ಬೆಂಗಳೂರು ;- ಮಾಜಿ ಶಾಸಕ ನಂದೀಶ್ ರೆಡ್ಡಿ ಅವರು ರಾಜಕಾಲುವೆ ಒತ್ತುವರಿ ತೆರವಿಗೆ ಅಡ್ಡಿಪಡಿಸಿರುವ ಆರೋಪ ಕೇಳಿ ಬಂದಿದ್ದು, ಹೀಗಾಗಿ ನಂದೀಶ್ ರೆಡ್ಡಿ ವಿರುದ್ಧ ದೂರು ನೀಡಲು ಬಿಬಿಎಂಪಿ ಮುಂದಾಗಿದೆ.
ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಮಾಜಿ ಶಾಸಕ ನಂದೀಶ್ ರೆಡ್ಡಿ ವಿರುದ್ಧ ದೂರು ನೀಡಲು ಸೂಚಿಸಿದ್ದೇನೆ. ಮಹದೇವಪುರ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಿದ್ದೇನೆ. ಕಾರ್ಯಾಚರಣೆಗೆ ಯಾರೇ ಅಡ್ಡಿಪಡಿಸಿದರೂ ದೂರು ದಾಖಲಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ನಿನ್ನೆ ಮಹದೇವಪುರ ವಲಯ ದೊಡ್ಡನೆಕ್ಕುಂದಿಯ 24/1,3,4 ಫರ್ನ್ ಸಿಟಿ ಬಡಾವಣೆಯ ವಿಲ್ಲಾದಲ್ಲಿ ಒತ್ತುವರಿ ಮಾಡಿಕೊಂಡಿರುವ ಐಶಾರಾಮಿ ಕ್ಲಬ್ ಹೌಸ್ ಮತ್ತು ಈಜುಕೊಳ ತೆರವು ಕಾರ್ಯಚರಣೆ ವೇಳೆ ನಿವಾಸಿಗಳು ಹಾಗೂ ಮಾಜಿ ಶಾಸಕ ನಂದೀಶ್ ರೆಡ್ಡಿ ಜೆಸಿಬಿ ಕೀ ಕಿತ್ತುಕೊಂಡು ತೆರವಿಗೆ ಅಡ್ಡಿಪಡಿಸಿದ್ದರು. ಹೀಗಾಗಿ ಬಿಬಿಂಪಿ ದೂರು ದಾಖಿಸಲು ಮುಂದಾಗಿದೆ.