ಭಾರತದ ಪ್ರಧಾನಿ ನರೇಂದ್ರ ಮೋದಿ ನೊಬೆಲ್ ಶಾಂತಿ ಪ್ರಶಸ್ತಿಯ ಪ್ರಮುಖ ಸ್ಪರ್ಧಿ ಎಂಬ ಮಾಧ್ಯಮ ವರದಿಯನ್ನು ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕ ಅಸ್ಲೆ ಟೋಜೆ ತಳ್ಳಿಹಾಕಿದ್ದಾರೆ.
ಭಾರತಕ್ಕೆ ಭೇಟಿ ನೀಡಿರುವ ಟೋಜೆ, ಪ್ರಧಾನಿ ನರೇಂದ್ರ ಮೋದಿ ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಮುಖ ಸ್ಪರ್ಧಿ ಎಂದು ಹೇಳಿರುವುದಾಗಿ ಮಾಧ್ಯಮಗಳ ವರದಿ ಮತ್ತು ಟ್ವೀಟ್ ವೈರಲ್ ಆದ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಟೋಜೆ, ನಾನು ಗೌರವಾನ್ವಿತ ಸಮಿತಿಯ ಉಪ ನಾಯಕನಾಗಿ ಭಾರತಕ್ಕೆ ಬಂದಿಲ್ಲ, ಆದರೆ ಇಂಟರ್ ನ್ಯಾಷನಲ್ ಪೀಸ್ ಆಂಡ್ ಅಂಡರ್ಸ್ಟ್ಯಾಂಡಿಗ್ ನಿರ್ದೇಶಕರಾಗಿ ಮತ್ತು ಇಂಡಿಯಾ ಸೆಂಟರ್ ಫೌಂಡೇಶನ್ ನ ಸ್ನೇಹಿತನಾಗಿ ಭಾರತದಲ್ಲಿದ್ದೇನೆ. ನಕಲಿ ಸುದ್ದಿ ಟ್ವೀಟ್ನ್ನು ನಕಲಿ ಸುದ್ದಿ ಎಂದು ಪರಿಗಣಿಸಬೇಕು ಎಂದು ಹೇಳಿದರು.
ಆದಾಗ್ಯೂ ‘ಇದು ಯುದ್ಧದ ಯುಗವಲ್ಲ’ ಎಂದು ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಹೇಳಿದ್ದನ್ನು ಟೋಜೆ ಶ್ಲಾಘಿಸಿದ್ದಾರೆ.’ಇದು ಯುದ್ಧದ ಯುಗವಲ್ಲ’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಭರವಸೆಯ ಅಭಿವ್ಯಕ್ತಿಯಾಗಿದೆ. ಇಂದು ನಾವು ವಿಶ್ವ ವಿವಾದಗಳನ್ನು ಹೀಗೆಯೇ ಪರಿಹರಿಸಬಾರದು ಎಂಬ ಸಂಕೇತವನ್ನು ಭಾರತ ನೀಡಿದೆ. ಪ್ರಧಾನಿ ಮೋದಿ ಅವರ ಹಿಂದೆ ವಿಶ್ವದ ಜನಸಂಖ್ಯೆಯ ಬಹುಪಾಲು ಜನರಿದ್ದಾರೆ ಎಂದು ಟೋಜೆ ಹೇಳಿರುವುದಾಗಿ ಎಎನ್ಐ ಉಲ್ಲೇಖಿಸಿದೆ.