋ. ತಮ್ಮ ಜೀವವನ್ನು ಲೆಕ್ಕಿಸದೆ ಇನ್ನೂ ಮೂರು ಕುಟುಂಬಗಳನ್ನು ಉಳಿಸಿದ ಅವರು ಏನೇನೋ ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ. ಅಂಥದ್ದರಲ್ಲಿ ನಾವು ಅವರ ಅಗಲಿಕೆಯ
ಕಷ್ಟವನ್ನು ಸಹಿಸಿಕೊಳ್ಳುವುದು ದೊಡ್ಡದೇನಲ್ಲ ಎಂದು ಸ್ಮೃತಿ ಸಿಂಗ್ ಹೇಳಿದ್ದಾರೆ.
ನನ್ನದು ಮತ್ತು ಅಂಶುಮಾನ್ ಅವರದ್ದು ಲವ್ ಎಟ್ ಫಸ್ಟ್ ಸೈಟ್. ನಾವಿಬ್ಬರೂ ಕಾಲೇಜಿನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದೆವು. 1 ತಿಂಗಳು ಒಂದೇ ಕಾಲೇಜಿನಲ್ಲಿ ಓದಿದ್ದೆವು. ಆನಂತರ ಅವರಿಗೆ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ (AFMC) ಸೀಟ್ ಸಿಕ್ಕಿತು. ಹೀಗಾಗಿ, ಇಬ್ಬರೂ ದೂರದ ಊರುಗಳಲ್ಲಿ ಓದಿದೆವು. ನಮ್ಮ ಡಿಸ್ಟನ್ಸ್ ರಿಲೇಷನ್ಶಿಪ್. ಕೊನೆಗೆ ಸೇನೆಯಲ್ಲಿ ವೈದ್ಯರಾಗಿ ಅವರಿಗೆ ಕೆಲಸ ಸಿಕ್ಕಿತು. ನಾನು ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡೆ. 8 ವರ್ಷಗಳ ಕಾಲ ದೂರದಲ್ಲಿದ್ದುಕೊಂಡೇ ಪ್ರೀತಿ ಮಾಡಿದೆವು. ಕಳೆದ ವರ್ಷ ಫೆಬ್ರವರಿಯಲ್ಲಿ ಇಬ್ಬರೂ ಮದುವೆಯಾದೆವು. ಆದರೆ, ಅದಾದ ಎರಡೇ ತಿಂಗಳಲ್ಲಿ ಅವರು ಸಿಯಾಚಿನ್ಗೆ ಶಿಫ್ಟ್ ಆಗಬೇಕಾಯಿತು. ಆಗ ಹೋದವರು ಮತ್ತೆ ವಾಪಾಸ್ ಬರಲೇ ಇಲ್ಲ.” ಎಂದು ಸ್ಮೃತಿ ಸಿಂಗ್ ತಮ್ಮ ಹಾಗೂ ದಿವಂಗತ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಲವ್ ಸ್ಟೋರಿಯನ್ನು ಹೇಳಿದ್ದಾರೆಹೇಳಿದ್ದಾರ
8 ವರ್ಷಗಳ ಕಾಲ ಪ್ರೀತಿ ಮಾಡಿದರೂ ನಾವು ಒಟ್ಟಿಗೇ ಜೀವಿಸಿದ್ದು 2 ತಿಂಗಳು ಮಾತ್ರ. ಅಂಶುಮಾನ್ ಸಾಯುವ ಹಿಂದಿನ ದಿನ ನಾವುಮುಂದಿನ 50 ವರ್ಷಗಳಲ್ಲಿ ನಮ್ಮ ಬದುಕು ಹೇಗಿರುತ್ತದೆ ಎಂಬ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದೆವು. ಮನೆ ಕಟ್ಟಬೇಕು, ಮಕ್ಕಳನ್ನು ಬೆಳೆಸಬೇಕೆಂಬುದರ ಬಗ್ಗೆ ಇಬ್ಬರೂ ಕನಸು ಕಂಡಿದ್ದೆವು. ಆದರೆ, ಮರುದಿನ ಬೆಳಗ್ಗೆ ಎದ್ದಕೂಡಲೆ ಅವರು ಸಾವನ್ನಪ್ಪಿರುವ ವಿಷಯ ತಿಳಿಯಿತು. ನಮ್ಮ ಮನೆಯವರು ಇನ್ನೂ ಆ ಆಘಾತದಿಂದ ಹೊರಬಂದಿಲ್ಲ ಎಂದು ಸ್ಮೃತಿ ಸಿಂಗ್ ಹೇಳಿದ್ದಾರೆ.