ಬೆಂಗಳೂರು: ಎಲ್ಪಿಜಿ ಗ್ಯಾಸ್, ತರಕಾರಿ,ವಿದ್ಯುತ್ ದರ ಏರಿಕೆ ಆಯಿತು.ಇದೀಗ ಹಾಲು ಕೂಡ ಬಿಸಿಯಾಗ್ತಿದೆ. ಯಸ್ ..ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರೋ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ.ಹೌದು ನಷ್ಟದ ನೆಪವೊಡ್ಡಿ ಹಾಲು ಒಕ್ಕೂಟಗಳು ದರ ಪರಿಷ್ಕರಣೆಗೆ ಮನವಿ ಮಾಡಿದ್ದು, ಗ್ರಾಹಕರಿಗೆ ಕೆಎಂಎಫ್ ಕಹಿ ಸುದ್ದಿ ನೀಡೋಕ್ಕೆ ಮುಂದಾಗಿದ್ದು, ಶೀಘ್ರದಲ್ಲೇ ನಂದಿನಿ ಹಾಲಿನ ದರ ಪರಿಷ್ಕರಣೆಗೆ ಸಿದ್ದತೆ ನಡೆಸಿದೆ.
ಈಗಾಗ್ಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ದಿನನಿತ್ಯ ಉಪಯೋಗಿಸುವ ದವಸ ಧಾನ್ಯ, ತರಕಾರಿ ಬೆಲೆ , ಪೆಟ್ರೋಲ್ , ಡಿಸೇಲ್ , ಗ್ಯಾಸ್ ದರ ಗಗನಕ್ಕೇರುತ್ತಿದೆ.ಇದ್ರ ನಡುವೆ ಕಳೆದ ಕೆಲ ದಿನಗಳ ಹಿಂದೆ ವಿದ್ಯುತ್ ದರ ಪರಿಷ್ಕರಣೆ ಆದ ಬೆನ್ನಲ್ಲೇ ಇದೀಗ ನಂದಿನ ಹಾಲಿನ ದರವೂ ಬೆಲೆ ಏರಿಕೆಯತ್ತ ಸಾಗೋ ಮುನ್ಸೂಚನೆ ಸಿಕ್ಕಿದೆ.
ಹೌದು.. ಹಾಲಿನ ದರ ಪರಿಷ್ಕರಣೆಗೆ ಮುಂದಾಗಿರುವ ಕೆಎಂಎಫ್, ಪ್ರತಿ ಲೀಟರ್ 2 ರೂಪಾಯಿ ಹೆಚ್ಚಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.ರಾಜ್ಯದ 14 ಹಾಲು ಒಕ್ಕೂಟಗಳು ಕೆಎಂಎಫ್ ಮುಂದೆ ಪ್ರತಿ ಲೀಟರ್ಗೆ 5 ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಇಟ್ಟಿವೆ. .ಹೀಗಾಗಿ ದರ ಸಂಬಂಧ ಸಾಧಕ ಬಾದಕಗಳನ್ನ ಪರಿಶೀಲನೆ ಮಾಡಿ ಏರಿಕೆ ಮಾಡಲು ಕೆಎಂಎಫ್ ಮುಂದಾಗಿದೆ. ಈ ಸಂಬಂಧ ಜುಲೈ 6 ರಂದು ಕೆಎಂಎಫ್ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಅಂದೇ ಹಾಲಿನ ದರ ಭವಿಷ್ಯ ನಿರ್ಧಾರವಾಗೋ ಸಾಧ್ಯತೆ ಇದೆ.
ನಿರ್ವಹಣೆ, ಉತ್ಪಾದನಾ ವೆಚ್ಚ, ನೌಕರರ ಸಂಬಳ, ಸಾಗಾಣಿಕಾ ವೆಚ್ಚ ಹೆಚ್ಚಿದ ಹಿನ್ನಲೆಯಲ್ಲಿ ಹಾಲು ಒಕ್ಕೂಟಗಳು ದರ ಹೆಚ್ಚಳಕ್ಕೆ ಮನವಿ ಮಾಡಿವೆ. ಕಳೆದ ಕೆಲ ತಿಂಗಳ ಹಿಂದೆ 2 ರೂ ಕೆಎಂಎಫ್ ದರ ಪರಿಷ್ಕರಣೆ ಮಾಡಿತ್ತು. ಆದರೆ ಈ ಬಾರಿ ಗ್ರಾಹಕರಿಗೆ ಹೊರೆಯಾಗದಂತೆ ದರ ಪರಿಷ್ಕರಣೆ ಮುಂದಾಗಿದೆ. ರಾಜ್ಯ ಸರ್ಕಾರದಿಂದ ಅಂಕಿತ ಸಿಕ್ಕದ್ದ ಕೂಡಲೇ ದರ ಪರಿಷ್ಕರಣೆ ಪ್ರಕಟ ,ಮಾಡಲು ಕೆಎಂಎಫ್ ಮುಂದಾಗಿದೆ.
ಒಟ್ಟಿನಲ್ಲಿ ದುಬಾರಿ ದುನಿಯಾದಲ್ಲಿ ಜನ ಜೀವನ ಮಾಡೋಕೆ ಆಗುತ್ತಿಲ್ಲ. ಇದರ ಮಧ್ಯೆ ಇದೀಗ ಜನರಿಗೆ ಹಾಲಿನ ದರ ಏರಿಕೆಯ ಶಾಕ್ ಎದುರಾಗಿದೆ. ಪೆಟ್ರೋಲ್ ಡೀಸೆಲ್, ಗ್ಯಾಸ್, ತರಕಾರಿ, ವಿದ್ಯುತ್ ಬಿಲ್ ಬಿಲ್ ರೇಟ್ ಬಳಿಕ ಇದೀಗ ಹಾಲಿನ ದರವೂ ಸಾಮಾನ್ಯ ಜನರ ನಿದ್ದೆಗೆಡಿಸಿದೆ..