ಮೈಸೂರು: ದೇಶ ದ್ರೋಹಿಗಳನ್ನು ಮಟ್ಟ ಹಾಕುವ ಕೆಲ್ಸ ರಾಜ್ಯ ಸರ್ಕಾರ ಮಾಡ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದೇಶ ದ್ರೋಹಿಗಳನ್ನು ಮಟ್ಟ ಹಾಕುವ ಕೆಲ್ಸ ರಾಜ್ಯ ಸರ್ಕಾರ ಮಾಡ್ತಿಲ್ಲ. ಯಾರು ಏನು ಬೇಕಾದ್ರೂ ಮಾಡಬಹುದು ಅನ್ನೋ ತರ ಆಗಿದೆ.
ತುಷ್ಟೀಕರಣ ನೀತಿ ಇದಕ್ಕೆಲ್ಲ ಕಾರಣವಾಗಿದೆ. ರಾಜ್ಯ ಸರ್ಕಾರ ಏನನ್ನೂ ಕೂಡ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಸತೀಶ್ ಅತ್ಮಹತ್ಯೆ ಆಯ್ತು, ನಮ್ಮ ಹೋರಾಟದ ಬಳಿಕ ಕಾಂಗ್ರೆಸ್ ನ ಒಬ್ಬ ಪುಡಾರಿಯನ್ನೂ ಅರೆಸ್ಟ್ ಮಾಡಿದ್ದಾರೆ ಎಂದು ಆಕ್ರೋಶ ಹೊಹಾಕಿದರು.
ಬೀದರ್ ನಲ್ಲಿ ಎಟಿಎಂ ಕಳ್ಳತನ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಳೆದ ಕೆಲ ದಿನಗಳಲ್ಲಿ ರಾಜ್ಯದಲ್ಲಿ ಅನೇಕ ಘಟನೆಗಳು ನಡೆಯುತ್ತಿವೆ. ಗುಲ್ಬರ್ಗಾದಲ್ಲಿ ಮಹಾಲಕ್ಷ್ಮಿ ಎಂಬ ಬಾಲಕಿ ಮೇಲೆ ಅತ್ಯಾಚಾರ ಆಗಿದೆ. ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ಯಲಾಗಿದೆ. ಮತ್ತೊಂದು ಕಡೆ ಬೀದರ್ ಘಟನೆ… ಎಂದು ಸರ್ಕಾರದ ವಿರುದ್ಧ ಆರೋಪ ಮಾಡಿದರು.