ಸಾಕಷ್ಟು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಮದುವೆಯಾದ ನಾಲ್ಕೇ ನಾಲ್ಕು ವರ್ಷಕ್ಕೆ ದೂರ ದೂರವಾಗಿದ್ದಾರೆ. ಸಮಂತಾರಿಂದ ದೂರವಾದ ನಾಗಚೈತನ್ಯ ಇದೀಗ ನಟಿ ಶೋಭೀತಾ ಜೊತೆ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಕೆಲವೇ ದಿನಗಳಲ್ಲಿ ನಾಗಚೈತನ್ಯ ಹಾಗೂ ಶೋಭೀತಾ ಮದುವೆ ನಡೆಯಲಿದ್ದು ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಇದ್ದ ಸಮಂತಾ ಜೊತೆಗಿನ ಕೊನೇಯ ಫೋಟೋವನ್ನು ಡಿಲೀಟ್ ಮಾಡಿದ್ದಾರೆ.
ನಾಗ ಚೈತನ್ಯ ಮತ್ತು ಸಮಂತಾ ಅವರು ಡಿವೋರ್ಸ್ ಪಡೆದ ನಂತರ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇದ್ದ ಎಲ್ಲ ಫೋಟೋಗಳನ್ನೂ ಡಿಲೀಟ್ ಮಾಡಿದರು. ಆದರೆ ಸಮಂತಾ ಅವರಿಗೆ ಸಂಬಂಧಿಸಿ 3 ಪೋಸ್ಟ್ಗಳು ನಾಗ ಚೈತನ್ಯ ಅವರ ಇನ್ಸ್ಟಾಗ್ರಾಮ್ ವಾಲ್ನಲ್ಲಿ ಹಾಗೆಯೇ ಇತ್ತು. ಒಂದು– ವಿಚ್ಛೇದನ ಘೋಷಿಸಿದ್ದು, ಎರಡು– ಮಜಿಲಿ ಸಿನಿಮಾದ ಪೋಸ್ಟರ್, ಮೂರು– ಸಮಂತಾ ಹಾಗೂ ನಾಗ ಚೈತನ್ಯ ಜೊತೆಯಾಗಿ ರೇಸ್ ಕಾರ್ ಜೊತೆ ನಿಂತಿದ್ದ ಫೋಟೋಗಳಾಗಿದ್ದವು.
ಮೊದಲ ಎರಡು ಫೋಟೋವನ್ನು ನಂತರದ ದಿನಗಳಲ್ಲಿ ನಾಗ ಚೈತನ್ಯ ಅವರು ಡಿಲೀಟ್ ಮಾಡಿದರು. ಆದರೆ ರೇಸ್ ಕಾರ್ ಜೊತೆ ನಿಂತಿದ್ದ ಫೋಟೋವನ್ನು ಅವರು ಡಿಲೀಟ್ ಮಾಡಿರಲಿಲ್ಲ. ಈ ವಿಚಾರವನ್ನು ಇಟ್ಟುಕೊಂಡು ಇತ್ತೀಚೆಗೆ ಸಮಂತಾ ಅವರ ಅಭಿಮಾನಿಗಳು ನಾಗ ಚೈತನ್ಯಗೆ ಕ್ಲಾಸ್ ತೆಗೆದುಕೊಂಡಿದ್ದರು. ‘ಆ ಫೋಟೋವನ್ನು ಡಿಲೀಟ್ ಮಾಡಿ’ ಎಂದು ಒತ್ತಾಯಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಶೋಭಿತಾ ಜೊತೆ ಮದುವೆ ಆಗಲಿರುವ ನಾಗ ಚೈತನ್ಯ ಅವರು ಮಾಜಿ ಪತ್ನಿ ಜೊತೆಗಿನ ಕೊನೆಯ ಫೋಟೋವನ್ನು ಡಿಲೀಟ್ ಮಾಡಿದ್ದಾರೆ.
ಇತ್ತೀಚೆಗೆ ಕೊಂಡ ಸುರೇಖಾ ಅವರು ಸಮಂತಾ ಮತ್ತು ನಾಗಾರ್ಜುನ ಅವರ ಕುಟುಂಬದ ಬಗ್ಗೆ ಕೆಟ್ಟದಾಗಿ ಹೇಳಿಕೆಗಳನ್ನು ನೀಡಿದ್ದರು. ಆ ವಿಚಾರವನ್ನು ಖಂಡಿಸುವ ಸಲುವಾಗಿ ನಾಗ ಚೈತನ್ಯ ಅವರು ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ‘ನನ್ನ ಮಾಜಿ ಪತ್ನಿ’ ಎಂಬ ಪದ ಬಳಕೆ ಮಾಡಿದ್ದರು. ಈ ರೀತಿ ಹೇಳುವ ಬದಲು ನೇರವಾಗಿ ‘ಸಮಂತಾ’ ಅಂತ ಹೇಳಬಹುದಿತ್ತು ಎಂದು ಕೂಡ ನೆಟ್ಟಿಗರು ನಾಗ ಚೈತನ್ಯಗೆ ಕ್ಲಾಸ್ ತೆಗೆದುಕೊಂಡಿದ್ದರು. ಸದ್ಯದಲ್ಲೇ ನಾಗಚೈತನ್ಯ ಹಾಗೂ ಶೋಭೀತಾ ಮದುವೆ ನಡೆಯಲಿದ್ದು ವಧು ಶೋಭೀತಾ ಮನೆಯಲ್ಲಿ ಈಗಾಗಲೇ ಮದುವೆಯ ಮುನ್ನ ಕಾರ್ಯಕ್ರಮಗಳು ಆರಂಭವಾಗಿವೆ.