ನಮೀಬಿಯಾ: ನಮೀಬಿಯಾದ ಅಧ್ಯಕ್ಷ ಹಗೆ ಜಿಂಗೋಬ್ ಅವರು ಕ್ಯಾನ್ಸರ್ಗೆ ಬರಲಿಯಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿದ್ದು, ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಹಗೆ ಜಿಂಗೋಬ್ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕಚೇರಿ ಘೋಷಣೆ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ಲ್ಲಿ ನಮೀಬಿಯಾ ಅಧ್ಯಕ್ಷರ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು,
ಜಿಂಗೋಬ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಲೇಡಿ ಪೊಹಂಬಾ ವೈದ್ಯಕೀಯ ತಂಡವೂ ಜಿಂಗೋಬ್ ಅವರ ಚೇತರಿಕೆಗಾಗಿ ಸಾಕಷ್ಟು ಪ್ರಯತ್ನಿಸಿತ್ತು. ಆದರೆ ಚಿಕಿತ್ಸೆಫಲಕೊಡದ ಹಿನ್ನೆಲೆಯಲ್ಲಿ ಜಿಂಗೋಬ್ ಪತ್ನಿ ಮೋನಿಕಾ ಜಿಂಗೋಬ್ ಮತ್ತು ಮಕ್ಕಳು ಜೊತೆಗಿದ್ದಾಗಲೇ ನಿಧನರಾದರು ಎಂದು ಈ ಪೋಸ್ಟ್ ಮಾಹಿತಿ ನೀಡಿದೆ.