ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ವಿಧಾನಸಭಾ ಚುನಾವಣಾ ಕಾವು ರಂಗೇರುತ್ತಿದೆ. ವೋಟ್ ಹಾಕಿ ನಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಬೇಕು ಎಂದುಕೊಂಡಿದ್ದವರಿಗೆ ಶಾಕ್ ಆಗಿದೆ. ಬೆಳ್ಳಂಬೆಳಿಗ್ಗೆ ಮತಗಟ್ಟೆಗೆ ಬಂದರೂ ಲಿಸ್ಟ್ ನಲ್ಲಿ ಮಾತ್ರ ಹೆಸರು ಇಲ್ಲ. ಚೆಕ್ ಮಾಡಿದರೇ ಡಿಲೀಟೆಡ್ ಅಂತ ತೋರಿಸುತ್ತಿದೆ. ವೋಟ್ ಹಾಕಲು ಬಂದವರೂ ಶಾಕ್ ಆಗಿರುವ ಸ್ಟೋರಿ ತೋರಿಸ್ತಿವಿ ನೋಡಿ..
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಮತ ಕೇಂದ್ರದಲ್ಲಿ ಗೊಂದಲ ಉಂಟಾಗಿದೆ. ಹೌದು..ಒಂದೇ ಮತ ಕೇಂದ್ರದಲ್ಲಿ 400 ಕ್ಕೂ ಅಧಿಕ ಮತಗಳು ಡಿಲೀಟ್ ಆಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಯಲ್ಲಿ ಮತಗಳೇ ಡಿಲೀಟ್ ಆಗಿದ್ದು, ಗುರುನಾಥ ನಗರದಲ್ಲಿರುವ ಪ್ರಿಯದರ್ಶಿನಿ ಕಾಲೇಜಿನ ಮತಗಟ್ಟೆಯಲ್ಲಿ ಮತಗಳೇ ಡಿಲೀಟ್ ಆಗಿದ್ದು, ಸಾರ್ವಜನಿಕರು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಇನ್ನೂ ಮತದಾರರ ಪಟ್ಟಿಯಲ್ಲಿ ಬದುಕಿದ್ದವರ ಹೆಸರೇ ಡಿಲೀಟ್ ಆಗಿದ್ದು, ಬದುಕಿದ್ದವರನ್ನೇ ಡಿಲೀಟ್ ಮಾಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಮತಗಳ ಡಿಲೀಟ್ ಆದ ಹಿನ್ನೆಲೆ ಮತದಾರರಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತದಾರರ ಹೆಸರೇ ಡಿಲೀಟ್ ಆಗಿದ್ದು, ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದರು.