ನಟಿ ಸಮಂತಾರಿಂದ ದೂರವಾದ ಬಳಿಕ ನಟ ನಾಗಚೈತನ್ಯ ನಟಿ ಶೋಭಿತಾ ಜೊತೆ ಎರಡನೇ ಮದುವೆಯಾಗಿದ್ದಾರೆ. ಡಿಸೆಂಬರ್ 4 ರಂದು ನಾಗಚೈತನ್ಯ ಮತ್ತು ಶೋಭಿತಾ ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದಾರೆ.
ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದ ಈ ವಿವಾಹ ಮಹೋತ್ಸವಕ್ಕೆ ಸಂಬಂಧಿಸಿದ ವೀಡಿಯೊಗಳು ಮತ್ತು ಫೋಟೋಗಳು ಆನ್ಲೈನ್ನಲ್ಲಿ ಟ್ರೆಂಡಿಂಗ್ ಆಗಿವೆ. ಮದುವೆಯಾದ ಬಳಿಕ ಎಲ್ಲೆ ಹೋದರು ನಾಗಚೈತನ್ಯ ಹಾಗೂ ಶೋಭಿತಾ ಸುದ್ದಿಯಾಗ್ತಿದ್ದಾರೆ.
ನಾಗ ಚೈತನ್ಯ-ಶೋಭಿತಾ ಧೂಳಿಪಲ್ಲ ವಿವಾಹ ಸಮಾರಂಭವನ್ನು ಒಟಿಟಿಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ. ನಾಗಚೈತನ್ಯ ಹಾಗೂ ಶೋಭೀತಾ ಮದುವೆಯ ಡಾಕ್ಯುಮೆಂಟ್ನ್ನು ಜನಪ್ರಿಯ OTT ವೇದಿಕೆಯಲ್ಲಿ ಸ್ಟ್ರೀಮ್ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ನಾಗ ಚೈತನ್ಯ ಮತ್ತು ಶೋಭಿತಾ ಅವರ ವಿವಾಹದ ಸಾಕ್ಷ್ಯಚಿತ್ರದ ವೀಡಿಯೊ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗಿದೆ. ಅಕ್ಕಿನೇನಿ ಕುಟುಂಬವು ಈ ವಿಡಿಯೋ ಹಕ್ಕುಗಳಿಗಾಗಿ 50 ಕೋಟಿ ರೂಪಾಯಿಗಳಿಗೆ ಒಪ್ಪಂದ ಮಾಡಿಕೊಂಡಿದೆ ಎಂಬ ಮಾತು ಕೇಳಿಬರುತ್ತಿದೆ.
ನಾಗಚೈತನ್ಯ ನಟನೆಯ ಥಂಡೇಲ್ ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಚಂದೂ ಮೊಂಡೆಟಿ ನಿರ್ದೇಶನದ ಮತ್ತು ಯಶಸ್ವಿ ಮೆಗಾ ನಿರ್ಮಾಪಕ ಅಲ್ಲು ಅರವಿಂದ್ ಪ್ರಸ್ತುತಪಡಿಸಿದ ಈ ಚಿತ್ರವನ್ನು ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬನ್ನಿ ವಾಸು ನಿರ್ಮಿಸಿದ್ದಾರೆ.
ನಾಗ ಚೈತನ್ಯ ಅವರ ವಿವಾಹ ಡಿಸೆಂಬರ್ 4, 2024 ರಂದು ನಡೆಯಿತು. ಕೆಲವೇ ಅತಿಥಿಗಳ ನಡುವೆ ನಡೆದ ಈ ವಿವಾಹ ಸಮಾರಂಭವು ಸಂಭ್ರಮದಿಂದ ನಡೆದಿತ್ತು. ಅದ್ಧೂರಿ ಮದುವೆಗೆ ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು.