‘ ರಾಮನಗರ: ಲೋಕಸಭಾ ಚುನಾವಣೆ ಫಲಿತಾಂಶ ವಿಚಾರವಾಗಿ ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ.
‘ಈ ಚುನಾವಣೆಯಲ್ಲಿ ನಮ್ಮದು ಜನಬಲ, ಕಾಂಗ್ರೆಸ್ನವರದ್ದು ಹಣಬಲ. ಡಿಕೆ ಬ್ರದರ್ಸ್ರವರ ದೈತ್ಯಶಕ್ತಿ, ಹಣಬಲ, ಅಧಿಕಾರ ಬಲದ ಹೋರಾಟ. ಅವರೇ ಸಮಸ್ಯೆ ಸೃಷ್ಠಿಸಿ ಅವರೇ ಅದನ್ನ ಬಗೆಹರಿಸುತ್ತಾರೆ. ಅಂತವರ ನಡುವೆ ನಮ್ಮದು ರೋಚಕ ಹೋರಾಟ. ಈ ಚುನಾವಣೆ ನಮ್ಮ ಲೆಕ್ಕಕ್ಕೇ ಸಿಗುತ್ತಿಲ್ಲ. ಊಹೆಗೂ ಮೀರಿದ ಫಲಿತಾಂಶ ಬರುತ್ತೆ ಎಂಬ ನಿರೀಕ್ಷೆ ಇದೆ. ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ತಾರೆ ಅನ್ನೋ ವಿಶ್ವಾಸ ಇದೆ. ಆದರೂ ಅವರ ಹಣಬಲ ವರ್ಕೌಟ್ ಆಗುತ್ತಾ ನೋಡಬೇಕು’ ಎಂದರು.
ಮಹಿಳೆಯರಿಗೆ ಎರಡು ಸಾವಿರ ಜಮಾ ಮಾಡಿದ್ದಾರೆ. ಎಲ್ಲರ ಅಕೌಂಟ್ ಗೆ ಹಣ ಹಾಕಿದ್ದೀವಿ, ಮಹಿಳಾ ಮತದಾರರು ಗೆಲ್ತಾರೆ ಅಂತ ಕಾಂಗ್ರೆಸ್ ನವರು ಹೇಳ್ತಾರೆ. ಜನಾಭಿಪ್ರಾಯ ಏನಿದೆ ಎನ್ನುವುದನ್ನು ಕಾದು ನೋಡೋಣ. ನಾವೇನು ಕಾನ್ಫಿಡೆನ್ಸ್ ಕಳೆದುಕೊಂಡಿಲ್ಲ. ನಮಗೆ ಎರಡೂ ಪಕ್ಷಗಳ ಬಲ, ಶಕ್ತಿ ಇದೆ. ಆದರೆ ಕಾಂಗ್ರೆಸ್ ನವರು ಆಫ್ ದ ರೆಕಾರ್ಡ್ 400-500ಕೋಟಿ ಖರ್ಚು ಮಾಡಿದ್ದೀವಿ ಎನ್ನುತ್ತಿದ್ದಾರೆ. ಅಷ್ಟು ಖರ್ಚು ಮಾಡಿ ಗೆಲ್ಲಲೇಬೇಕು ಅನ್ನೋ ಹಠ ಇದೆ’ ಎಂದರು.
ಡಿಕೆಶಿ ವಿರುದ್ಧ ಶತ್ರು ಭೈರವಿ ಯಾಗ
ಡಿಕೆಶಿ ವಿರುದ್ಧ ಶತ್ರು ಭೈರವಿ ಯಾಗ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಈ ಬಗ್ಗೆ ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ.
ಕೇರಳದ ಸಚಿವರು, ದೇವಾಲಯ ಆಡಳಿತ ಮಂಡಳಿ ಆ ರೀತಿ ಯಾವುದೇ ಪೂಜೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಡಿಕೆಶಿ ಅವರನ್ನೇ ಕೇಳಬೇಕು ಎಂದರು.
ನಮ್ಮ ತಾಲೂಕಿನಲ್ಲಿ ಐದುವರೆ ಸಾವಿರ ಪದವೀಧರರು ಇದ್ದಾರೆ. ಹಾಗಾಗಿ ಇಂದು ಸಭೆ ಮಾಡಿ ಎನ್ಡಿಎ ಅಭ್ಯರ್ಥಿ ಗೆಲುವಿನ ಬಗ್ಗೆ ಸಮಾಲೋಚನೆ ಮಾಡ್ತೇವೆ. ಹಿಂದೆಯೂ ಅ.ದೇವೇಗೌಡರು ಪರಿಷತ್ ಸದಸ್ಯರಾಗಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ಈ ಬಾರಿಯೂ ಪದವೀಧರರ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ’ ಎಂದರು.