ನಾಗಿಣಿ ಧಾರವಾಹಿ ಮೂಲಕ ಖ್ಯಾತಿ ಘಳಿಸಿದ ನಟಿ ನಮೃತಾ ಗೌಡ ಬಿಗ್ ಬಾಸ್ ಮನೆಗೆ ಹೋಗಿ ಬಂದ ಬಳಿಕ ಮತ್ತಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ. ನಮ್ರತಾ ಗೌಡ ಅವರ ಸ್ವಭಾವ ತುಂಬಾನೇ ಡಿಫರೆಂಟ್. ಅವರು ಎಲ್ಲರ ಜೊತೆಗೂ ಅಷ್ಟಾಗಿ ಬೆರೆಯುವುದಿಲ್ಲ. ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನವು ಮೈಕಲ್ ಹಾಗೂ ವಿನಯ್ ಜೊತೆ ಮಾತ್ರ ಹೆಚ್ಚು ಅನ್ಯೋನ್ಯವಾಗಿದ್ದರು. ಅವರನ್ನು ಹೆಚ್ಚು ನಂಬುತ್ತಿದ್ದರು. ಉಳಿದವರ ಜೊತೆ ಅವರು ಅಂತರ ಕಾಯ್ದುಕೊಂಡಿದ್ದರು. ನಿಜ ಜೀವನದಲ್ಲೂ ಈಕೆ ಇರೋದೇ ಹೀಗೆ. ಅದಕ್ಕೆ ಇಂಡಸ್ಟ್ರಿಯಲ್ಲಿ ಆದ ಅನುಭವಗಳೇ ಕಾರಣವಂತೆ.
ಬಾಲ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಮ್ರತಾ ಗೌಡ ನಂತರ ನಾಯಕಿ ಆದರು. ‘ನಾಗಿಣಿ 2’ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆ ಪಡೆದರು. ಬಿಗ್ ಬಾಸ್ ಅವರ ಖ್ಯಾತಿಯನ್ನು ಹೆಚ್ಚಿಸಿದೆ. ಈಗ ನಮ್ರತಾ ಅವರು ಬಣ್ಣದ ಲೋಕದ ಪರಿಸ್ಥಿತಿಗಳ ಬಗ್ಗೆ ಮಾತನಾಡಿದ್ದಾರೆ. ಈ ಇಂಡಸ್ಟ್ರಿಯಲ್ಲಿ ಗೆಳೆಯನರನ್ನು ಮಾಡಿಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ನಮ್ರತಾ, ‘ನನ್ನ ಫ್ರೆಂಡ್ಸ್ ಸರ್ಕಲ್ ತುಂಬಾನೇ ಚಿಕ್ಕದು. ಹಾಯ್ ಬಾಯ್ ಅನ್ನೋರು ತುಂಬಾ ಜನ ಇದಾರೆ. ಆದರೆ ಆಪ್ತರು ಅಂತ ಇರೋರು 6-7 ಮಂದಿ ಮಾತ್ರ. ಈ ಇಂಡಸ್ಟ್ರಿ ಫ್ರೆಂಡ್ಸ್ ಮಾಡಿಕೊಳ್ಳೋ ಜಾಗ ಅಲ್ಲ. ನನ್ನ ಕಾಂಪಿಟ್ನ ನೋಡಿದ್ರೆ ನನಗೆ ಇನ್ಸೆಕ್ಯೂರ್ ಅನಿಸಲ್ಲ, ಯಾವಾಗಲೂ ಜಲಸ್ ಫೀಲ್ ಆಗಲ್ಲ. ಆದರೆ, ಎಲ್ಲರಿಗೂ ಇದೇ ರೀತಿ ಆಗುವುದಿಲ್ಲ’ ಎಂದಿದ್ದಾರೆ.
ಯಾವುದೇ ಇಂಡಸ್ಟ್ರಿಗೆ ಹೋದರು ತುಳಿದು ಮೇಲೆ ಬರೋಕೆ ಪ್ರಯತ್ನಿಸುವವರು ಕೆಲವರು ಇರುತ್ತಾರೆ. ಬಣ್ಣದ ಲೋಕದಲ್ಲಿ ಇದು ಸ್ವಲ್ಪ ಹೆಚ್ಚೇ ಇದೆ ಅನ್ನೋದು ಕೆಲವರ ಆರೋಪ. ನಮ್ರತಾ ಗೌಡ ಅವರಿಗೆ ಈ ಬಗ್ಗೆ ಅನುಭವ ಆಗಿದೆ. ‘ಈ ಇಂಡಸ್ಟ್ರಿಯಲ್ಲಿ ತುಳಿದು ಮೇಲಿ ಬರೋಕೆ ನೋಡ್ತಾರೆ. ಅದೆಲ್ಲ ಅನುಭವಿಸಿದ್ದೇನೆ. ಟ್ರ್ಯೂ ಆಗಿ ನನ್ನ ಬೆಂಬಲಿಸುವವರನ್ನು ಮಾತ್ರ ಜೊತೆಯಲ್ಲಿ ಇಟ್ಟುಕೊಳ್ಳುತ್ತೇನೆ. ಎಲ್ಲವನ್ನೂ ಖಾಸಗಿಯಾಗಿ ಇಡುತ್ತೇನೆ’ ಎಂದು ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.