ಕಳೆದ ಕೆಲ ದಿನಗಳಿಂದ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಡಿವೋರ್ಸ್ ಕಾರಣಕ್ಕೆ ಸಖತ್ ಸುದ್ದಿಯಾಗ್ತಿದ್ದಾರೆ. ಕಳೆದ ಒಂದು ವಾರದಿಂದ ಎಲ್ಲಿ ನೋಡಿದ್ರು ಈ ಜೋಡಿಯ ವಿಚ್ಚೇದನದ ಸುದ್ದಿಯೇ ಹರಿದಾಡುತ್ತಿದೆ.ಆದರೆ ಇದೀಗ ಏಕಾ ಏಕಿ ನತಾಶಾ ನಡೆ ಇದೆಲ್ಲಾ ಕೇವಲ ಪಬ್ಲಿಸಿಟಿಗಾ ಅನ್ನೋ ಅನುಮಾನ ಹುಟ್ಟುವಂತೆ ಮಾಡಿದೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಡಿವೋರ್ಸ್, ಬ್ರೇಕ್ ಅಪ್ ಆದಾಗ ತಮ್ಮ ಸಂಗಾತಿಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಿಂದ ಡಿಲೀಟ್ ಮಾಡುತ್ತಾರೆ. ಅಂತೆಯೇ ನತಾಶ ಕೂಡ ತಮ್ಮ ಸಾಮಾಜಿಕ ಜಾಲಾ ತಾಣದಿಂದ ಮದುವೆಯ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಅಂತೆಯೇ ನತಾಶಾ ಕೂಡ ತಮ್ಮ ಮದುವೆ ಫೋಟೋಗಳನ್ನು ಡಿಲೀಟ್ ಮಾಡಿದ್ದರು.
ನತಾಶಾ ಮದುವೆ ಫೋಟೋ ಡಿಲೀಟ್ ಮಾಡಿದಾಗಿನಿಂದಲೇ ಡಿವೋರ್ಸ್ ಬಗ್ಗೆ ಸಾಕಷ್ಟು ಚರ್ಚೆ ಶುರುವಾಯಿತು. ಈ ದಂಪತಿ ಇನ್ನು ಜೊತೆಗಿರುವುದಿಲ್ಲ ಎಂದೇ ಹೇಳಲಾಗಿತ್ತು. ಆದರೆ ಈ ಬಗ್ಗೆ ಇಬ್ಬರು ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ.
ಆದರೆ ಈಗ ನತಾಶಾ ಅವರು ಹಾರ್ದಿಕ್ ಪಾಂಡ್ಯ ಜೊತೆಗಿನ ಮದುವೆ ಫೋಟೋಗಳನ್ನು ರೀಸ್ಟೋರ್ ಮಾಡಿದ್ದಾರೆ. ಈ ಮೂಲಕ ಎಲ್ಲಾ ಡಿವೋರ್ಸ್ ವದಂತಿಗಳಿಗೆ ನತಾಶಾ ಬ್ರೇಕ್ ಹಾಕಿದ್ದಾರೆ. ಸದ್ಯ ಈ ಸುದ್ದಿ ವೈರಲ್ ಆಗಿದ್ದು ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.
ಸದ್ಯ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಡಿವೋರ್ಸ್ ಸುದ್ದಿ ಸಿಕ್ಕಾಪಟ್ಟೆ ಹೈಲೈಟ್ ಆಗುತ್ತಿದೆ. ಅವರಿಬ್ಬರು ಬೇರೆಯಾಗುತ್ತಾರೆಂಬ ವದಂತಿ ಬೆನ್ನಲ್ಲಿಯೇ ನಟಿ ನತಾಶಾ ಅವರು ದಿಶಾ ಪಠಾನಿಯ ರೂಮರ್ಡ್ ಬಾಯ್ಫ್ರೆಂಡ್ ಜೊತೆ ಕಾಣಿಸಿಕೊಂಡು ಈಗ ಸುದ್ದಿಯಾಗಿದ್ದಾರೆ. ಅವರ ಫೊಟೋಗಳು ಕೂಡಾ ವೈರಲ್ ಆಗಿದ್ದವು.
