ಕುಸ್ತಿಪಟು ಭಜರಂಗ್ ಪುನಿಯಾ ಅವರನ್ನು ಅಮಾನತು ಮಾಡಿದೆ. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ ಕುಸ್ತಿಪಟು ಭಜರಂಗ್ ಪುನಿಯಾ ಅವರನ್ನು ಮತ್ತೆ ಅಮಾನತು ಮಾಡಿದೆ.
ಮಾರ್ಚ್ 10 ರಂದು ಸೋನಿಪತ್ನಲ್ಲಿ ನಡೆದ ಟ್ರಯಲ್ಸ್ನಲ್ಲಿ ಆಯ್ಕೆಯಾದ ನಂತರ ಭಜರಂಗ್ ಪುನಿಯಾ ಮೂತ್ರದ ಮಾದರಿಯನ್ನು ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಭವಿಷ್ಯದ ಯಾವುದೇ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಅಮಾನತುಗೊಳಿಸುವ ಆದೇಶವನ್ನು ನಾಡಾ ಹೊರಡಿಸಿದೆ.
ಈ ಅಮಾನತು ನಿರ್ಧಾರ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ.
ಮಾರ್ಚ್ 10 ರಂದು ಸೋನೆಪತ್ನಲ್ಲಿ ನಡೆದ ಆಯ್ಕೆ ಟ್ರಯಲ್ಸ್ನಲ್ಲಿ ಡೋಪ್ ಪರೀಕ್ಷೆಗೆ ಮೂತ್ರದ ಮಾದರಿಯನ್ನು ನೀಡಲು ನಿರಾಕರಿಸಿದ್ದಕ್ಕಾಗಿ ತಾರಾ ಕುಸ್ತಿಪಟುವನ್ನು ನಾಡಾ ಏಪ್ರಿಲ್ 23 ರಂದು ಅಮಾನತುಗೊಳಿಸಿತ್ತು. ಇದನ್ನು ವಾಡಾ ಕೂಡ ಅಂಗೀಕರಿಸಿತ್ತು. ರಾಷ್ಟ್ರೀಯ ಉದ್ದೀಪನ ನಿರೋಧಕ ನಿಯಮಗಳ ಉಲ್ಲಂಘಿಸಿದ್ದು, ತಾತ್ಕಾಲಿಕವಾಗಿ ಕ್ರೀಡೆಯಿಂದ ಅಮಾನತುಗೊಳಿಸಲಾಗಿದೆ ಎಂದು ಬಜರಂಗ್ ಪೂನಿಯಾಗೆ ನಾಡಾ ಅಧಿಕಾರಿಗಳು ಔಪಚಾರಿಕ ಸೂಚನೆ ನೀಡಿದ್ದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಜುಲೈ 11ರ ವರೆಗೆ ಅವಕಾಶ ನೀಡಲಾಗಿದೆ.
ಬಜರಂಗ್ ಅವರು ಡೋಪಿಂಗ್ ಟೆಸ್ಟ್ನಲ್ಲಿ ಭಾಗವಹಿಸದ ಕಾರಣ ಅವರನ್ನು ಒಲಿಂಪಿಕ್ಸ್ ಅರ್ಹತಾ ಟ್ರಯಲ್ಸ್ ಮತ್ತು ಯಾವುದೇ ಪಂದ್ಯಾವಳಿಗಳಲ್ಲಿ ಭಾಗಿಯಾಗದಂತೆ ಅಮಾನತಿನಲ್ಲಿಡಲು ಸೂಚಿಸಲಾಗಿದೆ. ಡೋಪಿಂಗ್ ಪರೀಕ್ಷೆಯಲ್ಲಿ ಭಾಗವಹಿಸಲು