ನವದೆಹಲಿ ;- ದೇಶದಾದ್ಯಂತ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ಕೈಗೊಳ್ಳುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.
ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ವೀರ ಯೋಧರನ್ನು ಗೌರವಿಸಲು ದೇಶದಾದ್ಯಂತ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ಕೈಗೊಳ್ಳುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಮನ್ ಕಿ ಬಾತ್’ ಬಾನುಲಿ ಭಾಷಣದ 103 ನೇ ಸಂಚಿಕೆಯಲ್ಲಿ ಭಾಷಣ ಮಾಡಿದ ಪ್ರಧಾನಿ, ದೇಶದ ನಿಜವಾದ ಹೀರೋಗಳ ಬಗ್ಗೆ ಜನರಲ್ಲಿ ಅಭಿಮಾನ ಮೂಡಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಶಿಲಾ ಶಾಸನಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ದೇಶದ ಭದ್ರತೆಗಾಗಿ ಹೋರಾಡಿ ಹುತಾತ್ಮರಾದ ವೀರ ಯೋಧರ ಗೌರವಾರ್ಥ ‘ಮೇರಿ ಮಾಟಿ ಮೇರಾ ದೇಶ್’ ಅಭಿಯಾನ ನಡೆಸಲಾಗುವುದು. ದೇಶದ ಮೂಲೆ ಮೂಲೆಯಿಂದ 7,500 ಕಲಶಗಳ ಮೂಲಕ ಮಣ್ಣು ತರುವ ಅಮೃತ ಕಲಶ ಯಾತ್ರೆ ಕೈಗೊಳ್ಳಲಾಗುವುದು. ಯಾತ್ರೆ ಸಂದರ್ಭದಲ್ಲೇ ನಾನಾ ಪ್ರದೇಶಗಳಿಂದ ವಿವಿಧ ಬಗೆಯ ಸಸಿಗಳನ್ನು ತರಲಿದ್ದು, ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ಅಮೃತ ವಾಟಿಕಾ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.