ಕನ್ನಡದ ಕಿರುತೆರೆ ನಟಿ, ಬಿಗ್ಬಾಸ್ ಸೀಸನ್ 10ರ ಮಾಜಿ ಸ್ಪರ್ಧಿ ನಮ್ರತಾ ಗೌಡ ಫುಲ್ ಗರಂ ಆಗಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಕೆಂಡಾಮಂಡಲರಾಗಿದ್ದಾರೆ.
ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ನಮೃತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಜೊತೆಗೆ ಜಾಹೀರಾತುಗಳಲ್ಲೂ ಮಿಂಚುತ್ತಿದ್ದಾರೆ. ಇಷ್ಟು ದಿನಗಳ ಕಾಲ ತಮ್ಮ ಹೊಸ ಹೊಸ ಲುಕ್ ಗಳ ಫೋಟೋಗಳನ್ನು ಸಾಮಾಜಿಕ ಜಾಲಾ ತಾಣದಲ್ಲಿ ಹಂಚಿಕೊಳ್ಳುತ್ತಿದ್ದ ನಟಿ ಇದೀಗ ಫುಲ್ ಗರಂ ಆಗಿದ್ದಾರೆ. ಅಷ್ಟಕ್ಕೂ ಆಕೆಯ ಕೋಪಕ್ಕೆ ಕಾರಣವಾಗಿರೋದು ಆಕೆಗೆ ಬರುತ್ತಿರುವ ನೆಗೆಟಿವ್ ಫೋಸ್ಟ್ ಗಳು
ನಾನು ಯಾವಾಗಲೂ ಪಾಲಿಸುವುದು ಒಂದೇ, ನೆಗೆಟಿವ್ ಜನರಿಗೆ ನಾನು ಪ್ರಿತಿಕ್ರಿಯೆ ನೀಡುವುದು ಕಡಿಮೆ ಮಾಡಿದರೆ ಶಾಂತಿಯುತವಾಗಿ ಇರಲು ಸಾಧ್ಯ. ಆದರೆ ನಿಮ್ಮ ನಡುವಳಿಕೆ ಮತ್ತು ಆಲೋಚನೆಗಳು ಬೇರೆಯವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅವರಿಗೆ ತೊಂದರೆ ಆಗುವುದು ಗ್ಯಾರೆಂಟಿ ಎಂದು ನಾನು ನಂಬಿದ್ದೀನಿ. ಟ್ರೋಲಿಂಗ್ ಮತ್ತು ಅರ್ಥವಿಲ್ಲದ ವಿಚಾರಕ್ಕೆ ನನ್ನ ಬಗ್ಗೆ ಮಾತನಾಡುವುದನ್ನು ನಾನು ಗಮನಿಸಿಯೂ ಇಷ್ಟು ದಿನ ಸುಮ್ಮನಿದೆ.
ಯಾರೋ ಗೊತ್ತಿಲ್ಲದ ವ್ಯಕ್ತಿಗಳು, ಸೋಷಿಯಲ್ ಮೀಡಿಯಾ ಪೇಜ್ಗಳಲ್ಲಿ ಒಂದು ರಿಯಾಲಿಟಿ ಶೋಯಿಂದ ಬಂದ ಹೆಸರನ್ನು ಇಟ್ಟುಕೊಂಡು ಈಗಲೂ ನನ್ನನ್ನು ಮತ್ತೊಬ್ಬರ ಜೊತೆ ಹೊಲಿಸುತ್ತಿದ್ದಾರೆ. ಈ ವ್ಯಕ್ತಿಗಳಿಗೆ ನನ್ನ ಜೀವನ ಮತ್ತು ನನ್ನ ಜರ್ನಿ ಬಗ್ಗೆ ಏನೂ ಗೊತ್ತಿಲ್ಲ. ನೀವು ಗಮನ ಸೆಳೆಯುವ ಸಲುವಾಗ ಮತ್ತೊಬ್ಬರ ಹೆಸರು ಬಳಸಿಕೊಳ್ಳುವುದು ನಿಮ್ಮ ಸಣ್ಣತನವನ್ನು ತೋರಿಸುತ್ತದೆ. ನೀವು ಮಾಡುತ್ತಿರುವುದನ್ನು ನಂಬಿ ಜನರು ಮೋಸ ಹೋಗುತ್ತಿದ್ದಾರೆ. ಈ ರೀತಿ ಮಾಡುತ್ತಿರುವ ಜಡ್ಜ್ಮೆಂಟ್ಗಳಿಂದ ಕಷ್ಟ ಪಟ್ಟಿಕೊಂಡು ಕಟ್ಟಿರುವ ಸಾಮ್ರಾಜ್ಯವನ್ನು ಸುಲಭವಾಗಿ ನನ್ನ ಜೀವನವನ್ನು ಹಾಳು ಮಾಡುತ್ತಿದ್ದೀರಿ. ಬೇಸರದ ವಿಚಾರ ಏನೆಂದರೆ ಮೀಡಿಯಾ ಜರ್ನಲಿಸ್ಟ್ಗಳು ಸಹ ನನ್ನ ಹೆಸರನ್ನು ಬಳಸಿಕೊಂಡು ಲೇಬಲಿಂಗ್ ಮಾಡಿಕೊಂಡು ಜನರ ಆಲೋಚನೆಯನ್ನು ಬದಲಾಯಿಸುತ್ತಿದ್ದಾರೆ. ಈ ರೀತಿ ಮಾತುಗಳು ಮತ್ತೊಬ್ಬ ಮಹಿಳೆಯಿಂದ ಬರುತ್ತಿದೆ? ನಾವು ನಿಮ್ಮನ್ನು ಮನೋರಂಜಿಸಲು ಒಂದು ರಿಯಾಲಿಟಿ ಶೋಗೆ ಸಹಿ ಮಾಡುತ್ತೀವಿ. ನಿಮ್ಮ ಮುಂದೆ ಒಂದು ಗಂಟೆಗಳ ಕಾಲ ಇರುತ್ತೇವೆ ಅಂದ್ರೆ ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಇಲ್ಲಸಲ್ಲದನ್ನು ಮಾತನಾಡಲು ನಿಮಗೆ ಹಕ್ಕಿಲ್ಲ. ಹೀಗೆ ಮಾಡುವ ಬದಲು ಪಾಸಿಟಿವ್ ಮತ್ತು ಒಳ್ಳೆಯ ವಿಚಾರಗಳನ್ನು ಹಂಚಿ ಸುಮ್ಮನೆ ನಮ್ಮ ಹೆಸರು ಬಳಸಿಕೊಂಡು ನಿಮ್ಮ ಕಂಟೆಂಟ್ ಮಾಡಿಕೊಳ್ಳಬೇಡಿ.
ಇದನ್ನೇ ನೋಡಿದ ಅಭಿಮಾನಿಗಳು ಅಕ್ಕ ನೀವು ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಡಿ, ಯಾರು ಏನೇ ಹೇಳಿದ್ರು ನಿಮ್ಮ ಮೇಲೆ ನಮಗೆಲ್ಲಾ ಗೌರವ ಇದೆ. ಈ ಸೋಷಿಯಲ್ ಮೀಡಿಯಾ ಅನ್ನೋದೆ ಹಾಗೇ ಅಂತ ಕಾಮೆಂಟ್ಸ್ ಹಾಕಿ ನಟಿಗೆ ಧೈರ್ಯ ತುಂಬಿದ್ದಾರೆ.