ಮೈಸೂರು: ನನಗೆ ಕುಮಾರಸ್ವಾಮಿ ಕೊನೆ ಕ್ಷಣದಲ್ಲಿ ಸಭಾ ನಾಯಕನ ಸ್ಥಾನ ತಪ್ಪಿಸಿದ್ರು ಎಂದು ಶಾಸಕ ಜಿ.ಟಿ.ದೇವೇಗೌಡ ಆರೋಪಿಸದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನನಗೆ ಕುಮಾರಸ್ವಾಮಿ ಕೊನೆ ಕ್ಷಣದಲ್ಲಿ ಸಭಾ ನಾಯಕನ ಸ್ಥಾನ ತಪ್ಪಿಸಿದ್ರು. ನನಗೆ ಯಾರೊಬ್ಬರು ಪ್ರಚಾರಕ್ಕೆ ಬನ್ನಿ ಎಂದು ಪೋನ್ ಮಾಡಿ ಕರೆಯಲೇ ಇಲ್ಲ.
ನಾನು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ. ನನಗೆ ಪ್ರಚಾರಕ್ಕೆ ಕರೆಯದಿದ್ದರೆ ಹೇಗೆ ಹೇಳಿ? ನನಗೆ ಹೇಳದೆ ಯಾವತ್ತೂ ಹೆಚ್.ಡಿ.ದೇವೇಗೌಡರು ಮೈಸೂರಿಗೆ ಬಂದವರೇ ಅಲ್ಲ. ಆದರೆ ಈಗ ಮೈಸೂರಿಗೆ ಬಂದರೂ, ನನಗೆ ಒಂದು ಮಾತು ಹೇಳುತ್ತಿಲ್ಲ. ಇಷ್ಟು ಬೇಡವಾಗಿದ್ದೇನೆ. ನಾನು ಯಾವ ತಪ್ಪು ಮಾಡಿದ್ದೇನೆ ಹೇಳಿ ಎಂದು ಪ್ರಶ್ನಿಸಿದರು
ಮೈಸೂರಿನಲ್ಲಿ ಕುಮಾರಣ್ಣ ಕುಮಾರಣ್ಣ ಅಂತಾ ಮೊದಲು ಅಚ್ಚೆ ಒತ್ತಿದ್ದು ನಾನೇ. ಇದು ಕುಮಾರಸ್ವಾಮಿಗೆ ಮರೆತು ಹೋಗಿದೆ. ಯಾವುದೋ ಒಂದು ವಿಚಾರಕ್ಕೆ ಕುಮಾರಸ್ವಾಮಿ ನನ್ನ ಏಕವಚನದಲ್ಲಿ ಮನ ಬಂದಂತೆ ಬೈಯ್ದಿದ್ದರು.
ಅವತ್ತೆ ಹೇಳಿದ್ದೆ ನಾನು ಹಿರಿಯ ಇದ್ದೀನಿ ಬೈಯ್ಯ ಬೇಡಿ ಅಂತಾ. ಹೆಚ್.ಡಿ.ದೇವೇಗೌಡರ ಬಳಿ ಈಗ ಕುಮಾರಸ್ವಾಮಿಯದ್ದು ಬಿಟ್ಟರೆ ಬೇರೆ ಯಾರದ್ದು ನಡೆಯುತ್ತಿಲ್ಲ. ಅವರು ಹೇಳಿದ ಜಾಗಕ್ಕೆ ದೇವೇಗೌಡರು ಸೈನ್ ಹಾಕ್ತಿದ್ದಾರೆ ಅಷ್ಟೆ ಎಂದು ಹೇಳಿದರು.