ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ರಸ್ತೆಯಲ್ಲಿ ಇತ್ತೀಚೆಗೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಚಾಲಕನ ಅಜಾಗರೂಕತೆ, ಅತಿಯಾದ ವೇಗ ಹೀಗೆ ನಾನ ಕಾರಣಗಳಿಂದ ಅಪಘಾತ ಸಂಭವಿಸುತ್ತಿವೆ.
ಇದಕ್ಕೆ ಬ್ರೇಕ್ ಹಾಕಲು ಫೈನ್ ಸ್ಪೀಡ್ ಲಿಮಿಟ್ ಜಾರಿಗೆ ತರಲಾಗುತ್ತಿದೆ. ಅತಿ ವೇಗವಾಗಿ ಹೋಗುವ ವಾಹನ ಸವಾರರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ.
ಮೈಸೂರು ಹೈವೇಲಿ ಯಾರು ಅತಿ ಸ್ಪೀಡ್ ಆಗಿ ವಾಹನ ಚಲಾಯಿಸುತ್ತಾರೋ ಅಂತಹವರನ್ನು ತಡೆದು ಇನ್ಮುಂದೆ ಫೈನ್ ಹಾಕಲಾಗುತ್ತದೆ.
ಹೀಗಾಗಿ ಹೈ ವೇಲಿ ಬ್ಯಾರಿಕೇಡ್ ಹಾಕಿ ವಾಹನ ಸವಾರರ ವಿರುದ್ಧ ಸಂಚಾರಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.
ಸ್ಪೀಡ್ ಲಿಮಿಟ್ ಕಮ್ಮಿ ಮಾಡುವಂತೆ ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದು, ಹೈವೇಲೆ ವಾಹನಗಳು ಅತಿ ವೇಗವಾಗಿ ಹೋಗ್ತಿದ್ವು. ಇಷ್ಟು ದಿನ 122 ಕಿಲೋ ಮೀಟರ್ ವೇಗದಲ್ಲಿ ಹೋಗ್ತಿದ್ದ ವಾಹನಗಳು, ಈಗ ಸ್ಪೀಡ್ ಲಿಮಿಟ್ 100 ಕಿಲೋ ಮೀಟರ್ ಸ್ಪೀಡ್ ಕಮ್ಮಿ ಮಾಡಿ ಆದೇಶ ಹೊರಡಿಸಲಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ಮೈಸೂರ್-ಬೆಂಗಳೂರು ಎಕ್ಸ್ಪ್ರೆಸ್ ಅಪಘಾತ ವಿಚಾರ ಚರ್ಚೆ ಆಗಿತ್ತು. ಈ ಬೆನ್ನಲ್ಲೇ ಮೈಸೂರ್-ಬೆಂಗಳೂ ಎಕ್ಸ್ಪ್ರೆಸ್ ರಸ್ತೆ ಪರಿಶೀಲನೆ ಮಾಡಿದ್ದ ಎಡಿಜಿಪಿ ಅಲೋಕ್ ಕುಮಾರ್.. ಅಪಘಾತ ಸಂಖ್ಯೆ ಕಮ್ಮಿ ಮಾಡಲು ಸ್ಪೀಡ್ ಲಿಮಿಟ್ ಕಮ್ಮಿ ಮಾಡಲು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರೋ ಎಡಿಜಿಪಿ ಅಲೋಕ್ ಕುಮಾರ್,
ಎಕ್ಸ್ಪ್ರೆಸ್ ರಸ್ತೆಯಲ್ಲಿ ಅತಿ ಹೆಚ್ಚು ವೇಗ ಹೋಗೋರ ವಿರುದ್ಧ ಕ್ರಮ ಕೈಗೊಳ್ಳಲಾಗ್ತಿದೆ. ರಸ್ತೆಯಲ್ಲಿ ಸಂಚಾರ ನಿಯಮ ಪಾಲಿಸಿ.. ದಂಡ ಉಳಿಸೋಕೆ ಅಲ್ಲಾ ಅಂತಾ ಕೋಟ್ ಮಾಡಿ ಟ್ವೀಟ್ ಮಾಡಿದ್ದಾರೆ.