ದಿಶಾ ಪಠಾನಿಯ ರೂಮರ್ಡ್ ಬಾಯ್ಫ್ರೆಂಡ್ ಅಲೆಕ್ಸಾಂಡರ್ ಅಲೆಕ್ಸ್ಲಿಕ್ ಜೊತೆ ನತಾಶಾ ಸ್ಟಾಂಕೋವಿಕ್ ಕಾಣಿಸಿಕೊಂಡಿದ್ದಾರೆ. ನತಾಶಾ ಫುಲ್ ಸ್ಟೈಲಾಗಿ ಹೊರಗಡೆ ಡೇಟ್ ಎಂಜಾಯ್ ಮಾಡುತ್ತಿರುವುದು ಕಂಡುಬಂತು. ಕ್ರಿಕೆಟರ್ ಪತಿ ಹಾರ್ದಿಕ್ ಪಾಂಡ್ಯ ಅವರ ಜೊತೆ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿಗಳ ಮಧ್ಯೆ ಅಲೆಕ್ಸಾಂಡರ್ ಜೊತೆಗಿನ ಫೋಟೋಗಳು ವೈರಲ್ ಆಗಿದ್ದವು.
ಇವರಿಗೆ ಅಗಸ್ತ್ಯ ಪಾಂಡ್ಯ ಎಂಬ 3 ವರ್ಷದ ಮಗನಿದ್ದಾನೆ. ನತಾಶಾ ಸೋಷಿಯಲ್ ಮೀಡಿಯಾ ಹ್ಯಾಂಡಲ್ನಿಂದ ‘ಪಾಂಡ್ಯ’ ಸರ್ ನೇಮ್ ತೆಗೆದುಹಾಕಿದ ಬಳಿಕ ಡಿವೋರ್ಸ್ ವದಂತಿಗಳು ಶುರುವಾಯಿತು.
ಆದರೆ ಇಬ್ಬರೂ ಇನ್ಸ್ಟಾಗ್ರಾಂ ಸ್ಟೋರಿಗಳಲ್ಲಿ ಪರಸ್ಪರ ಪೋಸ್ಟ್ ಮಾಡುತ್ತಿಲ್ಲ. ಈ ಹಿಂದೆ ನತಾಶಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ನತಾಶಾ ಸ್ಟಾಂಕೋವಿಕ್ ಪಾಂಡ್ಯ ಎಂದು ಹೆಸರು ಇಟ್ಟಿದ್ದರು. ಆದರೆ ಈಗ ಅವರು ಅವನ ಹೆಸರನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದಾರೆ.
ಅವರ ಬರ್ತ್ಡೇ ಮಾರ್ಚ್ 4 ರಂದು ಆ ದಿನ ಹಾರ್ದಿಕ್ ಅವರಿಂದ ಯಾವುದೇ ಪೋಸ್ಟ್ ಇರಲಿಲ್ಲ. ಅವರು ಅಗಸ್ತ್ಯ ಅವರೊಂದಿಗೆ ಇದ್ದ ಪೋಸ್ಟ್ ಅನ್ನು ಹೊರತುಪಡಿಸಿ ಆಕೆಯ ಮತ್ತು ಹಾರ್ದಿಕ್ ಅವರ ಎಲ್ಲಾ ಇತ್ತೀಚಿನ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೆ, ಅವರು ಈ ಐಪಿಎಲ್ ಸ್ಟ್ಯಾಂಡ್ಗಳಲ್ಲಿ ಕಾಣಿಸಿಕೊಂಡಿಲ್ಲ. ಕ್ರಿಕೆಟ್ ಅಥವಾ ತಂಡದ ಬಗ್ಗೆ ಸ್ಟೋರಿಯನ್ನು ಪೋಸ್ಟ್ ಮಾಡಿರಲಿಲ್ಲ. ಇವೆಲ್ಲವು ಇಬ್ಬರು ಮಧ್ಯೆ ಎಲ್ಲವೂ ಸರಿ ಇಲ್ಲ ಅನ್ನೋದನ್ನು ತಿಳಿಸಿತ್ತು.